AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ಗ್ರಾಹಕನ ಖಾತೆಯಿಂದ 61.57 ಲಕ್ಷ ರೂ. ಎಗರಿಸಿದ್ದ ಎಸ್‌ಬಿಐ ಮಾಜಿ ಚೀಫ್ ಮ್ಯಾನೇಜರ್‌ಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಮೈಸೂರು ಕೋರ್ಟ್​

ಮೈಸೂರಿನ ಮಾಜಿ ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಎ.ವಿ. ಕುಲಕರ್ಣಿ ಅವರು 61.57 ಲಕ್ಷ ದುರುಪಯೋಗಪಡಿಸಿಕೊಂಡ ವಂಚನೆ ಪ್ರಕರಣದಲ್ಲಿ ದೋಷಿ ಎಂದು ಮೈಸೂರು ನ್ಯಾಯಾಲಯ ತೀರ್ಪು ನೀಡಿದೆ. ಮೃತ ಗ್ರಾಹಕರ ಖಾತೆ ಮತ್ತು ಬ್ಯಾಂಕಿನ ಆಂತರಿಕ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿದ್ದ ಇವರಿಗೆ 1 ವರ್ಷ ಕಠಿಣ ಕಾರಾಗೃಹವಾಸ ಹಾಗೂ ₹50,000 ದಂಡ ವಿಧಿಸಲಾಗಿದೆ. ಈ ಮಹತ್ವದ ತೀರ್ಪು ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆಗೆ ಒತ್ತು ನೀಡಿದೆ.

ಮೃತ ಗ್ರಾಹಕನ ಖಾತೆಯಿಂದ 61.57 ಲಕ್ಷ ರೂ. ಎಗರಿಸಿದ್ದ ಎಸ್‌ಬಿಐ ಮಾಜಿ ಚೀಫ್ ಮ್ಯಾನೇಜರ್‌ಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಮೈಸೂರು ಕೋರ್ಟ್​
ಸಾಂದರ್ಭಿಕ ಚಿತ್ರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on: Sep 28, 2026 | 3:02 PM

Share

ಮೈಸೂರು, ಸೆ.28: ಮೃತ ಗ್ರಾಹಕರೊಬ್ಬರ ಖಾತೆ ಹಾಗೂ ಬ್ಯಾಂಕಿನ ಆಂತರಿಕ ಖಾತೆಯಿಂದ ಬರೋಬ್ಬರಿ 61.57 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಮಾಜಿ ಮುಖ್ಯ ವ್ಯವಸ್ಥಾಪಕರಿಗೆ ಮೈಸೂರಿನ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಎಸ್‌ಬಿಐ ಮಾಜಿ ಮುಖ್ಯ ವ್ಯವಸ್ಥಾಪಕ ಎ.ವಿ. ಕುಲಕರ್ಣಿ ಅಲಿಯಾಸ್ ಅನಿರುದ್ಧ ವಸಂತರಾವ್ ಕುಲಕರ್ಣಿ ಶಿಕ್ಷೆಗೆ ಗುರಿಯಾದ ದೋಷಿಯಾಗಿದ್ದಾರೆ. ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ (CJM) ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ವಿ. ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

ವಂಚನೆ ನಡೆದಿದ್ದು ಹೇಗೆ?: 2005ರಲ್ಲೇ ಮೃತರಾಗಿದ್ದ ಗ್ರಾಹಕನ ಅಕೌಂಟ್ ದುರ್ಬಳಕೆ

ಆರೋಪಿ ಎ.ವಿ. ಕುಲಕರ್ಣಿ ಅವರು ಮೇ 13, 2009 ರಿಂದ ಡಿಸೆಂಬರ್ 23, 2011 ರವರೆಗೆ ಮೈಸೂರಿನ ಚಾಮುಂಡಿಪುರಂನಲ್ಲಿರುವ ಎಸ್‌ಬಿಐ (SBI) ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿ (Chief Manager) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಭಾರಿ ಅಕ್ರಮ ಎಸಗಿದ್ದರು. ಏಪ್ರಿಲ್ 2005 ರಲ್ಲೇ ನಿಧನರಾಗಿದ್ದ ಕೃಷ್ಣ ಅಯ್ಯರ್ ಎಂಬುವರ ಖಾತೆಯಲ್ಲಿದ್ದ 40.53 ಲಕ್ಷ ರೂಪಾಯಿಗಳನ್ನು ವಂಚನೆಯ ಮೂಲಕ ತಮ್ಮ ಹಾಗೂ ತಮ್ಮ ಮಗನ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಇದರ ಜೊತೆಗೆ ಬ್ಯಾಂಕಿನ ಆಂತರಿಕ ಖಾತೆಯಿಂದ 21.04 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದರು. ಒಟ್ಟು 61.57 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಿ, ನಂತರ ಖಾತೆಯಿಂದ ಹಣ ಹಿಂಪಡೆದು ದುರುಪಯೋಗಪಡಿಸಿಕೊಂಡಿದ್ದರು.

ಇದನ್ನೂ ಓದಿ; ಖಾಸಗಿ ಆಸ್ಪತ್ರೆ ಕೈಚೆಲ್ಲಿದ್ದ ಜೀವಕ್ಕೆ ಮರುಜೀವ: ಸಾವಿನ ದವಡೆಯಿಂದ ಗರ್ಭಿಣಿಯನ್ನು ಪಾರು ಮಾಡಿದ ಮಂಗಳೂರಿನ ಸರ್ಕಾರಿ ವೈದ್ಯರು

ಆಂತರಿಕ ತನಿಖೆ ಮತ್ತು ಹಣ ಮರುಪಾವತಿ:

ಬ್ಯಾಂಕಿನ ಹಿರಿಯ ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯ ವೇಳೆ ಈ ಬೃಹತ್ ಆರ್ಥಿಕ ಅಕ್ರಮ ಬೆಳಕಿಗೆ ಬಂದಿತ್ತು. ತನಿಖೆಯ ವೇಳೆ ಆರೋಪಿ ಕುಲಕರ್ಣಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ತದನಂತರ ಬ್ಯಾಂಕ್‌ಗೆ ಸುಮಾರು 62 ಲಕ್ಷ ರೂಪಾಯಿಗಳನ್ನು ಮರುಪಾವತಿಸಿದ್ದರು. ಆಂತರಿಕ ತನಿಖೆ ಪೂರ್ಣಗೊಂಡ ಬಳಿಕ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಕೂಲಂಕುಷ ತನಿಖೆ ನಡೆಸಿ ಮೈಸೂರಿನ 1ನೇ ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ವಿ. ಅವರು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 409 (ಸಾರ್ವಜನಿಕ ಸೇವಕ ಅಥವಾ ಬ್ಯಾಂಕರ್‌ನಿಂದ ನಂಬಿಕೆ ದ್ರೋಹ) ಅಡಿಯಲ್ಲಿ ಆರೋಪಿ ಎ.ವಿ. ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ್ದಾರೆ. 1 ವರ್ಷದ ಕಠಿಣ ಕಾರಾಗೃಹವಾಸ. 50,000 ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ವಿಧಿಸಲಾದ ದಂಡದ ಮೊತ್ತ ಪೈಕಿ 40,000 ರೂಪಾಯಿಗಳನ್ನು ಸಂಕಷ್ಟಕ್ಕೊಳಗಾಗಿದ್ದ ಬ್ಯಾಂಕ್‌ಗೆ ಪರಿಹಾರವಾಗಿ ಪಾವತಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ಪ್ರಕಾಶ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್