ಗಂಡಸ್ಥನ ಇದ್ರೆ ಶೆಟ್ಟರ್ ನಿವಾಸದ ಮುಂದೆ ಫೋಟೋಗೆ ಬೆಂಕಿ ಹಚ್ಚಿ ನೋಡೋಣ: ಬಣಜಿಗ ನಾಯಕರಿಗೆ ಯತ್ನಾಳ್ ಸವಾಲ್
ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಕಡೆಗಣಿಸಲು ಆಗುವುದಿಲ್ಲ. ಯಾರೇ ಮುಖ್ಯಮಂತ್ರಿ ಆಗಬೇಕೆಂದ್ರು ಪಂಚಮಸಾಲಿ ಆಶೀರ್ವಾದ ಬೇಕು ಎಂದು ಕೊಪ್ಪಳದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕೊಪ್ಪಳ: ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಕಡೆಗಣಿಸಲು ಆಗುವುದಿಲ್ಲ. ಯಾರೇ ಮುಖ್ಯಮಂತ್ರಿ ಆಗಬೇಕೆಂದ್ರು ಪಂಚಮಸಾಲಿ (Panchamasali) ಆಶೀರ್ವಾದ ಬೇಕು ಎಂದು ಕೊಪ್ಪಳದಲ್ಲಿ (Koppal) ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basavanagowda Patil yatnal) ಹೇಳಿದ್ದಾರೆ.
ಜಿಲ್ಲೆಯ ಕುಕನೂರು ತಾಲೂಕಿನ ಮುಧೋಳ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ಎಸ್ಟಿ ಮೀಸಲಾತಿಗಾಗಿ ಸದನದಲ್ಲಿ ಮೊದಲು ಧ್ವನಿ ಎತ್ತಿದ್ದೇನೆ. ಈವಾಗ ಕೆಲವರು ನಾನು ಕೊಡಿಸಿದ್ದು ನಾನು ಕೊಡಿಸಿದ್ದು ಅಂತಿದ್ದಾರೆ. ನಾನು ಎಲ್ಲ ಜಾತಿಗಳ ಮೀಸಲಾತಿಗಾಗಿ ಆಗ್ರಹಿಸಿದ್ದೇನೆ. ನಮ್ಮ ಜಾತಿಯನ್ನು ಕೇವಲ ಮಂತ್ರಿಗಿರಿ ಪಡೆಯಲು ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ ವಾಗ್ದಾಳಿ
ಒಬ್ಬ ಸ್ವಾಮಿ ನಮ್ಮ ಜೊತೆ ಪಾದಯಾತ್ರೆಗೆ ಬಂದಿದ್ದ. ಬ್ರೋಕರ್ ಸ್ವಾಮಿ ಬೆಂಗಳೂರಲ್ಲಿ ನಮ್ಮ ಕಾರ್ಯಕ್ರಮ ಆಗದಂತೆ ನೋಡುತ್ತೇನೆ ಅಂದಿದ್ದ. ಎಲ್ಲಾ ಮುಗಿದು ನಮ್ಮ ಹೋರಾಟ ಒಂದು ಹಂತಕ್ಕೆ ಬಂದಿದೆ. ಡಿ.19ರಂದು ಸಿಎಂ ಬೊಮ್ಮಾಯಿ ನಮಗೆ ಮೀಸಲಾತಿ ಕೊಡಬೇಕು, ಕೊಡುತ್ತಾರೆ. ಅದು ಗೊತ್ತಾಗಿ ಹುಚ್ಚ ಸ್ವಾಮಿ ಜಾಗೃತ ಸಭೆ ಮಾಡುತ್ತಾನೆ ಎಂದು ವಾಗ್ದಾಳಿ ಮಾಡಿದರು.
ನಮ್ಮ ಸ್ವಾಮೀಜಿ ಮಠ ನೋಡಿ ಬನ್ನಿ ಹೆಂಗದ ಅಂತ. ಅವರ ಕೋಣೆಯಲ್ಲಿನ ಫ್ಯಾನ್ ಗಡ ಗಡ ಅನ್ನುತ್ತೆ. ಆದರೆ ನಮ್ಮಂವ ಇನ್ನೊಬ್ಬ ಸ್ವಾಮಿ ಇದ್ದಾನೆ. ಅವನು ಕೂಡೋ ಖುರ್ಚಿ ಸಿಂಹಾಸನ. ಎರಡೂ ಕಡೆ ಹುಲಿ ಅದಾವೋ ಇಲಿ ಅದಾವೋ. ಅವನ ಮಠದಲ್ಲಿ ಬಾತ್ ಟಬ್ ಇದೆ ಎಂದು ತಿಳಿಸಿದರು.
ಮೀಸಲಾತಿ ನೀಡಲು ಮುಖ್ಯಮಂತ್ರಿಗಳಿಗೆ, ಯತ್ನಾಳ ಗಡುವು
ಡಿಸೆಂಬರ್ 19ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮಗೆ ಮೀಸಲಾತಿ ಕೋಡಲೇ ಬೇಕು. ಕೊಟ್ಟೆ ಕೊಡುತ್ತಾರೆ. ಇದು ಗೊತ್ತಾಗೇ ಹುಚ್ಚ ಸ್ವಾಮಿ ಜಾಗೃತ ಸಭೆ ಮಾಡುತ್ತಾನಂತೆ. ನಾವು ಯಾರಿಗೂ ಅಂದಿಲ್ಲ, ಕೆಲವರು ನಮ್ಮ ಫೋಟೋ ಸುಟ್ಟರು. ಶೆಟ್ಟರ್ ನಿವಾಸದ ಮುಂದೆ ಫೋಟೋಗೆ ಬೆಂಕಿ ಹಚ್ಚಿ ನೋಡೋಣ. ಗಂಡಸ್ತನ ಇದ್ದರೇ ಅಲ್ಲಿ ಫೋಟೋ ಸುಟ್ಟು ಹಾಕಿ ಎಂದು ಸವಾಲ್ ಹಾಕಿದರು.
ಬಣಜಿಗ ಸಮುದಾಯ ಪ್ರತಿಭಟನೆ ಮಾಡಿದ್ದ ವಿಚಾರವಾಗಿ ಮಾತನಾಡಿದ ಅವರು ಕೊಪ್ಪಳದಲ್ಲಿ ಯಾರೋ ಒಬ್ಬರು ಯತ್ನಾಳ್ ಸೋಲಿಸ್ತೇವೆ ಅಂದಿದ್ದಾರೆ. ಮುಸ್ಲಿಮರ ಕಾಲ ಬಿದ್ದು ಯತ್ನಾಳ್ ಸೋಲಿಸುತ್ತವೆ ಎಂದಿದ್ದಾನೆ. ಬಾರಪ್ಪ ನೋಡೋಣ, ನಾನೇ ಸಾಬರ್ ವೋಟ್ ಕೇಳುವುದಿಲ್ಲ ನೀನೇನು ಕಾಲ ಮುಗಿಯೋದು. ಧಾರವಾಡದಲ್ಲಿ ಒಬ್ಬ ಮಾತಾಡಿದ್ದ, ಗೋಕಾಕ್ನವ ಮೌನ ಆಗಿದ್ದಾನೆ. ನೀವು ನಮ್ಮ ಜೊತೆ ಹೊಂದಿಕೊಂಡು ಹೋದರೆ ಒಳ್ಳೆಯದು. ಇಲ್ಲಾ ರಾಜ್ಯದ ತುಂಬಾ ಓಡಾಡಿ ನಿಮ್ಮನ್ನು ಸೋಲಿಸಬೇಕಾಗುತ್ತೆ ಎಂದು ಬಣಜಿಗ ಸಮುದಾಯದ ನಾಯಕರಿಗೆ ಎಚ್ಚರಿಕೆ ನೀಡಿದರು.
ನಮ್ಮ ಪಂಚಮಸಾಲಿಯಲ್ಲೆ ಎರಡೂ ಪಾರ್ಟಿ ಇವೆ. ನಾನು ಮತ್ತು ಕಾಶಪ್ಪನವರ್ ಸುಭಾಷ್ ಚಂದ್ರ ಭೋಸ್ ಇದ್ದಂಗೆ. ಸಂಸದ ಕಡಾಡಿ ಹಾಗೂ ಉಳಿದವರು ಮಹತ್ಮ ಗಾಂಧಿ ಇದ್ದಂತೆ. ಹೇಗಾದರು ಮಾಡಿ ನಾವು ಮಸಲಾತಿ ಪಡಿತಿವಿ ಎಂದು ಮಾತನಾಡಿದರು.
ನಮ್ಮ ಮಿನಿಸ್ಟರ್ ಶಂಕರಪಾಟೀಲ್ ಮುನೇನಕೊಪ್ಪ ಬಾಳ ಶಾಣ್ಯತನ ತೋರುತ್ತಾನೆ. ಆ ಕಡೆನೂ ಹೊಗಲ್ಲ ಈ ಕಡೆನೂ ಹೋಗಲ್ಲ. ಇವಾಗ ಮೀಸಲಾತಿ ಕನ್ಫಮ್೯ ಆದ ಮೆಲೆ ನಮ್ಮ ಕಡೆ ಬಂದಾನ ಎಂದು ವ್ಯಂಗ್ಯವಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Tue, 29 November 22