AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್‌ ದರ ಹೊರತಾಗಿ ಆದಾಯ ಗಳಿಸಲು ಮುಂದಾದ BMTC: ಬಸ್​​ಗಳಲ್ಲಿ ಆಡಿಯೋ ಜಾಹೀರಾತಿಗೆ ಟೆಂಡರ್​​

ಟಿಕೆಟೇತರ ಆದಾಯ ಹೆಚ್ಚಿಸಲು ಬಿಎಂಟಿಸಿ 300 ನಾನ್-ಎಸಿ ಬಸ್‌ಗಳಲ್ಲಿ ಆಡಿಯೋ ಜಾಹೀರಾತು ಪ್ರಸಾರಕ್ಕೆ ಟೆಂಡರ್ ಆಹ್ವಾನಿಸಿದ್ದು, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಇದಾಗಿದೆ. ಆದರೆ ಈ ಬಗ್ಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೀಕ್ ಅವರ್‌ಗಳಲ್ಲಿ ಈ ಜಾಹೀರಾತುಗಳು ಜೋರಾಗಿ ಪ್ರಸಾರವಾಗಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದರೆ, ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ಟಿಕೆಟ್‌ ದರ ಹೊರತಾಗಿ ಆದಾಯ ಗಳಿಸಲು ಮುಂದಾದ BMTC: ಬಸ್​​ಗಳಲ್ಲಿ ಆಡಿಯೋ ಜಾಹೀರಾತಿಗೆ ಟೆಂಡರ್​​
ಟಿಕೆಟ್‌ ದರ ಹೊರತಾಗಿ ಆದಾಯ ಗಳಿಸಲು ಮುಂದಾದ BMTCImage Credit source: PTI
ಪ್ರಸನ್ನ ಹೆಗಡೆ
|

Updated on:Sep 14, 2026 | 2:41 PM

Share

ಬೆಂಗಳೂರು, ಸೆಪ್ಟೆಂಬರ್​​ 14: ಟಿಕೆಟ್‌ ದರ ಹೊರತಾಗಿ ಜಾಹೀರಾತುಗಳ ಮೂಲಕ ಆದಾಯ ಗಳಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಡಿಯೋ ಜಾಹೀರಾತು ವ್ಯವಸ್ಥೆ ಅಳವಡಿಸಿ ನಿರ್ವಹಿಸಲು ಕಳೆದ ವಾರ ಟೆಂಡರ್ ಕರೆದಿದೆ. ಹೀಗಾಗಿ ಇನ್ನು ಮುಂದೆ ಪ್ರತಿನಿತ್ಯ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಆಡಿಯೋ ಜಾಹೀರಾತುಗಳನ್ನು ಕೇಳಬೇಕಾಗಬಹುದು. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸಂಚರಿಸುವ 300 ನಾನ್‌-ಎಸಿ BMTC ಬಸ್‌ಗಳಲ್ಲಿ ಆಡಿಯೋ ಜಾಹೀರಾತುಗಳನ್ನು ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಆಯ್ಕೆಯಾಗುವ ಏಜೆನ್ಸಿಯು ಸಂಪೂರ್ಣ ವ್ಯವಸ್ಥೆಯನ್ನು ಪೂರೈಸಿ, ಅಳವಡಿಸಿ, ನಿರ್ವಹಣೆ ಹಾಗೂ ಕಾರ್ಯಾಚರಣೆ ಮಾಡಬೇಕಾಗುತ್ತದೆ.

ದಕ್ಷಿಣ ಭಾರತದಲ್ಲೇ ಇಂತಹ ವ್ಯವಸ್ಥೆ ಮೊದಲು

ದಕ್ಷಿಣ ಭಾರತದಲ್ಲೇ ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು BMTC ತಿಳಿಸಿದೆ. ಬಿಎಂಟಿಸಿಯ ಸಾಮಾನ್ಯ, ಎಕ್ಸ್‌ಪ್ರೆಸ್‌ ಹಾಗೂ ರಾತ್ರಿ ಸೇವೆಯ ಬಸ್‌ಗಳಲ್ಲಿ ಈ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತದೆ. ಕನ್ನಡದ ಪ್ರತಿ ಆಡಿಯೋ ಜಾಹೀರಾತು ಸ್ಲಾಟ್‌ ಗರಿಷ್ಠ 10 ಸೆಕೆಂಡ್‌ಗಳವರೆಗೆ ಇರಲಿದ್ದು, ಇಂಗ್ಲಿಷ್ ಅನುವಾದ ಐಚ್ಛಿಕವಾಗಿರಲಿದೆ. ಪ್ರತಿ ಬಸ್‌ಗೆ ತಿಂಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಆಯ್ಕೆಯಾಗುವ ಸಂಸ್ಥೆಗೆ ಮೂರು ವರ್ಷಗಳ ಗುತ್ತಿಗೆ ನೀಡಲಾಗುತ್ತಿದ್ದು, ನಂತರ ಅದನ್ನು ವಿಸ್ತರಿಸುವ ಅವಕಾಶವೂ ಇರಲಿದೆ.

LIVE TV

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ಹಳೆಯ ವಾಹನಗಳ ಸಂಖ್ಯೆ ಹೆಚ್ಚಳ: ಮೂರು ವರ್ಷದಲ್ಲಿ 14,042 ವಾಹನಗಳು ಗುಜರಿಗೆ

ನಿಲ್ದಾಣದ ಘೋಷಣೆಗಳಿಗಿರಲ್ಲ ಅಡ್ಡಿ

ಈ ವ್ಯವಸ್ಥೆಯ ಮೂಲಕ ಈಗಾಗಲೇ ಅಳವಡಿಸಲಾಗಿರುವ GPS ವ್ಯವಸ್ಥೆಯೊಂದಿಗೆ ಸಂಯೋಜಿಸಿ ಸ್ಥಳ ಆಧಾರಿತ ಜಾಹೀರಾತುಗಳನ್ನು ಪ್ರಸಾರ ಮಾಡಲು BMTC ಯೋಜಿಸಿದೆ. ಪ್ರಯಾಣಿಕರ ನಿಲ್ದಾಣದ ಘೋಷಣೆಗಳಿಗೆ ಯಾವುದೇ ಅಡ್ಡಿಯಾಗದಂತೆ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತದೆ. ಒಟ್ಟು ಜಾಹೀರಾತು ಪ್ರಸಾರದ ಸಮಯದಲ್ಲಿ ಶೇ.10ರಷ್ಟು ಸಮಯವನ್ನು BMTC ತನ್ನದೇ ಘೋಷಣೆಗಳು, ಸಾರ್ವಜನಿಕ ಸೇವಾ ಸಂದೇಶಗಳು ಹಾಗೂ ಅಧಿಕೃತ ಮಾಹಿತಿಗಾಗಿ ಮೀಸಲಿಡಲಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ಬಸ್‌ಗಳಿಗೆ ವಿಸ್ತರಿಸುವ ಉದ್ದೇಶವನ್ನೂ BMTC ಹೊಂದಿದೆ ಎನ್ನಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಧ್ವನಿಯ ಪ್ರಮಾಣ, ಜಾಹೀರಾತುಗಳ ಗುಣಮಟ್ಟ ಹಾಗೂ ಭಾಷಾ ನಿಯಮಗಳನ್ನು ನಿಯಂತ್ರಿಸುವುದಾಗಿ BMTC ಭರವಸೆ ನೀಡಿದೆ. ಆದರೆ, ಈ ವ್ಯವಸ್ಥೆಯಿಂದ ತಮ್ಮ ಪ್ರಯಾಣಕ್ಕೆ ತೊಂದರೆಯಾಗಬಹುದು ಎಂಬ ಆತಂಕವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ. ಪೀಕ್ ಅವರ್‌ಗಳಲ್ಲಿ ಈ ಜಾಹೀರಾತುಗಳು ಜೋರಾಗಿ ಪ್ರಸಾರವಾಗಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದರೆ, ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು. ಬಸ್‌ ನಿಲ್ದಾಣಗಳ ಘೋಷಣೆಗಳಿಗೂ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂಬ ಅಭಿಪ್ರಾಯ ಪ್ರಯಾಣಿಕವಲಯದಿಂದ ಕೇಳಿಬಂದಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:41 pm, Mon, 14 September 26

Follow Us