5 ಬಾರಿ OTP ನೀಡಿದ್ದ ಗ್ರಾಹಕ! ಕೊನೆಗೂ ಕುಖ್ಯಾತ ಸೈಬರ್ ಎಕ್ಸ್​ಪರ್ಟ್ ಅಂದರ್

5 ಬಾರಿ OTP ನೀಡಿದ್ದ ಗ್ರಾಹಕ! ಕೊನೆಗೂ ಕುಖ್ಯಾತ ಸೈಬರ್ ಎಕ್ಸ್​ಪರ್ಟ್ ಅಂದರ್

ಬೆಂಗಳೂರು: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿ ಜನರಿಗೆ ವಂಚಿಸಿದ್ದ ನಟೋರಿಯಸ್ ಸೈಬರ್ ಎಕ್ಸ್​ಪರ್ಟ್​ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ಶಿವಪ್ರಸಾದ್​ನನ್ನು ಹಲಸೂರು ಗೇಟ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಮಾತಿನ ವರಸೆಯಿಂದಲೇ ಆರೋಪಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ. ಸಾಮಾನ್ಯ ಜನರನ್ನೇ ಈ ನಟೋರಿಯಸ್ ಸೈಬರ್ ಎಕ್ಸ್​ಪರ್ಟ್ ಟಾರ್ಗೆಟ್ ಮಾಡುತ್ತಿದ್ದ. ಥೇಟ್ ಬ್ಯಾಂಕ್ ಅಧಿಕಾರಿಯ ರೀತಿ ತಾಂತ್ರಿಕ ಮಾಹಿತಿ ನೀಡಿ ಜನರನ್ನು ಖೆಡ್ಡಾಗೆ ಕೆಡವುತ್ತಿದ್ದ.

ರವಿ ಎಂಬುವರ ಬಳಿ ಒಂದೇ ಗಂಟೆಯಲ್ಲಿ 5 ಬಾರಿ OTP ಪಡೆದಿದ್ದ. ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಕ್ರೆಡಿಟ್ ಕಾರ್ಡ್​ನ ಮಾಹಿತಿ ಪಡೆದಿದ್ದ. ಆರೋಪಿ ಮಾತಿಗೆ ಮರುಳಾಗಿ ರವಿ 4-5ಬಾರಿ OTPನೀಡಿದ್ದ. ಬಳಿಕ ಒಂದೇ ಗಂಟೆಯಲ್ಲಿ ಆರೋಪಿ ಶಿವಪ್ರಸಾದ್ 67 ಲಕ್ಷ ಹಣ ವರ್ಗಾವಣೆ ಮಾಡಿದ್ದ. ಹೀಗೆ 10ಕ್ಕೂ ಹೆಚ್ಚು ಜನರ 20 ಲಕ್ಷಕ್ಕೂ ಹೆಚ್ಚು ಹಣ ವರ್ವಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Click on your DTH Provider to Add TV9 Kannada