AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಭೀಕರ ಬರ, ಕೂಲಿಗಾಗಿ ಜನರ ಪರದಾಟ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಜನರ ಆಗ್ರಹ

ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿ ತಮಗೆ ಕೂಲಿ ಕೆಲಸ ನೀಡಬೇಕು ಅಂತ ಕೇಳ್ತಿರುವ ಜನ, ಇನ್ನೊಂದಡೆ ಕೂಲಿ ಕೆಲಸವಿಲ್ಲದೇ ಇರೋದರಿದಂದ ಖಾಲಿ ಕೂತಿರುವ ಜನರು. ಇದು ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿನ ಸಮಸ್ಯೆ.

ಕೊಪ್ಪಳ: ಭೀಕರ ಬರ, ಕೂಲಿಗಾಗಿ ಜನರ ಪರದಾಟ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಜನರ ಆಗ್ರಹ
ಕೊಪ್ಪಳ: ಭೀಕರ ಬರ, ಕೂಲಿಗಾಗಿ ಜನರ ಪರದಾಟ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಜನರ ಆಗ್ರಹ
ಸಂಜಯ್ಯಾ ಚಿಕ್ಕಮಠ
| Edited By: |

Updated on: Nov 16, 2023 | 9:44 PM

Share

ಕೊಪ್ಪಳ, ನವೆಂಬರ್ 16: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಇದೇ ಸಮಯದಲ್ಲಿ ಗ್ರಾಮೀಣ ಬಾಗದ ಜನ ಕೂಲಿ ಕೆಲಸ ಸಿಗದೇ ಕಂಗಾಲಾಗುತ್ತಿದ್ದಾರೆ. ಇತ್ತ ಕೃಷಿ ಕೆಲಸವು ಇಲ್ಲ, ಮತ್ತೊಂದಡೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸವು ಸಿಗ್ತಿಲ್ಲ. ಗ್ರಾಮ ಪಂಚಾಯತ್ ಅಧಿಕಾರಿಗಳು ಕಾರ್ಮಿಕರಿಗೆ ಉದ್ಯೋಗ ನೀಡದೆ ಚೆಲ್ಲಾಟವಾಡುತ್ತಿದ್ದಾರೆ. ಇದರ ನಡುವೆ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಇಬ್ಬರ ನಡುವಿನ ಗುದ್ದಾಟದಲ್ಲಿ ಕೂಲಿಕಾರರು ತೊಂದರೆಗೆ ಸಿಲುಕಿದ್ದಾರೆ.

ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿ ತಮಗೆ ಕೂಲಿ ಕೆಲಸ ನೀಡಬೇಕು ಅಂತ ಕೇಳ್ತಿರುವ ಜನ, ಇನ್ನೊಂದಡೆ ಕೂಲಿ ಕೆಲಸವಿಲ್ಲದೇ ಇರೋದರಿದಂದ ಖಾಲಿ ಕೂತಿರುವ ಜನರು. ಇದು ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿನ ಸಮಸ್ಯೆ.

ಹೌದು ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು, ಡಿಸೆಂಬರ್ ಅಂತ್ಯದವರಗೆ ಹೆಚ್ಚು ಕೃಷಿ ಕೆಲಸಗಳನ್ನು ಮಾಡುತ್ತಿದ್ದರು. ತಮ್ಮ ಜಮೀನುಗಳಲ್ಲದೇ ಗ್ರಾಮದ ಅನೇಕರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದ್ರೆ ಬರಗಾಲದಿಂದಾಗಿ ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಬಂದ ಆಗಿವೆ. ಭೂಮಿಯಲ್ಲಿ ಸರಿಯಾಗಿ ಬೆಳೆಯೇ ಇಲ್ಲದೇ ಇರೋದರಿಂದ ಕೂಲಿ ಕೆಲಸ ಬಹುತೇಕರಿಗೆ ಸಿಗ್ತಿಲ್ಲಾ. ಹೀಗಾಗಿ ಹೆಚ್ಚಿನ ಜನರು ನೆಚ್ಚಿಕೊಂಡಿರುವದು ಉದ್ಯೋಗ ಖಾತ್ರಿ ಯೋಜನೆಯನ್ನು. ಆದ್ರೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವೇ ಸಿಗ್ತಿಲ್ಲಾ. ಇದು ಕೂಲಿ ಕಾರ್ಮಿಕರ ಬದುಕನ್ನು ದುಸ್ಥಿತಿಗೆ ತಂದಿದೆ. ಹೌದು ಹೆಚ್ಚಿನ ಕೂಲಿ ಕಾರ್ಮಿಕರು, ಕೂಲಿ ನಂಬಿಯೇ ಜೀವನ ನಡೆಸುತ್ತಿದ್ದಾರೆ. ಇಂತಹ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಸಾಕಷ್ಟು ವರದಾನವನ್ನು ನೀಡಿತ್ತು. ಆದ್ರೆ ಈ ಬಾರಿ ಸರಿಯಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಸಿಗ್ತಿಲ್ಲಾ. ಕೇಳಿದ್ರೆ ಈ ವಾರ ಕೊಡ್ತೇವೆ, ಮುಂದಿನ ವಾರ ಕೊಡ್ತೇವೆ ಅಂತ ಗ್ರಾಮ ಪಂಚಾಯತ್ ಅಧಿಕಾರಿಗಳು ಹೇಳ್ತಿದ್ದಾರೆ. ಹೀಗಾಗಿ ತಾವು ಜೀವನ ನಡೆಸೋದು ಹೇಗೆ ಅಂತಿದ್ದಾರೆ ಕೂಲಿ ಕಾರ್ಮಿಕರು. ತಮಗೆ ತಮ್ಮೂರಲ್ಲಿ ಕೆಲಸ ಸಿಗದೇ ಇದ್ರೆ ನಾವು ದೂರದ ಬೆಂಗಳೂರು, ಮುಂಬೈ ಗೆ ಕೂಲಿ ಅರಸಿಕೊಂಡು ಗುಳೆ ಹೋಗಬೇಕಾದುತ್ತದೆ.ಹೀಗಾಗಿ ಕೂಡಲೇ ತಮಗೆ ಸಮರ್ಪಕವಾಗಿ ಕೂಲಿ ಕೆಲಸ ನೀಡಬೇಕು ಅಂತ ಆಗ್ರಹಿಸುತ್ತಿದ್ದಾರೆ.

ಕೂಲಿ ಕಾರ್ಮಿಕರಿಗೆ ಅನಕೂಲವಾಗಲಿ ಅನ್ನೋ ಉದ್ದೇಶದಿಂದಲೇ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ, ವ್ಯಕ್ತಿಗೆ ವರ್ಷದಲ್ಲಿ ನೂರು ದಿನಗಳ ಕಾಲ ಕೆಲಸವನ್ನು ನೀಡಬೇಕು. ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 316 ರೂಪಾಯಿ ಹಣವನ್ನು ನೀಡಲಾಗುತ್ತದೆ. ಆದ್ರೆ ಈ ಬಾರಿ ಸರಿಯಾಗಿ ಕೆಲಸವೇ ಕಾರ್ಮಿಕರಿಗೆ ಸಿಗ್ತಿಲ್ಲಾ. ಇನ್ನು ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಗುದ್ದಾಟಕ್ಕೆ ಕೂಡಾ ಕಾರಣವಾಗಿದೆ. ಹೌದು ಬರಗಾಲದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ದಿನಗಳನ್ನು ನೂರರಿಂದ ನೂರಾ ಐವತ್ತಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸಬೇಕು. ಈ ಬಗ್ಗೆ ರಾಜ್ಯ ಗ್ರಾಮೀಣಾಭಿವೃದ್ದಿ ಇಲಾಖೆ, ಕೇಂದ್ರ ಸರ್ಕಾರಕ್ಕೆ ಅನೇಕ ದಿನಗಳ ಹಿಂದೆಯೇ ಪತ್ರ ಬರೆದಿದೆ. ಬರಗಾಲ ಘೋಷಣೆಯಾದ್ರೆ ಸಹಜವಾಗಿ ಕೂಲಿ ದಿನಗಳನ್ನು ಕೇಂದ್ರ ಸರ್ಕಾರ ಹೆಚ್ಚಿಸಬೇಕು. ಆದ್ರೆ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ದಿನಗಳನ್ನು ಹೆಚ್ಚಿಸುತ್ತಿಲ್ಲಾ ಅಂತ ರಾಜ್ಯ ಸರ್ಕಾರ ಆರೋಪಿಸುತ್ತಿದೆ.

ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ‌ಸಚಿವ ಶಿವರಾಜ್ ತಂಗಡಗಿ ಆಕ್ರೋಶ; ಇಲ್ಲಿದೆ ವಿಡಿಯೋ

ಕೊಪ್ಪಳದಲ್ಲಿ ಎಪ್ಪತ್ತೈದರಿಂದ ತೊಂಬತ್ತು ದಿನಗಳ ಕೂಲಿ ಕೆಲಸವನ್ನು ಇಪ್ಪತ್ತಾರು ಸಾವಿರ ಕುಟುಂಬಗಳು ಪೂರೈಸಿವೆ. 38 ಸಾವಿರ ಕುಟುಂಬಗಳು ಕನಿಷ್ಟ ಐವತ್ತು ದಿನಗಳ ಕಾಲ ಕೂಲಿ ಕೆಲಸ ಮಾಡಿವೆ. ಶೇಕಡಾ ಎಂಬತ್ತರಷ್ಟು ಕುಟುಂಬಗಳು ನೂರು ದಿನಗಳ ಕಾಲ ಕೂಲಿ ಕೆಲಸ ಮಾಡಿವೆ. ಅವರಿಗೆ ನೂರಾ ಐವತ್ತು ದಿನಗಳ ಕಾಲ ಕೂಲಿ ಕೆಲಸ ನೀಡಿದ್ರೆ ಅನಕೂಲವಾಗುತ್ತದೆ. ಆದ್ರೆ ಕೇಂದ್ರ ಸರ್ಕಾರ ಕೂಲಿ ದಿನಗಳನ್ನು ಹೆಚ್ಚಿಸುತ್ತಿಲ್ಲಾ ಅಂತ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಆರೋಪಿಸುತ್ತಿದ್ದಾರೆ.

ಕೂಲಿ ಕಾರ್ಮಿಕರಿಗೆ ವರಧಾನವಾಗಿದ್ದ ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ಅನುಷ್ಟಾವಾಗುತ್ತಿಲ್ಲಾ. ಇನ್ನೊಂದಡೆ ಕೇಂದ್ರ ಸರ್ಕಾರ ಕೂಲಿ ಕೆಲಸದ ದಿನಗಳನ್ನು ಹೆಚ್ಚಿಸುತ್ತಿಲ್ಲಾ. ಅಧಿಕಾರಿಗಳು ಮತ್ತು ಸರ್ಕಾರಗಳ ನಡುವಿನ ಗುದ್ದಾಟ ಕಾರ್ಮಿಕರ ಕೆಲಸಕ್ಕೆ ಪೆಟ್ಟು ನೀಡ್ತಿರುವದು ಮಾತ್ರ ನಿಜ. ಇದರಿಂದ ಕಾರ್ಮಿಕರ ಬದುಕು ಬೀದಿಗೆ ಬೀಳುತ್ತದೆ. ಹೀಗಾಗಿ ಕಾರ್ಮಿಕರಿಗೆ ಸರಿಯಾಗಿ ಕೆಲಸ ಸಿಗುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ, ಅಧಿಕಾರಿಗಳು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಂಜಯ್ಯಾ ಚಿಕ್ಕಮಠ
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್