Viral Video: ಜಮೀನಿನ ಪಹಣಿ ತಿದ್ದುಪಡಿಗೆ ರೈತನ ಬಳಿ ಲಂಚ ಕೇಳಿದ ಹಿರೇಖೇಡ ಗ್ರಾಮ ಲೆಕ್ಕಾಧಿಕಾರಿ ವಿಡಿಯೋ ವೈರಲ್
ಜಮೀನಿನ ಪಹಣಿ ತಿದ್ದಪಡಿಗೆ ಸಿದ್ದಪ್ಪನ ಸಂಬಂಧಿ ದೊಡ್ಡಯ್ಯ ಎಂಬ ರೈತನ ಬಳಿ ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್ ಜೋನ್ಸ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಜಮೀನಿನ ಪಹಣಿ ತಿದ್ದುಪಡಿಗೆ ರೈತನ ಬಳಿ ಲಂಚ ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿದ್ದಪ್ಪ ಹಡಪದ ಎನ್ನುವವರಿಗೆ ಸೇರಿದ ಜಮೀನಿನ ಪಹಣಿ ತಿದ್ದಪಡಿಗೆ ಸಿದ್ದಪ್ಪನ ಸಂಬಂಧಿ ದೊಡ್ಡಯ್ಯ ಎಂಬ ರೈತನ ಬಳಿ ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್ ಜೋನ್ಸ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ಬಳಿ ಹಣ ಕೇಳಿದ ವಿಡಿಯೋ ವೈರಲ್ ಆಗಿದ್ದು ಭ್ರಷ್ಟಾಚಾರ ಬಯಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್, ಪಹಣಿ ತಿದ್ದುಪಡಿ ಮಾಡಲು 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ರೈತ ದೊಡ್ಡಯ್ಯ 20 ಸಾವಿರ ಹಣದಲ್ಲಿ 16 ಸಾವಿರವನ್ನು ನೀಡಿದ್ದರು. ಬಾಕಿ ಇದ್ದ ನಾಲ್ಕು ಸಾವಿರ ಹಣಕ್ಕಾಗಿ ಪ್ರವೀಣ್ ಪೀಡಿಸುತ್ತಿದ್ದರು. ಈ ಹಿಂದೆ ಹಿರೇಖೇಡ ಗ್ರಾಮ ಲೆಕ್ಕಾಧಿಕಾರಿ ಆಗಿದ್ದ ಪ್ರವೀಣ್, ಆರು ತಿಂಗಳುಗಳ ಹಿಂದೆ ಮಾತನಾಡಿದ್ದ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದು ಗ್ರಾಮ ಲೆಕ್ಕಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವಬೆದರಿಕೆ; ಪೊಲೀಸ್ ಠಾಣೆಗೆ ದೂರು
ಒಂದೇ ದಿನಕ್ಕೆ ಕಿತ್ತು ಬಂತು ರಸ್ತೆ ಡಾಂಬರು
ಕೊಪ್ಪಳ: ಸಚಿವ ಹಾಲಪ್ಪ ಆಚಾರ್ ಕ್ಷೆತ್ರದಲ್ಲಿ ಮತ್ತೊಂದು ರಸ್ತೆ ಕಳೆಪೆ ಕಾಮಗಾರಿ ಬಯಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಒಂದೇ ದಿನಕ್ಕೆ ರಸ್ತೆ ಡಾಂಬರು ಕಿತ್ತು ಬಂದಿದೆ. ಕಳೆದವಾರವಷ್ಟೆ ಕುದುರಿಮೋತಿ ಗ್ರಾಮದಲ್ಲಿ ಕಳೆಪೆ ಕಾಮಗಾರಿ ಬಯಲಾಗಿತ್ತು. ಸದ್ಯ ಮತ್ತೊಂದು ರಸ್ತೆ ಕಳೆಪೆಯಾಗಿದ್ದನ್ನ ಗ್ರಾಮಸ್ಥರು ಪತ್ತೆ ಮಾಡಿದ್ದಾರೆ.
ಮಂಗಳೂರು- ಮುತ್ತಾಳ ರಸ್ತೆ ಡಾಂಬರ್ ಗುಣಮಟ್ಟದಲ್ಲಾ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಅಂದಾಜು 1ಕೋಟಿ ವೆಚ್ಚದ ಕಾಮಗಾರಿಯಾಗಿದೆ. ಸರ್ಕಾರದ ಹಣ ಪೋಲು ಮಾಡಿರುವ ಇಲಾಖೆ ಅಧಿಕಾರಗಳು ಹಾಗೂ ಗುತ್ತಿಗೆದಾರರುನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳಪೆ ಕಾಮಗಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಜನ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:44 am, Wed, 30 November 22