‘ಕರ್ನಾಟಕದಲ್ಲಿ ಇರುವಷ್ಟು ಸಂಪತ್ತು ಎಲ್ಲೂ ಇಲ್ಲ; ನಮ್ಮಲ್ಲಿ ಮರಳಿನಿಂದ ಬಂಗಾರದವರೆಗೆ ಎಲ್ಲವೂ ಸಿಗುತ್ತೆ’

ನಮ್ಮ ಕರ್ನಾಟಕದಲ್ಲಿ ಇರುವಷ್ಟು ಖನಿಜ ಸಂಪತ್ತು ಎಲ್ಲೂ ಇಲ್ಲ. ನಮ್ಮಲ್ಲಿ ಮರಳಿನಿಂದ ಬಂಗಾರದವರೆಗೆ ಎಲ್ಲವೂ ಸಿಗುತ್ತೆ. ಇಡೀ ದೇಶದಲ್ಲಿ ಗೋಲ್ಡ್ ಮೈನ್ ಇರುವಂಥದ್ದು ಕರ್ನಾಟಕದಲ್ಲಿ ಮಾತ್ರ ಎಂದು ನಿರಾಣಿ ಹೇಳಿದರು.

‘ಕರ್ನಾಟಕದಲ್ಲಿ ಇರುವಷ್ಟು ಸಂಪತ್ತು ಎಲ್ಲೂ ಇಲ್ಲ; ನಮ್ಮಲ್ಲಿ ಮರಳಿನಿಂದ ಬಂಗಾರದವರೆಗೆ ಎಲ್ಲವೂ ಸಿಗುತ್ತೆ’
ಚಿನ್ನದ ಅದಿರು
Follow us
KUSHAL V
|

Updated on: Mar 14, 2021 | 10:26 PM

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಆಭರಣ ಮಳಿಗೆ ತೆರೆಯುವುದಕ್ಕೆ ಚಿಂತನೆ ನಡೆಸಿದ್ದೇವೆ ಎಂದು ಬೆಳಗಾವಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಮೈಸೂರು ಸಿಲ್ಕ್​, ಮೈಸೂರು ಸ್ಯಾಂಡಲ್​ ಸೋಪ್​​ ರೀತಿ ಆಭರಣ ಮಳಿಗೆ ತೆರೆಯುವುದಕ್ಕೆ ಚಿಂತನೆ ನಡೆಸಿದ್ದೇವೆ. ಇದರಿಂದ, ಕಲ್ಯಾಣ ಕರ್ನಾಟಕ ಭಾಗದವರಿಗೆ ಉದ್ಯೋಗ ಒದಗಿಸಿದಂತಾಗುತ್ತೆ ಎಂದು ಸಚಿವರು ಹೇಳಿದರು. ಕರ್ನಾಟಕ ಅಷ್ಟೇ ಅಲ್ಲದೇ ಬೇರೆ ರಾಜ್ಯ, ದೇಶಗಳಲ್ಲೂ ಆಭರಣ ಮಳಿಗೆ ತೆರೆಯಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಜೊತೆಗೆ, ಹಟ್ಟಿ ಗೋಲ್ಡ್​​ ಮೈನ್ ಹೆಸರು ಬದಲಾವಣೆಗೆ ಚಿಂತಿಸಲಾಗ್ತಿದೆ. ಕರ್ನಾಟಕ ಸ್ಟೇಟ್ ಗೋಲ್ಡ್ ಮೈನ್ ಎಂದು ಹೆಸರಿಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಹಟ್ಟಿ ಚಿನ್ನದ ಗಣಿಯಲ್ಲಿ ಪ್ರತಿ ವರ್ಷ ಕೇವಲ 1,700 ಕೆ.ಜಿ ಮೈನ್ ಮಾಡಿ ಗೋಲ್ಡ್ ಮಾಡುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿಯಿಂದ ಪ್ರತಿವರ್ಷ 250 ಕೋಟಿ ರೂ. ಲಾಭ ಸಿಗುತ್ತಿದೆ. ಈ 250 ಕೋಟಿ ಇನ್ವೆಸ್ಟ್ ಮಾಡಿದ್ರೆ ಹೆಚ್ಚು ಉತ್ಪಾದನೆ ಮಾಡ್ಬಹುದು. ನಮ್ಮಲ್ಲಿ ಮೈನ್ಸ್ ಇದೆ, ಮಾಡುವುದಕ್ಕೆ ಟೆಕ್ನಾಲಜಿ ಇದೆ. ತಯಾರು ಮಾಡಿದ ಗೋಲ್ಡ್‌ಗೆ ಮಾರ್ಕೆಟ್ ಇದೆ ಎಂದು ನಿರಾಣಿ ಹೇಳಿದರು.

ಹೀಗಾಗಿ, 1,700 ರಿಂದ 5,000 ಕೆ.ಜಿಗೆ 2 ಹಂತದಲ್ಲಿ ವಿಸ್ತರಣೆಗೆ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗೋಲ್ಡ್‌ಗೆ ವ್ಯಾಲ್ಯೂ ಎಡಿಷನ್ ಮಾಡುತ್ತೇವೆ ಎಂದು ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನಮ್ಮ ಕರ್ನಾಟಕದಲ್ಲಿ ಇರುವಷ್ಟು ಖನಿಜ ಸಂಪತ್ತು ಎಲ್ಲೂ ಇಲ್ಲ. ನಮ್ಮಲ್ಲಿ ಮರಳಿನಿಂದ ಬಂಗಾರದವರೆಗೆ ಎಲ್ಲವೂ ಸಿಗುತ್ತೆ. ಇಡೀ ದೇಶದಲ್ಲಿ ಗೋಲ್ಡ್ ಮೈನ್ ಇರುವಂಥದ್ದು ಕರ್ನಾಟಕದಲ್ಲಿ ಮಾತ್ರ ಎಂದು ನಿರಾಣಿ ಹೇಳಿದರು.

‘ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲ್ಲ’ ಇತ್ತ, ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲ್ಲ ಎಂದು ಗದಗ ಜಿಲ್ಲೆ ಮುಂಡರಗಿಯಲ್ಲಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಕಪ್ಪತ್ತಗುಡ್ಡ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಗೆ ಒತ್ತಡವಿತ್ತು. ಆದ್ರೆ ವನ್ಯಜೀವಿ ಧಾಮದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲ್ಲ. ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲ್ಲ ಎಂದು ಲಿಂಬಾವಳಿ ಹೇಳಿದರು.

ಸಂರಕ್ಷಿತ ಅರಣ್ಯ ಪ್ರದೇಶ, ಇಕೋ ಸೆನ್ಸಿಟಿವ್ ಜೋನ್‌ನಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ಮಾಡುವಂತಿಲ್ಲ. ಅರಣ್ಯ ಪ್ರದೇಶ, ಬೇರೆ ಪ್ರದೇಶಗಳಲ್ಲಿ ಭೋವಿ ಸಮಾಜ ಕಲ್ಲು ಗಣಿಗಾರಿಕೆ ಮಾಡಲು ಅಡ್ಡಿಯಿಲ್ಲ. ಅವರಿಗೆ ಅಡ್ಡಿ ಪಡಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದ್ರೆ ಭೋವಿ ಸಮುದಾಯದವರು ಸಂಘ ಮಾಡಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ ಅನುಮತಿ ಪಡೆಯಬೇಕು ಎಂದು ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ನಾಡಗೀತೆ ಪುನರ್​ ಪರಿಶೀಲಿಸಿ ಕಡಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಲಿಂಬಾವಳಿ ಹೇಳಿದರು. ಈ ಕುರಿತು ಸಾಹಿತಿಗಳು, ತ‌ಜ್ಞರ ಸಭೆ ಕರೆದು ತೀರ್ಮಾನ ಮಾಡುತ್ತೇವೆ. ನಾಡಗೀತೆಯನ್ನು ಬಹಳ ಸುದೀರ್ಘವಾಗಿ ಹಾಡಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಸಂಪೂರ್ಣ ನಾಡಗೀತೆ ಹಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ & ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಇದನ್ನೂ ಓದಿ: ‘ಸಿಡಿ ಲೇಡಿ’ ಗ್ರಾಮಕ್ಕೆ ಖಾಕಿ ಭೇಟಿ: ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟಿಸ್