Lok Sabha Election 2024: ನೋಟಾ ಒತ್ತದಿರೋಣಾ

ಮತ ಚಲಾವಣೆಯನ್ನೇ ಮಾಡದ ಮತದಾರನೆಷ್ಟು ದೊಡ್ಡ ಅಪರಾಧಿಯೋ ನೋಟಾ ಒತ್ತಿದ ಮತದಾರನೂ ಅಷ್ಟೇ ದೊಡ್ಡ ಅಪರಾಧಿಯಾಗಿ ನಿಲ್ಲುತ್ತಾನೆ. ಕಾರಣ ಸಮರ್ಥ ನಾಯಕನನ್ನು ಆರಿಸುವಲ್ಲಿ ಈತನೂ  ವಿಫಲನಾಗಿ ಉಳಿದಿರುತ್ತಾನೆ. ಹಾಗಾಗಿ ಇದ್ದವರಲ್ಲಿ ಒಬ್ಬರನ್ನು ಆರಿಸಿ ಸಮರ್ಥ ನಾಯಕನನ್ನು ಆರಿಸುವ ಕೆಲಸ ಪ್ರತೀ ಮತದಾರನಿಂದಾಗಬೇಕಿದೆ.

Lok Sabha Election 2024: ನೋಟಾ ಒತ್ತದಿರೋಣಾ
ನೋಟಾ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 25, 2024 | 10:28 PM

ಲೋಕಸಭಾ ಚುನಾವಣೆ(Lok Sabha Election)ಯ ಭರಾಟೆಯ ಸಂದರ್ಭವಿದು. ಮತಯಾಚನೆಗೆ ಪ್ರತಿಯೊಬ್ಬ ಮತದಾರನ ಮನೆಯ ಮುಂದೆ ನಾಯಕರು, ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಜನರ ಮನವೋಲೈಕೆಯ ಕಾರ್ಯ ನಡೆಯುತ್ತಿದೆ. ಆಡಳಿತಾರೂಢ ಪಕ್ಷ ಹಾಗೂ ಪ್ರತಿಪಕ್ಷಗಳು ತಮ್ಮ ತಮ್ಮ ನಾಯಕರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅದೇ ರೀತಿಯಲ್ಲಿ ತಮ್ಮ ತಮ್ಮ ಪಕ್ಷದ ಗೆಲುವಿಗಾಗಿ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಒಂದು ಈಗ ಆಡಳಿತದಲ್ಲಿರುವ ಪಕ್ಷಕ್ಕೆ ಮತವನ್ನು ಹಾಕಬೇಕು ಇಲ್ಲವೆ ವಿರೋಧಿ ಪಕ್ಷಕ್ಕೆ ಮತ ಹಾಕಬೇಕು ಆದರೆ ಈಗ ನೋಟಾ ಎಂಬ ಮತ್ತೊಂದು ಆಯ್ಕೆ ಕಣ್ಮುಂದಿದೆ.

ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ಜನರೇ ತಮ್ಮ ನಾಯಕನ್ನು ಆರಿಸುವ ಹೊಣೆ ಹೊಂದಿದ್ದಾನೆ. ಸಮರ್ಥ ನಾಯಕನನ್ನು ಆರಿಸಿ ಆಡಳಿತಕ್ಕೆ ಕೂರಿಸುವ ಪರಿ ನಮ್ಮ ದೇಶದಲ್ಲಿದೆ. ಇಲ್ಲಿ ಸಮರ್ಥರನ್ನು ಆರಿಸುವ ಜವಾಬ್ದಾರಿ ದೇಶದ ಜವಾಬ್ದಾರಿಯುತ ಪ್ರಜೆಯ ಮೇಲಿದೆ. ಈಗ ನೋಟಾ ಆಯ್ಕೆ ಮುನ್ನೆಲೆಗೆ ಬರುತ್ತಿದೆ. ನಿಮ್ಮ ಕ್ಷೇತ್ರದ ಅಭ್ಯರ್ಥಿ ನಿಮಗೆ ಆತ ಅಸಮರ್ಥ ಅಥವಾ ಸಮಂಜಸವಾಗಿಲ್ಲ ಎಂದು ಎನಿಸಿದರೆ ನೋಟಾ ಆಯ್ಕೆ ನಿಮಗಿದೆ ಎಂಬ ಪ್ರಚಾರಗಳು ಕೇಳಿಬರುತ್ತಿದೆ. ಇದೂ ಕೂಡಾ ರಾಜಕೀಯ ರಂಗದಲ್ಲಿನ ಆಟ ಎಂದರೆ ತಪ್ಪಾಗಲಾರದು. ನೋಟಾವನ್ನು ಆಯ್ಕೆ ಮಾಡಿದರೆ ಓಟು ಸುಲಭದಲ್ಲಿ  ವಿಂಗಡಣೆಯಾಗುತ್ತದೆ. ಒಂದು ಪಕ್ಷಕ್ಕೆ ಬರುತ್ತಿದ್ದ ಓಟು ಭಾಗವಾಗಿ ಹೋಗುತ್ತದೆ. ಓಟು ಬ್ಯಾಂಕ್ ಸುಲಭವಾಗಿ ತನ್ನ ದಿಕ್ಕನ್ನು ಬದಲಾಯಿಸುತ್ತದೆ.

ಇದನ್ನೂ ಓದಿ:ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ; ಕ್ಷೇತ್ರಗಳು, ಸಮಯದ ವಿವರ ಇಲ್ಲಿದೆ

ಒಂದು ಉದಾಹರಣೆಯನ್ನು ತೆಗೆದುಕೊಳ್ಳುವ ಒಂದು ಕ್ಷೇತ್ರದಲ್ಲಿ ನಿಂತಿರುವ ನಾಯಕರೆಲ್ಲರೂ  ಅಸಮರ್ಥರಾಗಿ ಕಂಡರೂ ಇದ್ದವರಲ್ಲಿ ಒಬ್ಬರು ಅನ್ನುವ ಹಾಗೆ ಆಯ್ಕೆ ಮಾಡಿದರೆ ಯಾವುದೋ ಕೆಲಸವೇ ಮಾಡದ ನಾಯಕನಿಗಿಂತ ಎನೋ ಸ್ವಲ್ಪ ಕೆಲಸ ಮಾಡುವ ನಾಯಕನನ್ನು ಆಯ್ಕೆ ಮಾಡಿದ ಹಾಗಾಗುತ್ತದೆ. ಒಂದಷ್ಟು ಓಟು ನೋಟಾಕ್ಕೆ ಬಿದ್ದರೆ ಇದ್ದ ನಾಯಕನನ್ನು ಕಳೆದುಕೊಂಡು ಅದಾವುದೋ ಒಬ್ಬ ಆಡಳಿತಕ್ಕೆ ಬಂದರೆ ಪರಿಸ್ಥಿತಿ ಏನಾಗಬಹುದು ಎಂಬ ಯೋಚನೆ ನಮ್ಮದಾದಾಗ ನಾವು ಯಾರೂ ನೋಟಾಕ್ಕೆ ಓಟನ್ನು ಹಾಕದೆ ಇದ್ದವರಲ್ಲೊಬ್ಬರಿಗೆ ಓಟನ್ನು ಹಾಕಿ ಗೆಲ್ಲಿಸಬಹುದು.

ಮತ ಚಲಾವಣೆಯನ್ನೇ ಮಾಡದ ಮತದಾರನೆಷ್ಟು ದೊಡ್ಡ ಅಪರಾಧಿಯೋ ನೋಟಾ ಒತ್ತಿದ ಮತದಾರನೂ ಅಷ್ಟೇ ದೊಡ್ಡ ಅಪರಾಧಿಯಾಗಿ ನಿಲ್ಲುತ್ತಾನೆ. ಕಾರಣ ಸಮರ್ಥ ನಾಯಕನನ್ನು ಆರಿಸುವಲ್ಲಿ ಈತನೂ  ವಿಫಲನಾಗಿ ಉಳಿದಿರುತ್ತಾನೆ. ಹಾಗಾಗಿ ಇದ್ದವರಲ್ಲಿ ಒಬ್ಬರನ್ನು ಆರಿಸಿ ಸಮರ್ಥ ನಾಯಕನನ್ನು ಆರಿಸುವ ಕೆಲಸ ಪ್ರತೀ ಮತದಾರನಿಂದಾಗಬೇಕಿದೆ. ಮತವನ್ನು ಚಲಾಯಿಸಿ ನಿಮ್ಮ ಹಕ್ಕನ್ನು ಉಳಿಸಿಕೊಳ್ಳುವುದರ ಜೊತೆಗೆ ನೋಟಾಕ್ಕೆ ಮತವನ್ನು ಹಾಕದೆ ಜವಾಬ್ಧಾರಿಯುತ ನಾಗರೀಕನಾಗಿ ಉಳಿಯುವ ಕೆಲಸವಾಗಲಿ.

ದಿವ್ಯಶ್ರೀ ಹೆಗಡೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು