ಕೆಆರ್​ಎಸ್ ಅಣೆಕಟ್ಟಿಗೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಿಸುವ ವೇಳೆ ರಾಜವಂಶಸ್ಥರನ್ನೂ ಆಹ್ವಾನಿಸುವಂತೆ ಮನವಿ

ಕೆಆರ್​ಎಸ್ ಅಣೆಕಟ್ಟಿಗೆ ಸಿಂಎ ಬೊಮ್ಮಾಯಿ ಬಾಗಿನ ಅರ್ಪಿಸುವ ವೇಳೆ ರಾಜವಂಶಸ್ಥರನ್ನೂ ಆಹ್ವಾನಿಸುವಂತೆ ಮೈಸೂರಿನ ನಗರ ಪಾಲಿಕೆ ಸದಸ್ಯ ಪಿ.ಲೋಕೇಶ್ ಅವರು ಡಿಸಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕಾವೇರಿ ಜಲಾಶಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೆಆರ್​ಎಸ್​ ಅಣೆಕಟ್ಟಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.

ಕೆಆರ್​ಎಸ್ ಅಣೆಕಟ್ಟಿಗೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಿಸುವ ವೇಳೆ ರಾಜವಂಶಸ್ಥರನ್ನೂ ಆಹ್ವಾನಿಸುವಂತೆ ಮನವಿ
KRS
TV9kannada Web Team

| Edited By: Nayana Rajeev

Jul 11, 2022 | 5:34 PM

ಕೆಆರ್​ಎಸ್ ಅಣೆಕಟ್ಟಿಗೆ ಸಿಂಎ ಬೊಮ್ಮಾಯಿ ಬಾಗಿನ ಅರ್ಪಿಸುವ ವೇಳೆ ರಾಜವಂಶಸ್ಥರನ್ನೂ ಆಹ್ವಾನಿಸುವಂತೆ ಮೈಸೂರಿನ ನಗರ ಪಾಲಿಕೆ ಸದಸ್ಯ ಪಿ.ಲೋಕೇಶ್ ಅವರು ಡಿಸಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕಾವೇರಿ ಜಲಾಶಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೆಆರ್​ಎಸ್​ ಅಣೆಕಟ್ಟಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.

ಕೆಆರ್​ಎಸ್ ಅಣೆಕಟ್ಟು 124.80 ಅಡಿ ಸಾಮಾರ್ಥ್ಯವನ್ನು ಹೊಂದಿದೆ. ಕೆಆರ್​ಎಸ್ ಅಣೆಕಟ್ಟು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ.

ಅಣೆಕಟ್ಟು ಭರ್ತಿಗೆ ಇನ್ನೊಂದು ಅಡಿ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳಲ್ಲೆ ಮುಖ್ಯಮಮತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ. ಈ ವೇಳೆ ಮೈಸೂರಿನ ರಾಜ ವಂಶಸ್ಥರಿಗು ಆಹ್ವಾನ ನೀಡುವಂತೆ ಒತ್ತಾಯಯಿಸಲಾಯಿತು. ಅಣೆಕಟ್ಟು ನಿರ್ಮಾಣದಲ್ಲಿ ರಾಜವಂಶಸ್ಥರ ಕೊಡುಗೆ ಅಪಾರವಿದೆ ಎಂದು ಹೇಳಿದ್ದಾರೆ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ: 519.60 ಮೀಟರ್ ಇಂದಿನ ನೀರಿನ ಮಟ್ಟ: 516.95 ಮೀಟರ್ ಒಳ ಹರಿವು: 81,910 ಕ್ಯೂಸೆಕ್ ಹೊರ ಹರಿವು : 2976

ಶಿವಮೊಗ್ಗ ಭದ್ರಾ ಜಲಾಶಯ ಇಂದಿನ ಮಟ್ಟ: 174.6 ಅಡಿ ಗರಿಷ್ಠ ಮಟ್ಟ : 186 ಅಡಿ ಒಳಹರಿವು: 41645 cusecs ಹೊರಹರಿವು: 153 cusecs ನೀರು ಸಂಗ್ರಹ: 57 Tmc ಸಾಮರ್ಥ್ಯ: 71.535 Tmc ಕಳೆದ ವರ್ಷ ಈ ದಿನದ ನೀರು ಸಂಗ್ರಹ 155’9″ ಅಡಿ

KRS ಡ್ಯಾಂ ಇಂದಿನ ನೀರಿನ ಮಟ್ಟ. ಗರಿಷ್ಠ ಮಟ್ಟ 124.80 ಅಡಿ ಇಂದಿನ ಮಟ್ಟ 122.60 ಅಡಿ ಒಳ ಹರಿವು 50,467 ಕ್ಯೂಸೆಕ್ ಹೊರ ಹರಿವು 72,964 ಕ್ಯೂಸೆಕ್ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಸದ್ಯ ಸಂಗ್ರಹವಾಗಿರುವ ನೀರು 46,434 ಟಿಎಂಸಿ

ಹೇಮಾವತಿ ನದಿಗೆ ಒಳಹರಿವಿನಲ್ಲಿ ಭಾರಿ ಹೆಚ್ಚಳ ಹೇಮಾವತಿ ನದಿಗೆ 23530 ಕ್ಯೂಸೆಕ್ ಒಳಹರಿವು ಜಲಾಶಯದಿಂದ 17575 ಕ್ಯೂಸೆಕ್ ನೀರು ಹೊರಹರಿವು ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ ಇಂದು ಜಲಾಶಯದಲ್ಲಿನ ನೀರಿನ ಮಟ್ಟ 2919.07 ಅಡಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರು ಹೊರಕ್ಕೆ ಜಲಾಶಯದ ನೀರಿನ ‌ಸಂಗ್ರಹ ಪ್ರಮಾಣ 37.103 ಟಿಎಂಸಿ ಇಂದು ಜಲಾಶಯದಲ್ಲಿರುವ ನೀರಿನ ಪ್ರಮಾಣ 34.307 ಟಿಎಂಸಿ

ಮೈಸೂರು ಕಬಿನಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಕೇರಳದ ವಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾದ ಮಳೆ ಪ್ರಮಾಣ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳ ಒಳಹರಿವು 26 ಸಾವಿರ ಕ್ಯೂಸೆಕ್ ಗೆ ಹೆಚ್ಚಳ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯ 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯ ಜಲಾಶಯದ ಇಂದಿನ ನೀರಿನ ಮಟ್ಟ 82.71 ಅಡಿ ಜಲಾಶಯದ ಇಂದಿನ ಒಳಹರಿವು 26,847 ಕ್ಯೂಸೆಕ್ ಜಲಾಶಯದಿಂದ ಹೊರಹರಿವು 30,000 ಕ್ಯೂಸೆಕ್ ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ ಜಲಾಶಯದಲ್ಲಿ ಇಂದು 18.68 ಟಿಎಂಸಿ ನೀರು 40 ಎಂ ಎಂ ಮಳೆ ಪ್ರಮಾಣ ದಾಖಲು

ಸೂಪಾ ಅಣೆಕಟ್ಟು ಗರಿಷ್ಠ ಮಟ್ಟ -564 ಮೀ. ಇಂದಿನ ಮಟ್ಟ – 530.70ಮೀ. ಒಳಹರಿವು 33680.70 ಕ್ಯೂಸೆಕ್ ಹೊರಹರಿವು – ಇಲ್ಲ.

ಕದ್ರಾ ಅಣೆಕಟ್ಟು ಗರಿಷ್ಠ ಮಟ್ಟ -34.59 ಮೀ. ಇಂದಿನ ಮಟ್ಟ – 29.93ಮೀ. ಒಳಹರಿವು – 19140.00 ಕ್ಯೂಸೆಕ್ ಹೊರಹರಿವು – 25136 ಕ್ಯೂಸೆಕ್

ಕೊಡಸಳ್ಳಿ ಅಣೆಕಟ್ಟು ಗರಿಷ್ಠ ಮಟ್ಟ -75.50 ಮೀ. ಇಂದಿನ ಮಟ್ಟ – 69.66 ಮೀ. ಒಳಹರಿವು – 12388 ಕ್ಯೂಸೆಕ್ ಹೊರಹರಿವು – 11698 ಕ್ಯೂಸೆಕ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada