ಮಕ್ಕಳ ಶಿಕ್ಷಣಕ್ಕಾಗಿ TV ಖರೀದಿಸಲು ಚಿನ್ನದ ತಾಳಿ ಮಾರಿದ ಹೆತ್ತಮ್ಮ, ಎಲ್ಲಿ?
[lazy-load-videos-and-sticky-control id=”-y95VXRA4dA”] ಗದಗ: ಕೊರೊನಾದಿಂದಾಗಿ ಬಡಜನರ ಬದುಕೇ ‘ಅಡ’ಮಾನವಾಗಿರೋ ಸ್ಥಿತಿ ಎದುರಾಗಿದೆ. ಮಾರಿಯ ಆರ್ಭಟದ ನಡುವೆ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಆನ್ಲೈನ್ ಶಿಕ್ಷಣದ ಮೊರೆಹೋಗುವ ಸ್ಥಿತಿ ಉಂಟಾಗಿದೆ. ಈ ನಡುವೆ ತನ್ನ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗಬಾರದೆಂದು ತಾಯಿಯೊಬ್ಬಳು ತನ್ನ ತಾಳಿ ಮಾರಲು ಮುಂದಾಗಿದ್ದಾಳೆ. ಅಂದ ಹಾಗೆ, ಈ ಪ್ರಕರಣ ನಡೆದಿರೋದು ಜಿಲ್ಲೆಯ ನರಗುಂದ ತಾಲೂಕಿನ ನಾಗನೂರಿನಲ್ಲಿ. ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡಚಣೆ ಆಗಬಾರದೆಂದು ಬಯಸಿದ ಈ ಮಹಾ ತಾಯಿ ಕಸ್ತೂರಿ ತನ್ನ […]
[lazy-load-videos-and-sticky-control id=”-y95VXRA4dA”]
ಗದಗ: ಕೊರೊನಾದಿಂದಾಗಿ ಬಡಜನರ ಬದುಕೇ ‘ಅಡ’ಮಾನವಾಗಿರೋ ಸ್ಥಿತಿ ಎದುರಾಗಿದೆ. ಮಾರಿಯ ಆರ್ಭಟದ ನಡುವೆ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಆನ್ಲೈನ್ ಶಿಕ್ಷಣದ ಮೊರೆಹೋಗುವ ಸ್ಥಿತಿ ಉಂಟಾಗಿದೆ. ಈ ನಡುವೆ ತನ್ನ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗಬಾರದೆಂದು ತಾಯಿಯೊಬ್ಬಳು ತನ್ನ ತಾಳಿ ಮಾರಲು ಮುಂದಾಗಿದ್ದಾಳೆ.
ಅಂದ ಹಾಗೆ, ಈ ಪ್ರಕರಣ ನಡೆದಿರೋದು ಜಿಲ್ಲೆಯ ನರಗುಂದ ತಾಲೂಕಿನ ನಾಗನೂರಿನಲ್ಲಿ. ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡಚಣೆ ಆಗಬಾರದೆಂದು ಬಯಸಿದ ಈ ಮಹಾ ತಾಯಿ ಕಸ್ತೂರಿ ತನ್ನ ಚಿನ್ನದ ತಾಳಿಯನ್ನ ಅಡವಿಟ್ಟು ಟಿವಿ ಖರೀದಿಸಿದ್ದಾಳೆ.
ಶಾಲಾ ಮಕ್ಕಳಿಗೆ ಟಿವಿಯಲ್ಲಿ ಪಾಠ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಕಸ್ತೂರಿ ಟಿವಿ ಖರೀದಿಸಿದ್ದಾಳೆ. 7 ಹಾಗೂ 8ನೇ ತರಗತಿ ಓದುತ್ತಿರುವ ತನ್ನ ಮಕ್ಕಳಿಗಾಗಿ ಕಸ್ತೂರಿ ‘ತಾಳಿ ತ್ಯಾಗ’ ಮಾಡುವ ಮೂಲಕ ಇತರರಿಗೆ ಮಾದರಿ ಆಗಿದ್ದಾಳೆ. ‘ದೂರದರ್ಶನ’ಕ್ಕಾಗಿ ಮಮತೆಯ ‘ದರ್ಶನ’ ಮಾಡಿಸಿದ್ದಾಳೆ.
Published On - 11:44 am, Fri, 31 July 20