ರಾಯಚೂರು: 302 ಶಾಲಾ ಮಕ್ಕಳ ಪೈಕಿ 18 ವಿದ್ಯಾರ್ಥಿಗಳಲ್ಲಿ ಮಂಗನ ಬಾವು ರೋಗ ಪತ್ತೆ

ರಾಜ್ಯದ ಕೆಲವಡೆ ಕಡೆ ಮಂಗನ ಕಾಯಿಲೆ ಹೆಚ್ಚಾಗಿದ್ದರೆ, ಇನ್ನು ಕೆಲವಡೇ ಮಂಗನಬಾವು ಹೆಚ್ಚಾಗುತ್ತಿದೆ. ಇದೀಗ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ನೀರಲಕೇರೆ ಗ್ರಾಮದ ಹಿರಿಯ ಪ್ರಾಥಮಿಕ ‌ಶಾಲೆಯ 18 ಮಕ್ಕಳಲ್ಲಿ ಮಂಗನ ಬಾವು ರೋಗ ಪತ್ತೆ ಆಗಿದೆ. ಸುಮಾರು 302 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದು, ಈ ಪೈಕಿ 18 ಮಕ್ಕಳಲ್ಲಿ ರೋಗ ಪತ್ತೆ ಆಗಿದೆ. ಈ ಹಿನ್ನೆಲೆ ವೈದ್ಯರ ತಂಡ ಮಕ್ಕಳಿಗೆ ಸೂಕ್ತ ‌ಚಿಕಿತ್ಸೆ ನೀಡಿದ್ದಾರೆ.

ರಾಯಚೂರು: 302 ಶಾಲಾ ಮಕ್ಕಳ ಪೈಕಿ 18 ವಿದ್ಯಾರ್ಥಿಗಳಲ್ಲಿ ಮಂಗನ ಬಾವು ರೋಗ ಪತ್ತೆ
ಶಾಲಾ ಮಕ್ಕಳ ಆರೋಗ್ಯ ತಪಾಸಣೆ
Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Feb 09, 2024 | 2:58 PM

ರಾಯಚೂರು, ಫೆಬ್ರವರಿ 9: ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ನೀರಲಕೇರೆ ಗ್ರಾಮದ ಹಿರಿಯ ಪ್ರಾಥಮಿಕ ‌ಶಾಲೆಯ 18 ಮಕ್ಕಳಲ್ಲಿ ಮಂಗನ (Monkey) ಬಾವು ರೋಗ ಪತ್ತೆ ಆಗಿದೆ. ಕೂಡಲೇ ಅಲರ್ಟ್​ ಆದ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಯ ಸುಮಾರು 302 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದು, ಈ ಪೈಕಿ 18 ಮಕ್ಕಳಲ್ಲಿ ರೋಗ ಪತ್ತೆ ಆಗಿದೆ. ಈ ಹಿನ್ನೆಲೆ ವೈದ್ಯರ ತಂಡ ಮಕ್ಕಳಿಗೆ ಸೂಕ್ತ ‌ಚಿಕಿತ್ಸೆ ನೀಡಿದ್ದಾರೆ. ರಾಜ್ಯದ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ. ಸಿದ್ಧಾಪೂರ ತಾಲೂಕಿನಲ್ಲಿ ಕಳೆದ ಕೆಲ ದಿನದಲ್ಲಿ ಮೂರು ಮಂಗಗಳ ಸಾವಾಗಿತ್ತು. ಇದು ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಮಲೆನಾಡಿನ ಜನ ಭಯದಲ್ಲೆ ಜೀವನ ಸಾಗಿಸುವಂತ್ತಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣ ಹೆಚ್ಚಳ

ಕಳೆದ ಕೆಲವು ವರ್ಷಗಳಿಂದ ನಾಪತ್ತೆ ಆಗಿದ್ದ ಮಂಗನ ಕಾಯಿಲೆ ಈ ವರ್ಷ ಮತ್ತೆ ವ್ಯಾಪಕವಾಗಿ ಪಸರಿಸ ತೊಡಗಿದೆ. ಈ ಹಿಂದೆ ಕಾಯಿಲೆ ಬಂದಾಗ ಇಷ್ಟೊಂದು ವೇಗವಾಗಿ ಪಸರಿಸರಲಿಲ್ಲ, ಆದರೆ ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆ ಆಗಿರುವುದರಿಂದ ಉಷ್ಣತೆಗೆ ರೋಗ ವೇಗವಾಗಿ ಹರಡುತ್ತಿದೆ ಎನ್ನುತ್ತಿದ್ದಾರೆ ತಜ್ಷರು.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಮಂಗನ ಕಾಯಿಲೆ; 14 ದಿನಗಳಲ್ಲಿ 37 ಜನರಿಗೆ ಸೋಂಕು, 3 ಮಂಗಗಳ ಸಾವು

ಜನವರಿ 18 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪೂರ ತಾಲೂಕಿನ ಜಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಮಂಗನ ಸಾವಿನಿಂದ ಆರಂಭವಾದ ಮಂಗನ ಕಾಯಿಲೆ, ಸದ್ಯ 37 ಜನರಿಗೆ ಅಂಟಿದ್ದೂ 24 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೂ ಇನ್ನೂಳಿದ 13 ಜನ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

BAAVUROGA

ರೋಗ ಅಂಟಿದ 37 ಜನರೂ ಔಟ್ ಆಫ್ ಡೆಂಜರ್ ಇದ್ದಾರೆ. ಆದರೆ ಈಗಾಗಲೇ ಲಸಿಕೆ ಇಲ್ಲದೆ ಜನ ಆತಂಕದಲ್ಲಿ ಜೀವನ ಕಳೆಯುತ್ತಿರುವ ಬೆನ್ನಲೆ ಸಿದ್ಧಾಪೂರ ತಾಲೂಕಿನ ಕಾಂಡಂಚಿನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಮೂರು ಮಂಗಗಳ ಸಾವು ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಮಂಗನಬಾವಿಗೆ ಮಕ್ಕಳು ಸೇರಿದಂತೆ ವಯಸ್ಕರರು ಪರದಾಟ

ಕೊಪ್ಪಳ ಜಿಲ್ಲೆಯಲ್ಲೂ ಮಂಗನಬಾವಿನಿಂದ ಮಕ್ಕಳು ಸೇರಿದಂತೆ ವಯಸ್ಕರರು ಕೂಡ ಪರದಾಡಿದ್ದಾರೆ. ತೀರ್ವ ಜ್ವರ ಮತ್ತು ನೋವಿನಿಂದ ಮಕ್ಕಳು ಸಂಕಷ್ಟ ಪಡುತ್ತಿವೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಮಂಗನಬಾವು ಮಕ್ಕಳನ್ನು ಹೈರಾಣು ಮಾಡಿದ್ದು, ಪೋಷಕರ ಆತಂಕವನ್ನು ಕೂಡ ಹೆಚ್ಚಿಸಿದೆ.

ಇದನ್ನೂ ಓದಿ: Kyasanur Forest Disease: ಮಂಗನ ಕಾಯಿಲೆಗೆ ತತ್ತರಿಸುತ್ತಿದೆ ಉತ್ತರ ಕನ್ನಡ ಜಿಲ್ಲೆ, 10 ದಿನಗಳಲ್ಲಿ 21 ಜನರಿಗೆ ಸೋಂಕು

ಮಂಗನಬಾವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗುವ ಈ ಸೋಂಕು, ಚಳಿಗಾಲ ಮುಗಿಯುವ ಹಂತದಲ್ಲಿದ್ದರು ಕೂಡ ಕಡಿಮೆಯಾಗದೇ, ತೀರ್ವವಾಗುತ್ತಿದೆ. ಮಕ್ಕಳು ಶಾಲೆಗೆ ಹೋಗುವದು ಮತ್ತು ಕೂಡಿ ಆಟವಾಡುವದರಿಂದ ಮಕ್ಕಳಲ್ಲಿ ತೀರ್ವವಾಗಿ ಈ ಸೋಂಕು ಹರಡುತ್ತದೆ. ಹೀಗಾಗಿ ಸೋಂಕಿನ ಲಕ್ಷಣ ಇರುವ ಮಕ್ಕಳು ಶಾಲೆಗೆ ಹೋಗದೇ ಇರೋವದು, ಪ್ರತ್ಯೇಕವಾಗಿ ಇರೋದರಿಂದ ಸೋಂಕು ಹಬ್ಬದಂತೆ ನೋಡಿಕೊಳ್ಳಬಹುದಾಗಿದೆ.

ಈ ಮಂಗನಬಾವಿಗೆ ಪ್ರತ್ಯೇಕವಾಗಿ ಯಾವುದೇ ಚಿಕಿತ್ಸೆ ಇಲ್ಲದೇ ಇರೋದರಿಂದ ಜ್ವರ ಮತ್ತು ನೋವನ್ನು ಕಡಿಮೆ ಮಾಡಲು ಮಾತ್ರ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸೋಕಿಂತ ರೋಗಿಯಲ್ಲಿ ವಾರದಿಂದ ಎರಡು ವಾರಗಳ ಕಾಲ ಈ ಸೋಂಕು ಸಕ್ರೀಯವಾಗಿರಲಿದ್ದು, ಸ್ವಯಂ ನಿಯಂತ್ರಣ ಕ್ರಮಗಳಿಂದ ಈ ಸೋಂಕನ್ನು ನಿಯಂತ್ರಿಸಬಹುದು ಅಂತಿದ್ದಾರೆ ವೈದ್ಯರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!