ಉಗ್ರರ ದಾಳಿ: ಬೆಂಗಳೂರಿನಿಂದ ಕಾಶ್ಮೀರಕ್ಕೆ ತೆರಳುವ ವಿಮಾನ ಪ್ರಯಾಣ ದರ ಇಳಿಕೆ
Pahalgam terror attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 27 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತವಾಗಿದೆ. ಇದರಿಂದ ವಿಮಾನ ಪ್ರಯಾಣ ದರ ಕೂಡ ಇಳಿಕೆಯಾಗಿದೆ.

ಬೆಂಗಳೂರು, ಏಪ್ರಿಲ್ 28: ಆರ್ಟಿಲ್ 370 (Article 370) ಹಿಂಪಡೆದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಕಲ್ಲು ತೂರಾಟ ಮತ್ತು ಉಗ್ರರ ಚಟುವಟಿಕೆಗಳು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುತ್ತಿದ್ದರು. ಆದರೆ ಇದೀಗ, ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರರು ಗುಂಡಿನ ದಾಳಿ (Pahalgam terror attack) ನಡೆಸಿದ್ದು, 27 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಮತ್ತೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಆತಂಕ ಆವರಿಸಿದೆ. ಹೀಗಾಗಿ, ಜಮ್ಮು-ಕಾಶ್ಮೀರಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ದಿಢೀರ್ ಕುಸಿತಕಂಡಿದೆ. ಈ ಸಂಬಂಧ ವಿಮಾನ ಟಿಕೆಟ್ ದರದಲ್ಲೂ ಕೂಡ ಭಾರಿ ಇಳಿಕೆಯಾಗಿದೆ.
ಮುಂಚೆ ಬೆಂಗಳೂರಿನಿಂದ ಶ್ರೀನಗರಕ್ಕೆ ವಿಮಾನದಲ್ಲಿ ತುರ್ತಾಗಿ ತೆರಳಬೇಕಂದರೆ ಒಬ್ಬರಿಗೆ 30 ರಿಂದ 40 ಸಾವಿರ ರೂ. ತಗಲುತಿತ್ತು. ಆದರೆ, ಉಗ್ರರರ ದಾಳಿ ನಂತರ ಈ ದರ 8ರಿಂದ 9 ಸಾವಿರ ರೂ.ಗೆ ಇಳಿಕೆಯಾಗಿದೆ. ಇದಕ್ಕೆ ಕಾರಣ ಉಗ್ರರ ದಾಳಿ ಬೆನ್ನಲ್ಲೇ ಕಾಶ್ಮೀರಕ್ಕೆ ತೆರಳುವವರ ಸಂಖ್ಯೆ ಕಡಿಮೆಯಾಗಿರುವುದು.
ಕಾಶ್ಮೀರದಲ್ಲಿ ಬೆಟ್ಟ, ಗುಡ್ಡ, ಕಣಿವೆ, ಹಿಮ ಇರುವ ಕಾರಣ ಬೇಸಿಗೆಯಲ್ಲಿ ಸಮಯ ಕಳೆಯಲು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಿಂದ ಸಾವಿರಾರು ಜನ ಪ್ರವಾಸ ಮಾಡುತ್ತಾರೆ. ಕಾಶ್ಮೀರ ಭಾರತದ ಸ್ವಿಜರ್ಲೆಂಡ್ ಎಂದೇ ಕರೆಯಲ್ಪಡುತ್ತದೆ. ಬೇಸಿಗೆಯ ಎರಡೂರು ತಿಂಗಳ ಅವಧಿಯಲ್ಲಿ ಸುಮಾರು 2 ಲಕ್ಷ ಪ್ರವಾಸಿಗರು ಕರ್ನಾಟಕದಿಂದಲೇ ಪ್ರಯಾಣ ಮಾಡುತ್ತಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಕಳಿಸುವ ಬದಲು ಭಾರತದಲ್ಲೇ ಗುಂಡಿಕ್ಕಿ ಸಾಯಿಸಿಬಿಡಿ: ಭಾರತದಲ್ಲಿರುವ ಪಾಕಿಸ್ತಾನೀ ಹಿಂದೂಗಳು
ಬೆಂಗಳೂರಿನಲ್ಲಿ 2,500 ಟ್ರಾವೆಲ್ಸ್ ಏಜೆನ್ಸಿಗಳಿವೆ. ನಿತ್ಯ ಬೆಂಗಳೂರಿನಿಂದ ಶ್ರೀನಗರಕ್ಕೆ 2 ನೇರ ವಿಮಾನಗಳು ಹಾರುತ್ತವೆ. ಅಲ್ಲದೇ ದೇಶದೆ ಬೇರೆ ನಗರಗಳಿಂದಲೂ ಕನ್ನಡಿಗರು ಶ್ರೀನಗರಕ್ಕೆ ತೆರಳುತ್ತಾರೆ. ಹೀಗಾಗಿ, ಬೇಸಿಗೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರವಾಸ ಮಾಡುವವರ ಸಂಖ್ಯೆ ದೊಡ್ಡದಿದೆ. ಉಗ್ರರ ದಾಳಿ ಘಟನೆ ಹಿನ್ನೆಲೆಯಲ್ಲಿ ಖಂಡಿತವಾಗಿ ಈಗ ಎಲ್ಲರಿಗೂ ಭಯ ಕಾಡುತ್ತ್ತಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Mon, 28 April 25







