ರೈತನ ಜಮೀನಿಗೆ ಪರಿಹಾರ ಒದಗಿಸಲು ವಿಫಲ: ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿಗೆ ಆದೇಶ

2006ರಲ್ಲಿ ಒಳಚರಂಡಿ ತ್ಯಾಜ್ಯ ಘಟಕಕ್ಕಾಗಿ ಪಾಂಡವಪುರ ಪಟ್ಟಣದಲ್ಲಿ ರೈತನಿಗೆ ಕಡಿಮೆ ಮೊತ್ತದ ಪರಿಹಾರ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಹೆಚ್ಚಿನ ಪರಿಹಾರಕ್ಕಾಗಿ ರೈತ ಸತ್ಯನಾರಾಯಣ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಆದೇಶ ನೀಡಿ 2 ವರ್ಷ ಕಳೆದರೂ ಪರಿಹಾರ ಕೊಡದೆ ವಿಳಂಬ ಮಾಡಲಾಗಿದೆ. ಹೀಗಾಗಿ ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣವನ್ನು ಜಪ್ತಿ ಮಾಡುವಂತೆ ಜೆಎಂಎಫ್​​ಸಿ ಕೋರ್ಟ್ ಆದೇಶಿಸಿದೆ.

ರೈತನ ಜಮೀನಿಗೆ ಪರಿಹಾರ ಒದಗಿಸಲು ವಿಫಲ: ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿಗೆ ಆದೇಶ
ಪೀಠೋಪಕರಣ ಜಪ್ತಿ ಮಾಡುತ್ತಿರುವ ರೈತ
Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on:Aug 09, 2023 | 5:32 PM

ಮಂಡ್ಯ, ಆಗಸ್ಟ್​ 09: ರೈತನ (farmer) ಜಮೀನಿಗೆ ಪರಿಹಾರ ಒದಗಿಸಲು ವಿಫಲ ಹಿನ್ನೆಲೆ ಜಿಲ್ಲೆಯ ಪಾಂಡವಪುರ ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣವನ್ನು ಜಪ್ತಿ ಮಾಡುವಂತೆ ಜೆಎಂಎಫ್​ಸಿ ನ್ಯಾಯಾಲಯದಿಂದ ಎಸಿ ಕಚೇರಿಗೆ ಆದೇಶ ನೀಡಲಾಗಿದೆ. ರೈತರ ಸಹಕಾರದೊಂದಿಗೆ ಆಗಮಿಸಿ ಎಸಿ ಕಚೇರಿ ಪೀಠೋಪಕರಣವನು ಜಪ್ತಿ ಮಾಡಲಾಗಿದೆ.

4.89 ಕೋಟಿ ರೂ. ಪರಿಹಾರ ನೀಡುವಂತೆ ಸೂಚನೆ

2006ರಲ್ಲಿ ಒಳಚರಂಡಿ ತ್ಯಾಜ್ಯ ಘಟಕಕ್ಕಾಗಿ ಪಾಂಡವಪುರ ಪಟ್ಟಣದಲ್ಲಿ ರೈತನಿಗೆ ಕಡಿಮೆ ಮೊತ್ತದ ಪರಿಹಾರ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಹೆಚ್ಚಿನ ಪರಿಹಾರಕ್ಕಾಗಿ ರೈತ ಸತ್ಯನಾರಾಯಣ ಕೋರ್ಟ್​ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್​​ಸಿ ಕೋರ್ಟ್​4.89 ಕೋಟಿ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿತ್ತು.

ಇದನ್ನೂ ಓದಿ: ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣಕ್ಕೆ ಹೊಸ ತಿರುವು, ಪೊಲೀಸರಿಂದ ತನಿಖೆ ಆರಂಭ

ಆದೇಶ ನೀಡಿ 2 ವರ್ಷ ಕಳೆದರೂ ಪರಿಹಾರ ಕೊಡದೆ ವಿಳಂಬವಾಗಿದೆ. ಹೀಗಾಗಿ ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣವನ್ನು ಜಪ್ತಿ ಮಾಡುವಂತೆ ರೈತ ಸತ್ಯನಾರಾಯಣಗೆ ಜೆಎಂಎಫ್​​ಸಿ ಕೋರ್ಟ್ ಸೂಕ್ತ ಪರಿಹಾರಕ್ಕೆ ಆದೇಶಿಸಿದೆ.

ಗ್ರಾಮಪಂಚಾಯತ್ ಚುನಾವಣೆ ಮುಂದೂಡಿಕೆ: ಗ್ರಾಮಸ್ಥರ ಪ್ರತಿಭಟನೆ 

ಇಂದು ನಿಗಧಿಯಾಗಿದ್ದ ಎರಡನೇ ಅವಧಿಯ ಗ್ರಾಮಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನ ಚುನಾವಣಾಧಿಕಾರಿ ಮುಂದೂಡಿರುವುದನ್ನ ವಿರೋಧಿಸಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿನ್ನು ಕೆಎಸ್​ಆರ್​ಟಿಸಿ ಬಸ್​​ಗಳು ಎಡ ಬದಿಯ ಲೇನ್​ನಲ್ಲೇ ಸಂಚರಿಸಬೇಕು

ಚಂದಗಾಲು ಗ್ರಾಮಪಂಚಾಯತ್​ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ಇವತ್ತು ದಿನಾಂಕ ಘೋಷಣೆ ಆಗಿತ್ತು. ಆದರೆ ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರು ಚುನಾವಣಾ ಪ್ರಕ್ರಿಯೆಗೆ ಗೈರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನ ಮುಂದೂಡಲಾಗಿದೆ.

ಹೆದ್ದಾರಿ ಕಾಮಗಾರಿಗೆ ತಡೆ: ಹತ್ತಾರು ಹಳ್ಳಿಯ ರೈತರಿಂದ ಪ್ರತಿಭಟನೆ

ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಕೆಆರ್​ಪೇಟೆ ಬೈಪಾಸ್ ಕಾಮಗಾರಿಗೆ ತಡೆವೊಡ್ಡಿ ಆಗಸ್ಟ್​ 05ರಂದು ಹತ್ತಾರು ಹಳ್ಳಿಯ ರೈತರು ಪ್ರತಿಭಟನೆ ನಡೆಸಿದ್ದರು. ಅಂದಹಾಗೆ ಕಳೆದ ಹಲವು ವರ್ಷಗಳಿಂದ ನಿಂತಿದ್ದ ಕೆಆರ್​ಪೇಟೆ ಬೈಪಾಸ್ ರಸ್ತೆಯ ಕಾಮಗಾರಿಯನ್ನ ಮಾಡಲು ಜೆಸಿಬಿ, ಲಾರಿಗಳ ಸಮೇತ ಕೆಶಿಪ್ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಪೊಲೀಸರ ಸರ್ಪಗಾವಲಿನಲ್ಲಿ ಆಗಮಿಸಿದ್ದರು.

ಕಾಮಗಾರಿ ಆರಂಭಿಸಿರುವ ವಿಚಾರ ತಿಳಿಯುತ್ತಿದ್ದಂತೆ ಹತ್ತಾರು ಹಳ್ಳಿಯ ರೈತರು ಆಗಮಿಸಿ ಪ್ರತಿಭಟನೆ ನಡೆಸಿದ್ದರು. ಹೆದ್ದಾರಿ ಕಾಮಗಾರಿಗೆ ತಡೆವೊಡ್ಡಿ, ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:16 pm, Wed, 9 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ