ಮೇ ಅಥವಾ ಜೂನ್ನಲ್ಲಿ ಈ ಭಾಗದಲ್ಲಿ ತೈಲ ಮತ್ತು ಗ್ಯಾಸ್ ಉತ್ಪಾದನೆ: ಹಾಸನದಲ್ಲಿ ಹರ್ದೀಪ್ ಸಿಂಗ್ ಪುರಿ ಹೇಳಿಕೆ
ಹಾಸನದಲ್ಲಿ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಮೇ ಅಥವಾ ಜೂನ್ನಲ್ಲಿ ಈ ಭಾಗದಲ್ಲಿ ಆಯಿಲ್ ಮತ್ತು ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ಮಂತ್ರಿ ಉಜ್ವಲ್ ಯೋಜನೆಯನ್ನು ಉಚಿತವಾಗಿ ನೀಡುವಂತೆ ಫಲಾನುಭವಿಗಳು ಹೇಳುತ್ತಿದ್ದಾರೆ, ಆದರೆ ಇದು ಅಸಾಧ್ಯ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಹಾಸನ, ಜ.8: ಕೃಷ್ಣ ಗೋದಾವರಿ ಬೇಸ್ನ 30 ಕಿಲೋ ದೂರದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ. ಮೇ ಅಥವಾ ಜೂನ್ನಲ್ಲಿ ಈ ಭಾಗದಲ್ಲಿ ತೈಲ ಮತ್ತು ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ.
ಹಾನಸದಲ್ಲಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಯೋಜನೆ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ಐದು ಲಕ್ಷವರೆಗೂ ನೆರವು ಸಿಗುತ್ತದೆ. ನಾಲ್ಕು ಕೋಟಿ ಜನಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆ ಲಾಭವಾಗಿದೆ. ಕೇಂದ್ರದ ಸಾಕಷ್ಟು ಯೋಜನೆಗಳು ಜನರಿಗಾಗಿ ಜಾರಿಯಲ್ಲಿವೆ ಎಂದರು.
ಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ನಾವು ಜಾರಿಗೆ ತಂದಿರುವುದುದು ಚುನಾವಣೆಯ ಲಾಭಕ್ಕಾಗಿ ಅಲ್ಲ. ಜನರಿಗೆ ಆರ್ಥಿಕ ಸ್ಥಿತಿ ಮತ್ತು ಮೂಲಭೂತ ಸೌಕರ್ಯ ಒದಗಿಸುವುದು ಒಳ್ಳೆಯ ಸರ್ಕಾರದ ಲಕ್ಷಣ ಎಂದರು.
ಇದನ್ನೂ ಓದಿ: ಹಾಸನ: ರಸ್ತೆ ಮಧ್ಯೆ ನಿಂತ ಪೊಲೀಸ್ ಬೆಂಗಾಲು ವಾಹನ; ಗರಂ ಆದ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ
ನಾಲ್ಕು ರಾಜ್ಯಗಳ ಚುನಾವಣಿಯಲ್ಲಿ ಮೂರಲ್ಲಿ ನಾವು (ಬಿಜೆಪಿ) ಗೆದಿದ್ದೇವೆ. ಮೋದಿಯವರ ಗ್ಯಾರೆಂಟಿ ಜನರಿಗೆ ತಲುಪಿದೆ. ಮುಂದೆ ನಡೆಯುವ ಲೋಕಾಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಉತ್ತಮ ಫಲಿತಾಂಶ ಬರಲಿದೆ ಎಂದು ಹರ್ದೀಪ್ ಸಿಂಗ್ ಪುರಿ ವಿಶ್ವಾಸ ವ್ಯಕ್ತಪಡಿಸಿದರು.
ಉಜ್ವಲ ಯೋಜನೆ ಫ್ರೀ ಅಸಾಧ್ಯ
ಉಜ್ವಲ ಯೋಜನೆ ಫಲಾನುಭವಿಗಳಿಗೆ ಈಗಾಗಲೇ ನಾವು 300 ರೂಪಾಯಿ ಸಬ್ಸಿಡಿ ನೀಡುತ್ತಿದ್ದೇವೆ. ಜನರು ಫ್ರೀ ಮಾಡಿ ಅಂತ ಹೇಳುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ಕಡಿಮೆ ಬೆಲೆಗೆ ಜನರಿಗೆ ಸಿಗುವ ಹಾಗೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, ಪ್ರಪಂಚದ ಬೇರೆ ದೇಶಗಳಲ್ಲಿ ಎರಡು ವರ್ಷಗಳಲ್ಲಿ ಮೂವತ್ತರಿಂದ ನಲವತ್ತರಷ್ಟು ಬೆಲೆ ಏರಿಕೆ ಆಗಿದೆ. ಆದರೆ ಭಾರತದಲ್ಲಿ ಕಡಿಮೆ ದರ ಏರಿಕೆ ಆಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ