AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ರಾಜ್ಯಕ್ಕೆ ಬೆಳಕು ನೀಡೋ ಊರಲ್ಲೇ ಕತ್ತಲು: ಜೆಸ್ಕಾಂ ಕಣ್ಣಾಮುಚ್ಚಾಲೆಗೆ ಸಿಡಿದೆದ್ದ ರೈತರು

ಮಳೆ ಇಲ್ಲದ ಕಾರಣ ತೀವ್ರ ಬರಗಾಲದಿಂದ ಕಂಗಾಲಾಗಿರೋ ರಾಯಚೂರು ಜಿಲ್ಲೆ ರೈತರೀಗ ಅಕ್ಷರಶಃ ಕೆರಳಿದ್ದಾರೆ. ರಾಯಚೂರಿನಲ್ಲಿ ಉತ್ಪಾದನೆಯಾಗೋ ವಿದ್ಯುತ್ ಇಡೀ ರಾಜ್ಯಕ್ಕೆ ಬೆಳಕು ನೀಡುತ್ತಿದೆ. ಆದ್ರೆ ಹಿತ್ತಲ ಗಡಿ ಮದ್ದಲ್ಲ ಅನ್ನೋ ಗಾದೆಯ ಹಾಗೇ, ವಿದ್ಯುತ್ ಉತ್ಪಾದನೆ ಮಾಡೋ ರಾಯಚೂರು ಜಿಲ್ಲೆ ರೈತರಿಗೆ ಬೇಕಾಬಿಟ್ಟಿ ವಿದ್ಯುತ್ ಪೂರೈಕೆಯಾಗ್ತಿದೆ. ಹೀಗಾಗಿ ಬೆಳೆ ಒಣಗಿ ಹೋಗ್ತಿದ್ದು ರೈತರು ಹೋರಾಟದ ಹಾದಿ ಹಿಡಿದ್ದಾರೆ.

ಇಡೀ ರಾಜ್ಯಕ್ಕೆ ಬೆಳಕು ನೀಡೋ ಊರಲ್ಲೇ ಕತ್ತಲು: ಜೆಸ್ಕಾಂ ಕಣ್ಣಾಮುಚ್ಚಾಲೆಗೆ ಸಿಡಿದೆದ್ದ ರೈತರು
Gescom
ಭೀಮೇಶ್​​ ಪೂಜಾರ್
| Edited By: |

Updated on:Sep 14, 2026 | 3:47 PM

Share

ರಾಯಚೂರು, (ಸೆಪ್ಟೆಂಬರ್ 14): ಭೀಕರ ಬರಗಾಲ,ಅಕ್ಷರಶಃ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಇತ್ತ ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಕೂಡ ಬರ ಪೀಡಿತ ಅಂತ ಘೋಷಣೆಯಾಗಿದ್ದು, ರೈತರ ಬದುಕು ಬರಗಾಲದಿಂದ ಬೀದಿಗೆ ಬಿದ್ದಿದೆ. ಆದ್ರೆ ಜಿಲ್ಲೆಯ ಅನೇಕ ರೈತರು ಬೆಳೆ ಉಳಿಸಿಕೊಳ್ಳಲು ಕೊಳವೆ ಬಾವಿಗಳು,ಪಂಪ್ ಸೆಟ್ ಗಳ ಮೂಲಕ ನೀರು ಹರಿಸಿ ಒಣಗಿ ಹೋಗುತ್ತಿರೋ ಭತ್ತ,ತರಕಾರಿಗಳು,ಇತರೆ ಬೆಳೆಗಳನ್ನು ಕಾಪಾಡಿಕೊಳ್ಳಬೇಕಂದ್ರೆ ವಿದ್ಯುತ್ ಸಮಸ್ಯೆ. ಹೌದು…ಜೆಸ್ಕಾಂ ರಾಯಚೂರಿನಲ್ಲಿ ಬೇಕಾಬಿಟ್ಟಿ ವಿದ್ಯುತ್ ಕಡಿತ ಮಾಡುತ್ತಿದೆ. 12 ಗಂಟೆ ಬದಲು ಬರೀ 5 ಗಂಟೆ ಪೂರೈಕೆ ಮಾಡುತ್ತಿದ್ದು, ಗಾಯದ ಮೇಲೆ ಬರೆ ಎಳೆಯುತ್ತಿದೆ. ಇದರಿಂದ ರೈತರು ಸಹ ಸಿಡಿದೆದ್ದಿದ್ದಾರೆ.

ಜೆಸ್ಕಾಂ ಕೂಡ 12 ಗಂಟೆ ರೈತರ ಪಂಪ್ ಸೆಟ್ ಗಳಿಗಾಗಿ ವಿದ್ಯುತ್ ಈ ವರೆಗೆ ಪೂರೈಕೆ ಮಾಡ್ತಿತ್ತು. ಆದ್ರೀಗ ಕಳೆದ ಕೆಲ ದಿನಗಳಿಂದ ಏಕಾಏಕಿ 12 ಗಂಟೆ ಬದಲು ಬರೀ 5 ಗಂಟೆ ಮಾತ್ರ ಜೆಸ್ಕಾಂ ವಿದ್ಯುತ್ ಪೂರೈಸುತ್ತಿದೆ. ಇದರಿಂದ ಬೆಳೆಗಳು ನೀರಿಲ್ಲದೇ ಒಣಗಿ ಹೋಗ್ತಿದೆ..ಇದೇ ಕಾರಣಕ್ಕೆ ರೈತರು ರಾಯಚೂರಿನ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕ ಆಕ್ರೋಶ ಹೊರಹಾಕಿದ್ದಾರೆ.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡೋ ಜಿಲ್ಲೆಯಲ್ಲೇ ಕರೆಂಟ್ ಸಮಸ್ಯೆ

ಪಂಪ್‌ಸೆಟ್‌ ಹಾಗೂ ಕೊಳವೆಬಾವಿಗಳ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳುತ್ತಿದ್ದ ರೈತರಿಗೆ, ಇದೀಗ ಅತಿಯಾದ ವಿದ್ಯುತ್ ಕಡಿತ ಮತ್ತಷ್ಟು ಆತಂಕ ತಂದಿದೆ. ಆದ್ರೆ ಬೇಕಾಬಿಟ್ಟಿ ವಿದ್ಯುತ್ ಕಡಿತದಿಂದ ರೈತರು ಕೆರಳಿದ್ದಾರೆ. ಯಾಕಂದ್ರೆ ರಾಯಚೂರಿನಲ್ಲಿ ಎರಡು ವಿದ್ಯುತ್ ಸ್ಥಾವರಗಳಿವೆ. ಈ ಎರಡು ವಿದ್ಯುತ್ ಸ್ಥಾವರಗಳು ಇಡೀ ರಾಜ್ಯಕ್ಕೆ ಬೆಳಕು ನೀಡ್ತವೆ. ಆದ್ರೆ ವಿದ್ಯುತ್ ಸ್ಥಾವರಗಳಿಂದ ಜಮೀನು,ಆಸ್ತಿ-ಪಾಸ್ತಿ ಕಳೆದುಕೊಂಡು,ಆ ವಿದ್ಯುತ್ ಸ್ಥಾವರಗಳ ಮಾಲಿನ್ಯಕ್ಕೆ ಈ ಭಾಗದ ರೈತರು,ಜನ ಸಮಸ್ಯೆಗೀಡಾಗಿದ್ದಾರೆ. ಆದ್ರೆ ಜೆಸ್ಕಾಂ ಮಾತ್ರ ಈ ನಾವೇ ವಿದ್ಯುತ್ ಉತ್ಪಾದನೆ ಮಾಡಿದ್ರೂ,ಕಷ್ಟ ಕಾಲದಲ್ಲಿ ನಮ್ಮ ರೈತರಿಗೆ ವಿದ್ಯುತ್ ಕಡಿತಗೊಳಿಸಿ ದ್ರೋಹ ಮಾಡ್ತಿದೆ ಅಂತ ರೈತರು ಕೆರಳಿದ್ದಾರೆ. 12 ಗಂಟೆ ಬದಲು ಐದು ಗಂಟೆ ವಿದ್ಯುತ್ ಕೊಡ್ತಾರೆ. ಅದು ಬೆಳಿಗ್ಗೆ ಕೊಡ್ತಾರೋ ಇಲ್ಲಾ,ರಾತ್ರಿ ಕೊಡ್ತಾರೋ ಗೊತ್ತಿಲ್ಲ.ಇದರಿಂದ ಬೆಳೆ ಒಣಗಿ ಹೋಗ್ತಿವೆ ಎನ್ನುವುದು ರೈತರ ಅಳಲು.

ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು

ಇದೇ ಕಾರಣಕ್ಕೆ ಈಗಾಗಲೇ ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದ್ದಾರೆ..ಶೀಘ್ರವೇ ಮೊದಲಿನಂತೆ ಈ ಭಾಗದ ರೈತರ ಹಿತದೃಷ್ಟಿಯಿಂದ 12 ಗಂಟೆ ನೀರು ಹೊಡಲೇಬೇಕು ಅಂತ ಪಟ್ಟುಹಿಡಿದಿದ್ದಾರೆ. ಒಂದು ವೇಳೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕೊಡದೇ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ. ಸದ್ಯ ರೈತರ ಹೋರಾಟಕ್ಕೆ ಜೆಸ್ಕಂ ಅಧಿಕಾರಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು,ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡೋ ಭರವಸೆ ನೀಡಿದ್ದಾರೆ. ಆದ್ರೆ ಯಾವಾಗಿನಿಂದ 12 ಗಂಟೆ ವಿದ್ಯುತ್ ರೈತರಿಗೆ ಪೂರೈಕೆ ಪುನರಾರಂಭವಾಗತ್ತೋ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Mon, 14 September 26

Follow Us