Climate change: ವಿಶ್ವ ಹವಾಮಾನ ವಿಪರೀತ ಎನಿಸುವಷ್ಟು ಹಾಳಾಗುತ್ತಿದೆ: ಸರಳವಾಗಿ ಈ 10 ಚಟುವಟಿಕೆಗಳ ಕಡೆಗೆ ಗಮನ ಕೊಡಿ!

ಹವಾಮಾನ ವೈಪರೀತ್ಯಗಳಿಂದಾಗಿ ಗುಣಮಟ್ಟದ ಆಹಾರ ಮತ್ತು ಆಹಾರದ ಲಭ್ಯತೆ ಮೇಲೆ ಪರಿಣಾಮ ಬೀರುತ್ತಿದೆ. ಮನುಷ್ಯನ ವಿಪರೀತದ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಯಿಂದ ಕುಡಿಯುವ ನೀರು ಸಿಗುವುದೇ ಕಡಿಮೆಯಾಗುತ್ತಿದೆ. ಇದು ಹೀಗೆಯೇ ದೀರ್ಘಕಾಲದವರೆಗೆ ಮುಂದುವರಿದರೆ ಹಸಿವು ಮತ್ತು ನಿರ್ಜಲೀಕರಣ ಹೆಚ್ಚಾಗುತ್ತದೆ. ಇದು ಕ್ಷಾಮಕ್ಕೆ ದಾರಿ ಮಾಡಿಕೊಡಬಹುದು. ಇದು ಭೂಮಿಯ ಮೇಲಿಂದ ಅಪಾರ ಸಂಖ್ಯೆಯ ಜನರನ್ನು ಅಳಿಸಿಹಾಕಬಹುದು.

Climate change: ವಿಶ್ವ ಹವಾಮಾನ ವಿಪರೀತ ಎನಿಸುವಷ್ಟು ಹಾಳಾಗುತ್ತಿದೆ: ಸರಳವಾಗಿ ಈ 10 ಚಟುವಟಿಕೆಗಳ ಕಡೆಗೆ ಗಮನ ಕೊಡಿ!
ಹವಾಮಾನ ಹಾಳಾಗುತ್ತಿದೆ: ಸರಳವಾದ ಈ 10 ಚಟುವಟಿಕೆಯಲ್ಲಿ ತೊಡಗಿ
Follow us
ಸಾಧು ಶ್ರೀನಾಥ್​
|

Updated on:Apr 25, 2024 | 9:19 AM

ವಿಶ್ವ ಭೂ ದಿನವನ್ನು ವಾರ್ಷಿಕವಾಗಿ ಏಪ್ರಿಲ್ ಅಂತ್ಯದ ವೇಳೆಗೆ (22 ರಂದು) ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದು ಸಮಕಾಲೀನ ಪರಿಸರ ಚಳವಳಿಗಳ ಸಾಧನೆಗಳನ್ನು ಗೌರವಿಸಲು ಮತ್ತು ಭೂಮಿ ಮತ್ತು ಅದರ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಸುಸಂದರ್ಭವಾಗಿದೆ. ಹೆಚ್ಚಿದ ಪ್ಲಾಸ್ಟಿಕ್‌ ಬಳಕೆಯಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಗಮನ ಸೆಳೆಯಲು ಭೂಮಿಯ ದಿನ 2024 ಅನ್ನು ‘ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್’ ಎಂಬ ವಿಷಯವನ್ನಾಗಿ ಮಾಡಲಾಗಿದೆ. ಈ ದಿನದ ಗೌರವಾರ್ಥವಾಗಿ, ತನ್ನಿಮಿತ್ತ ಈ ಹತ್ತಾರು ವಿಷಯಗಳ ಬಗ್ಗೆ ಇರಲಿ ನಿಮ್ಮ ಗಮನ.

1. ಏರುತ್ತಿರುವ ತಾಪಮಾನ ಪ್ರತಿ ವರ್ಷ ಕಳೆದಂತೆ ಭೂ ಗ್ರಹದ ಉಷ್ಣತೆ ಹೆಚ್ಚುತ್ತಿದೆ. USA ಮೂಲದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ (NOAA) ವರದಿಗಳ ಪ್ರಕಾರ, ದಾಖಲಾದ ಅತ್ಯಂತ ಉಷ್ಣ ವರ್ಷ 2023 ಆಗಿತ್ತು. ಮತ್ತು ಮುಂಬರುವ ವರ್ಷಗಳಲ್ಲಿ ತಾಪಮಾನದಲ್ಲಿ ಕ್ರಮೇಣ ಹೆಚ್ಚಳವನ್ನು ಕಾಣುವ ಹೆಚ್ಚಿನ ಅವಕಾಶವಿದೆ ಎಂಬ ಮುನ್ಸೂಚನೆಯಿತ್ತು. ಆದರೆ ಈಗಾಗಲೇ 2024ರ ಬೇಸಿಗೆಯಲ್ಲಿ ಕಡುಬಿಸಿಲು ಅನುಭವ ವೇದ್ಯವಾಗಿದೆ.

2. ಕರಗುತ್ತಿರುವ ಧ್ರುವ ಹಿಮನದಿಗಳು ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದಂತೆ ಆತಂಕಕಾರಿಯಾಗಿ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಪ್ರದೇಶಗಳಲ್ಲಿನ ಹಿಮನದಿಗಳು ಕರಗಲು ಪ್ರಾರಂಭಿಸಿವೆ. ಇದು ಸಮುದ್ರ ಮಟ್ಟದ ಏರಿಕೆಗೆ ಕಾರಣವಾಗಲಿದೆ. ತತ್ಫಲವಾಗಿ ಕರಾವಳಿ ಪ್ರದೇಶಗಳ ಸವೆತವನ್ನು ಹೆಚ್ಚಿಸುತ್ತದೆ.

3. ಹಸಿರುಮನೆ ಪರಿಣಾಮ ಹಸಿರುಮನೆ ಅನಿಲಗಳ ಏರಿಕೆಯು ಗ್ರಹದ ಹವಾಮಾನದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಇಂಗಾಲ ಮತ್ತು ಇತರ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ಭೂಮಿಯ ಮೇಲ್ಮೈಯಲ್ಲಿ ಶಾಖದ ಬಲೆಗೆ ಕಾರಣವಾಗಿದೆ. ಇದು ಭೂಮಿ ಬಿಸಿಯಾಗಲು ಕಾರಣವಾಗುತ್ತಿದೆ.

4. ಋತುಮಾನಗಳ ಅವಧಿಯಲ್ಲಿ ಏರುಪೇರು ಭೂಮಿಯ ಉಷ್ಣತೆ ಕಾಲಕಾಲಕ್ಕೆ ಏರುತ್ತಿರುವುದರಿಂದ ಋತುಮಾನ ಅವಧಿಗಳಲ್ಲಿ ಏರುಪೇರು, ಹವಾಮಾನ ವೈಪರೀತ್ಯ ಮತ್ತು ವಿವಿಧ ಋತುಗಳಲ್ಲಿನ ತಾಪಮಾನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಬೇಸಿಗೆಯಲ್ಲಿ ಬಿಸಿಯಾಗಿರುತ್ತದೆ, ಅದೇ ಚಳಿಗಾಲ ವಿಪರೀತ ತಂಪಾಗುತ್ತಿದೆ. ಪ್ರಸ್ತುತ ಈ ಹವಾಮಾನ ಪರಿಸ್ಥಿತಿಗಳಿಂದಾಗಿ ಮಳೆಯ ಮಾದರಿಗಳಲ್ಲಿ ಏರುಪೇರು ಆಗುತ್ತಿದೆ. ಇದು ಮುಂಗಾರು-ಹಿಂಗಾರು ಪ್ರಮಾಣವನ್ನು ಮತ್ತು ಸಮಯವನ್ನು ಅಡ್ಡಿಪಡಿಸುತ್ತಿದೆ.

5. ಕ್ಷಾಮ ಮತ್ತು ಬಾಯಾರಿಕೆಯಿಂದ ಬಳಲಿಕೆ ಹವಾಮಾನ ವೈಪರೀತ್ಯಗಳಿಂದಾಗಿ ಆಹಾರದ ಲಭ್ಯತೆ ಮತ್ತು ಆಹಾರ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಮನುಷ್ಯನ ವಿಪರೀತದ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಯಿಂದ ಕುಡಿಯುವ ನೀರು ಸಿಗುವುದೇ ಕಡಿಮೆಯಾಗುತ್ತಿದೆ. ಇದು ಹೀಗೆಯೇ ದೀರ್ಘಕಾಲದವರೆಗೆ ಮುಂದುವರಿದರೆ ಹಸಿವು ಮತ್ತು ನಿರ್ಜಲೀಕರಣ ಹೆಚ್ಚಾಗುತ್ತದೆ, ಕ್ಷಾಮ ಮತ್ತು ಬಾಯಾರಿಕೆಯಿಂದ ಬಳಲಿಕೆ ಕಂಡುಬರುತ್ತದೆ. ಇದು ಭೂಮಿಯ ಮೇಲಿಂದ ಅಪಾರ ಸಂಖ್ಯೆಯ ಜನರನ್ನು ಅಳಿಸಿಹಾಕಬಹುದು.

6. ಓಝೋನ್ ಪದರ ಸವಕಳಿ ಕ್ಲೋರೋಫ್ಲೋರೋಕಾರ್ಬನ್ಸ್​​​​ (Chlorofluorocarbons-emitting) ಅನ್ನು ಅಪಾಯಕಾರಿ ಪ್ರಮಾಣದಲ್ಲಿ ಹೊರಹಾಕುವಂತಹ ಗ್ಯಾಜೆಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಓಝೋನ್ ಪದರವು ತೆಳ್ಳಗಾಗುತ್ತಿದೆ. ಓಝೋನ್ ಪದರದ ನಾಶದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಯುವಿ ಕಿರಣಗಳು ಭೂಮಿಯ ಮೇಲ್ಮೈಯನ್ನು ತಲುಪುತ್ತಿದೆ. ಇದರಿಂದ ಮನುಷ್ಯನಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಜೀವ ಸಂಕುಲದ ಮೇಲೆ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.

7. ದುರಸ್ತಿಗೆ ಮೀರಿದ ಹಾನಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತಾದ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್‌ನ ವರದಿಯ ಪ್ರಕಾರ ಪ್ರಪಂಚದಾದ್ಯಂತ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಸರಿಪಡಿಸಲು ತುರ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಅತ್ಯಂತ ಸನಿಹದಲ್ಲಿಯೇ ಅಂದರೆ 2030 ರ ವೇಳೆಗೆ ಹವಾಮಾನ ಬದಲಾವಣೆ ಹೀಗೆಯೆ ಮುಂದುವರಿದರೆ ಅದನ್ನು ತಡೆಗಟ್ಟಲು ಆಗದಷ್ಟು ವಿಪರೀತವಾಗಿಬಿಡಬಹುದು ಎಂದು ಹೇಳಲಾಗುತ್ತದೆ.

8. ಅಳಿವಿನಂಚಿನಲ್ಲಿ ಕೇಳಿಬರುವ ಆರ್ತನಾದಗಳು ಪ್ರಸ್ತುತ ಹವಾಮಾನ ಪರಿಸ್ಥಿತಿಗಳಿಂದಾಗಿ ಭೂಮಿಯ ಮಲಿನ ಜೀವಿಗಳ ಅಳಿವಿನ ಪ್ರಮಾಣವು ಹಿಂದೆಂದು ಕಾಣದಷ್ಟು ಹೆಚ್ಚಾಗಿದೆ. 10 ಲಕ್ಷಕ್ಕೂ ಹೆಚ್ಚು ಜಾತಿಗಳು ಅಳಿವಿನ ಅಂಚಿನಲ್ಲಿವೆ. ಇಂದಿನ ಅಳಿವಿನ ಪ್ರಮಾಣವು ನೈಸರ್ಗಿಕ ಅಳಿವಿನ ಪ್ರಮಾಣಕ್ಕಿಂತ 1000 ಪಟ್ಟು ಅಧಿಕವಾಗಿದೆ. ಭೂಮಿಯ ಮೇಲೆ ಜೀವಿಗಳು ಈ ಪ್ರಮಾಣದಲ್ಲಿ ನಾಶವಾಗುವುದು ಪರಿಸರದ ಸಮತೋಲನದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

9. ಪ್ರಕೃತಿಯಿಂದ ಪ್ರತೀಕಾರ ನಮ್ಮ ದುರಾಸೆಯ ಫಲವಾಗಿ ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಪ್ರಕೃತಿಯು ಪ್ರಾಕೃತಿಕ ವಿಕೋಪಗಳಿಂದ ತಕ್ಕನಾಗಿ ಮರುಪಾವತಿ ಮಾಡುತ್ತಿದೆ. ಮನುಷ್ಯರು ಜವಾಬ್ದಾರಿಯಾಗಿರುವ ಹವಾಮಾನ ಬದಲಾವಣೆಯಿಂದಾಗಿ ಕಾಡ್ಗಿಚ್ಚು, ಬರ, ಪ್ರವಾಹದಂತಹ ವಿಕೋಪಗಳು ಉಂಟಾಗುತ್ತಿವೆ. ಈ ವಿಪರೀತದ ಹಾನಿ ಕಾಯಂ ಆಗುವ ಮೊದಲು ಅದನ್ನು ಹಿಮ್ಮೆಟ್ಟಿಸಲು, ನಾವು ಪ್ರಕೃತಿಯ ಬಗ್ಗೆ ಅಪಾರ ಕಾಳಜಿ ವಹಿಸಬೇಕು, ಅದನ್ನು ಸಂರಕ್ಷಿಸಬೇಕು.

10. ಹವಾಮಾನದ ವೈಪರೀತ್ಯಗಳಿಂದ ಸಕಾರಾತ್ಮಕ ಬದಲಾವಣೆ ಪ್ರತಿ ಋಣಾತ್ಮಕತೆಗೆ, ಧನಾತ್ಮಕ ಭಾಗವೂ ಇರುತ್ತದೆ. ಹಾಗಾಗಿ ಈಗ ತಾಂಡವವಾಡುತ್ತಿರುವ ಹವಾಮಾನ ವೈಪರೀತ್ಯಗಳು ಸಹ ಇದೇ ರೀತಿ ಕೊಂಚ ಮಟ್ಟಿಗೆ ಸಕಾರಾತ್ಮಕ ಬದಲಾವಣೆಯನ್ನೂ ತಂದೊಡ್ಡಲಿದೆ. ಇದು ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್​ನ ಮಂಜುಗಡ್ಡೆಯ ಪ್ರದೇಶಗಳಲ್ಲಿ ಕೃಷಿಗೆ ಅವಕಾಶ ಕಲ್ಪಿಸುತ್ತದೆ. ಇದರಿಂದ ಮುಂದಿನ ಹಿಮಯುಗದ ಸಾಧ್ಯತೆಯನ್ನು ತಡೆಯಬಹುದಾಗಿದೆ. ದೀರ್ಘಾವಧಿಯಲ್ಲಿ ನಿರಂತರವಾಗಿ ಹವಾಮಾನದ ವೈಪರೀತ್ಯಗಳು ಘಟಿಸಿದಾಗ ಕೆಲವು ಪ್ರದೇಶಗಳಲ್ಲಿ ಬೆಳೆ ಉತ್ಪಾದನೆಯಲ್ಲಿ ಹೆಚ್ಚಿಸುವ ಸಾಧ್ಯತೆಯನ್ನು ತಜ್ಞರು ಅಲ್ಲಗಳೆಯುತ್ತಿಲ್ಲ.

ಹವಾಮಾನ ವೈಪರೀತ್ಯ ದಾಳಿಗೆ ತುತ್ತಾಗಿರುವ ಭೂಗ್ರಹ ರಕ್ಷಿಸಲು ಸಹಾಯ ಮಾಡುವ 10 ಸರಳ ಚಟುವಟಿಕೆಗಳು!

ಪ್ರತಿ ವರ್ಷ ಏಪ್ರಿಲ್ 22 ಅಂತರಾಷ್ಟ್ರೀಯ ಭೂತಾಯಿಯ ದಿನ ಆಚರಿಸಲಾಗುತ್ತದೆ. ಭೂಮಿಯ ಮೇಲಿನ ಪರಿಸರಕ್ಕೆ ಅಪಾಯವನ್ನುಂಟುಮಾಡುವ ಮತ್ತು ಗ್ರಹಕ್ಕೆ ಅಪಾಯ ತಂದೊಡ್ಡುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಉದಾಹರಣೆಗೆ ವೇಗವಾಗಿ ಏರುತ್ತಿರುವ ಮಾಲಿನ್ಯ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ. ಪರಿಸರವನ್ನು ಸಂರಕ್ಷಿಸುವ ನಿರ್ಣಾಯಕ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ನಾನಾ ದೇಶಗಳು ಮತ್ತು ಸಂಸ್ಥೆಗಳು ಒಂದಾಗುತ್ತವೆ.

ಮಾಲಿನ್ಯವು ಹಿಂದೆಂದೂ ಕಂಡರಿಯದ ಮಟ್ಟದಲ್ಲಿ ಮತ್ತು ತಾಪಮಾನವು ಹಿಂದಿನ ವರ್ಷಗಳ ದಾಖಲೆಗಳನ್ನು ಮುರಿಯುತ್ತಿರುವ ಅಪಾಯಕಾರಿ ಸಮಯದಲ್ಲಿ ಏಪ್ರಿಲ್ 22, 2024 ರಂದು 54 ನೇ ಭೂ ದಿನವನ್ನು ಸ್ಮರಿಸಲಾಯಿತು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅಭಿಯಾನಗಳನ್ನು ಆಯೋಜಿಸಿದರು. ಭೂ ಗ್ರಹದ ಆರೋಗ್ಯ ಕಾಪಾಡಿಕೊಳ್ಳಲು ಬದ್ಧತೆಯನ್ನು ತೋರಿದರು. ಭೂ ದಿನವನ್ನು ವಿವಿಧ ಸೆಮಿನಾರ್‌ಗಳು, ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಇಂತಹ ಆಧುನಿಕ ಪರಿಸರ ಚಳುವಳಿಗಳು ಭವಿಷ್ಯದಲ್ಲಿ ಉತ್ತಮ ಜೀವನಕ್ಕಾಗಿ ಗ್ರಹವನ್ನು ಪೋಷಿಸುವ ಅಗತ್ಯವನ್ನು ಜಗತ್ತಿಗೆ ಅರಿತುಕೊಳ್ಳಲು ಸಹಾಯ ಮಾಡುತ್ತದೆ.

ಭೂ ದಿನದ ಇತಿಹಾಸ ಯುಎಸ್ ಸೆನೆಟರ್ ಮತ್ತು ಪರಿಸರವಾದಿ ಗೇಲಾರ್ಡ್ ನೆಲ್ಸನ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿ ಡೆನಿಸ್ ಹೇಯ್ಸ್ ಇದನ್ನು ಮೊದಲ ಬಾರಿಗೆ ಆಯೋಜಿಸಿದರು. ನೆಲ್ಸನ್ ಮತ್ತು ಹೇಯ್ಸ್ ಅವರುಗಳು ಅಮೆರಿಕದಲ್ಲಿ ಪರಿಸರ ಹಾನಿಯ ಬಗ್ಗೆ ಚಿಂತಿತರಾಗಿದ್ದರು. ವಿಶೇಷವಾಗಿ 1969 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಗಮನಾರ್ಹವಾದ ತೈಲ ಸೋರಿಕೆಯ ನಂತರ ಈ ಅಭಿಯಾನ ಯೋಜಿಸಿದರು.

ಏಪ್ರಿಲ್ 22, 1970 ರಂದು, ಜಲಮಾಲಿನ್ಯ, ತೈಲ ಸೋರಿಕೆಗಳು, ಕಾಡಿನ ಬೆಂಕಿ, ವಾಯು ಮಾಲಿನ್ಯ ಮುಂತಾದ ಪರಿಸರದ ಬಿಕ್ಕಟ್ಟುಗಳ ವಿರುದ್ಧ 20 ಮಿಲಿಯನ್ ಅಮೇರಿಕನ್ ನಾಗರಿಕರು ನಗರದಾದ್ಯಂತ ಬೀದಿಗಿಳಿದರು. ಆ ಬೀದಿ ಪ್ರತಿಭಟನೆಯು ದೊಡ್ಡ ಸಂಚಲನವನ್ನು ಸೃಷ್ಟಿಸಿತು ಮತ್ತು ನೂರಾರು ಸಂಖ್ಯೆಯಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ನಗರಗಳು ಕ್ರಮೇಣ ಕ್ರಾಂತಿಯನ್ನು ಸೇರಿಕೊಂಡವು, ಇದು ಜಗತ್ತಿನ ಅತಿದೊಡ್ಡ ಪ್ರತಿಭಟನೆಗಳಲ್ಲಿ ಒಂದಾಗಿದೆ.

ಈ ಬಾರಿ ಭೂ ದಿನದ ಘೋಷ ವಾಕ್ಯ ಈ ವರ್ಷದ ಘೋಷ ವಾಕ್ಯ ಪ್ಲಾನೆಟ್ ವರ್ಸಸ್ ಪ್ಲ್ಯಾಸ್ಟಿಕ್ಸ್. ಇದು ಪ್ಲಾಸ್ಟಿಕ್ ಮಾಲಿನ್ಯವು ಮಾನವ ಮತ್ತು ಪರಿಸರದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದನ್ನು 2024 ರ ಅಂತ್ಯದ ವೇಳೆಗೆ ಅಳವಡಿಸಿಕೊಳ್ಳಲಾಗುವುದು. 2040 ರ ವೇಳೆಗೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಲೇಬೇಕು ಎಂದು 50 ಕ್ಕೂ ಹೆಚ್ಚು ರಾಷ್ಟ್ರಗಳು ಒತ್ತಾಯಿಸಿವೆ. ಇದಕ್ಕೆ ಇಂಬು ನೀಡುವಂತೆ ಈ ಮಹತ್ತರವಾದ ಬದಲಾವಣೆಯನ್ನು ತರಲು ಭೂ ದಿನದ ಸಂದರ್ಭದಲ್ಲಿ ನಿಮ್ಮ ದಿನಚರಿಯಲ್ಲಿ ಈ 10 ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬಹುದು. ನೆನಪಿಡಿ, ನೀವು ಕೈಗೊಳ್ಳುವ ಈ ಸಣ್ಣ ಸಣ್ಣ ಚಟುವಟಿಕೆಯೂ ಭೂ ಗ್ರಹದ ಮೇಲೆ ಧನಾತ್ಮಕ ವ್ಯತ್ಯಾಸವನ್ನು ತರಬಲ್ಲದು. ಸುಸ್ಥಿರ ಭವಿಷ್ಯಕ್ಕಾಗಿ 10 ಭೂ ದಿನದ ಚಟುವಟಿಕೆಗಳು ಇಲ್ಲಿವೆ:

1. ಗಿಡ ಮರಗಳು ಭೂಮಿಯ ದಿನದಂದು ಯಾರೇ ಆಗಲಿ ಮಾಡಬಹುದಾದ ಅಗ್ರಗಣ್ಯ ವಿಷಯ ಇದಾಗಿದೆ. ಮರಗಳು ನಮ್ಮ ಸುತ್ತಮುತ್ತಲ ಪ್ರದೇಶವನ್ನು ಸುಂದರಗೊಳಿಸುವುದಲ್ಲದೆ, ಆ ಪರಿಸರದಲ್ಲಿ ಆಮ್ಲಜನಕ ಉತ್ಪಾದನೆಗೆ ಮತ್ತು ಎಲ್ಲ ರೀತಿಯ ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ. ಇದು ದುಬಾರಿ ಇಂಧನವನ್ನು ಉಳಿಸುತ್ತದೆ. ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮನುಷ್ಯನ ಒಳ್ಳೆಯದಕ್ಕಾಗಿ ಮರವನ್ನು ನೆಡಬೇಕು.

2. ಬಳಕೆ ಕಡಿಮೆ ಮಾಡಿ, ಅದನ್ನೇ ಮರುಬಳಕೆ ಮಾಡಿ ಮತ್ತು ಮರು ಸಂಸ್ಕರಣೆ ಮಾಡಿ ಈ ಮೂರು ಬಲಿಷ್ಠ, ಶ್ರೇಷ್ಠ ತತ್ತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಭೂಮಿಯನ್ನು ಉಳಿಸಿಕೊಳ್ಳಬಹುದಾಗಿದೆ. ಜೈವಿಕವಾಗಿ ಕರಗದ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ, ಸಾಧ್ಯವಾದಾಗಲೆಲ್ಲಾ ವಸ್ತುಗಳನ್ನು ಮರುಬಳಕೆ ಮಾಡಿ.

3. ಇಂಧನವನ್ನು ಉಳಿಸಿ ಬಳಕೆಯಲ್ಲಿ ಇಲ್ಲದಿದ್ದಾಗ ವಿದ್ಯುತ್​​ ದೀಪಗಳು ಮತ್ತು ಎಲೆಕ್ಟ್ರಾನಿಕ್​ ಪರಿಕರಗಳನ್ನು ಆಫ್ ಮಾಡಿ, ಚಾರ್ಜರ್‌ಗಳನ್ನು ಅನ್‌ ಪ್ಲಗ್ ಮಾಡಿ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇಂಧನದ ದಕ್ಷ ಬಳಕೆಗೆ ಇರುವ ಮಾರ್ಗೋಪಾಯಗಳನ್ನು ಪರಿಗಣಿಸಿ. ಇದು ನಿಮ್ಮ ಹಣವನ್ನೂ ಉಳಿಸುವುದಲ್ಲದೆ ಮಾಲಿನ್ಯವನ್ನು ತಡೆಯಲು ಸಹ ಸಹಾಯ ಮಾಡುತ್ತದೆ.

4. ನೀವೂ ಜಾಗೃತರಾಗಿ, ಜಾಗೃತಿಯನ್ನೂ ಹರಡಿ ಭೂ ದಿನದಂದು ನಿಮ್ಮ ಗ್ರಹವನ್ನು ಉಳಿಸಲು ಸಹಾಯ ಮಾಡುವ ಇನ್ನೂ ಒಂದು ಮಾರ್ಗವಾಗಿದೆ. ಸಂಸ್ಥೆಗಳು ಮತ್ತು ಶಾಲೆಗಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವಾಗ, ವಯಸ್ಸಾದವರು ಪರಿಸರ ಹಾನಿಗೆ ಕಾರಣವಾಗುವ ಅವರ ಕ್ರಿಯೆಗಳ ಬಗ್ಗೆ ಗಮನ ಹರಿಸಬೇಕು. ಪರಿಸರ ಸಮಸ್ಯೆಗಳ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಾರಕ್ಕೊಮ್ಮೆಯಾದರೂ ಚರ್ಚೆ ಮಾಡಿ. ಸಾಧುವಾದ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇತರರನ್ನೂ ಪ್ರೋತ್ಸಾಹಿಸಿ.

5. ನೀರಿನ ಬಗ್ಗೆ ತಿಳಿವಳಿಕೆಯಿರಲಿ ನೀವು ಹಲ್ಲುಜ್ಜುವಾಗ, ಶೇವಿಂಗ್ ಮಾಡುವಾಗ ಅಥವಾ ಬೇರೆ ಕೆಲಸ ಮಾಡುವಾಗ ಟ್ಯಾಪ್ ಆಫ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಕಡಿಮೆ ಸ್ನಾನ ಮಾಡಿ, ಸೋರುವ ಕೊಳಾಯಿಗಳನ್ನು ಸರಿಪಡಿಸಿ. ಅಡುಗೆ ಪಾತ್ರೆಗಳನ್ನು ತೊಳೆಯುವಾಗ ನೀರಿನ ದುಂದುವೆಚ್ಚ ಮಾಡಬೇಡಿ. ಕೈತೋಟಕ್ಕೆ ಬುದ್ಧಿವಂತಿಕೆಯಿಂದ ನೀರು ಹಾಕಿ. ಅಲ್ಲದೆ, ಅಂಗಡಿಗಳಲ್ಲಿ ಸಿಗುವ ಬಾಟಲ್ ನೀರಿನ ಬದಲಿಗೆ ಮನೆಯಲ್ಲಿ ಫಿಲ್ಟರ್ ಮಾಡಿದ ಟ್ಯಾಪ್ ನೀರನ್ನು ಕುಡಿಯಿರಿ. ಇದು ನಿಮಗೆ ಬಹಳಷ್ಟು ಹಣವನ್ನು ಉಳಿಸುತ್ತದೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ. ನೆನಪಿಡಿ, ಪ್ರತಿ ಹನಿ ನೀರನ್ನು ಲೆಕ್ಕಾಚಾರದೊಂದಿಗೆ ಬಳಸಿದರೆ ಅದ್ಭುತಗಳನ್ನು ಮಾಡಬಹುದು ಎಂಬುದನ್ನು ಮರೆಯದಿರಿ.

6. ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟುಬಿಡಿ ಮನುಷ್ಯರು ಪ್ಲಾಸ್ಟಿಕ್‌ಗೆ ದಾಸರಾಗಿದ್ದಾರೆ. ಪ್ರಪಂಚದಾದ್ಯಂತ ಕೋಟ್ಯಂತರ ಜನರು ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಖರೀದಿಸುತ್ತಾರೆ. ಮತ್ತು ಪ್ರತಿ ವರ್ಷ 5 ಟ್ರಿಲಿಯನ್ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಾರೆ. ಈ ಚಕ್ರವನ್ನು ಮುರಿದು ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವ ಸಮಯ ಇದೀಗ ಬಂದಿದೆ. ಪ್ಲಾಸ್ಟಿಕ್ ಶಾಪಿಂಗ್ ಬ್ಯಾಗ್‌ಗಳು, ಬಾಟಲ್ ನೀರು ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಖರೀದಿಸುವುದು ಬೇಡ ಎಂದು ಹೇಳುವ ಮೂಲಕ ಅಭಿಯಅನ ಪ್ರಾರಂಭಿಸಿ. ಬದಲಾಗಿ, ಆರೋಗ್ಯಕರ ಭೂ ಗ್ರಹವನ್ನು ರಚಿಸಲು ಬಟ್ಟೆ ಚೀಲಗಳು ಮತ್ತು ಮರುಬಳಕೆಯ ಪಾತ್ರೆಗಳನ್ನು ಬಳಸಿ.

7. ನಡಿಗೆಗೆ ಪ್ರಾಶಸ್ತ್ಯ ಕೊಡಿ, ಬೈಕ್ ಅಥವಾ ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡಿಕೊಳಿ ಬೈಕ್, ವಾಕ್, ಕಾರ್‌ಪೂಲ್ ಮೂಲಕ ಪ್ರಯಾಣಿಸಿ, ಸಾಧ್ಯವಾದಾಗಲೆಲ್ಲಾ ಸಾರ್ವಜನಿಕ ಸಾರಿಗೆಯನ್ನು ಬಳಸಿ, ಏಕೆಂದರೆ ಇವು ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಲು ಸ್ಪಷ್ಟ ದಾರಿಗಳಾಗಿವೆ. ಇದು ನಿಮ್ಮ ಇಂಗಾಲದ ಹೆಜ್ಜೆಗುರುತು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

8. ಸುಸ್ಥಿರ ಆಹಾರವನ್ನು ಸೇವಿಸಿ ಸಣ್ಣ ತರಕಾರಿ ಕೈ ತೋಟವನ್ನು ಮಾಡಿಕೊಳಿ. ಸ್ವಂತವಾಗಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಿರಿ ಅಥವಾ ಸ್ಥಳೀಯ ರೈತರು ಬೆಳೆದ ಆಹಾರ ಬೆಳೆಯನ್ನು ಬಳಸಿ.

9. ಸ್ವಯಂಪ್ರೇರಣೆಯಿಂದ ಮುಂದಾಗಿ ರಸ್ತೆ ಬದಿಯ ಕಸ ತೆಗೆಯುವುದು ಯಾರೋ ಒಂದಿಬ್ಬರು ಮಾಡಿದರೆ ಸಾಲದು. ಒಗ್ಗೂಡಿ ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದ್ದರಿಂದ, ಸಮುದಾಯದಲ್ಲಿ ಸ್ವಚ್ಛತೆಗಾಗಿ ಸ್ವಯಂಸೇವಕರಾಗಲು ಮುಂದೆಬನ್ನಿ.

10. ಕಾಂಪೋಸ್ಟಿಂಗ್ ಪ್ರಯತ್ನಿಸಿ ಬಾಳೆಹಣ್ಣು, ಕಿತ್ತಳೆ ಸಿಪ್ಪೆಗಳನ್ನು ಮತ್ತಿತರ ಉತ್ಪನ್ನಗಳ ತ್ಯಾಜ್ಯಗಳನ್ನು ಕಾಂಪೋಸ್ಟ್ ಬಿನ್‌ನಲ್ಲಿ ಸಂಗ್ರಹಿಸಿ. ಆ ಕಾಂಪೋಸ್ಟ್ ಉತ್ತಮ ನೈಸರ್ಗಿಕ ರಸಗೊಬ್ಬರವಾಗುತ್ತದೆ.

Published On - 2:38 pm, Wed, 24 April 24

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ