AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರದ ಶಂಕೆ, 6 ವರ್ಷದ ಮಗು ಸೇರಿ 13 ಮಂದಿ ವಶಕ್ಕೆ

ವಾಮಾಚಾರ ನಡೆಸಲಾಗುತ್ತಿದೆ ಎಂಬ ಶಂಕೆ ಮೇಲೆ 13 ಮಂದಿಯನ್ನು ಸಾತನೂರು ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪದ ಭೂಹಳ್ಳಿಯಲ್ಲಿ ನಡೆದಿದೆ.

ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರದ ಶಂಕೆ, 6 ವರ್ಷದ ಮಗು ಸೇರಿ 13 ಮಂದಿ ವಶಕ್ಕೆ
ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರದ ಶಂಕೆ
TV9 Web
| Edited By: ಆಯೇಷಾ ಬಾನು|

Updated on:Nov 10, 2021 | 11:33 AM

Share

ರಾಮನಗರ: ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ ಮಾಡುತ್ತಿದ್ದು ವಾಮಾಚಾರ ನಡೆಸಲಾಗುತ್ತಿದೆ ಎಂಬ ಶಂಕೆ ಮೇಲೆ 13 ಮಂದಿಯನ್ನು ಸಾತನೂರು ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪದ ಭೂಹಳ್ಳಿಯಲ್ಲಿ ನಡೆದಿದೆ. ಪೂಜಾರಿ, ಮನೆ ಮಾಲೀಕ ಸೇರಿದಂತೆ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 6 ವರ್ಷದ ಮಗು ಕೂಡ ಇದೆ.

ಭೂಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನ ಮನೆಯೊಂದರಲ್ಲಿ ಕಳೆದ ಕೆಲವು ವರ್ಷಗಳಿಂದ ಪೂಜೆ ನಡೆಯುತ್ತಿತ್ತಂತೆ. ಅದೇ ರೀತಿ ಕಳೆದ ರಾತ್ರಿಯೂ ಪೂಜೆ ನಡೆದಿದೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಆ ಮನೆಯಲ್ಲಿ ನಿಧಿ ಆಸೆಗಾಗಿ ವಾಮಾಚಾರ ಮಾಡಲಾಗುತ್ತಿದೆ ಎಂಬ ಶಂಕೆಯೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ರಾತ್ರೋರಾತ್ರಿ ದಾಳಿ ನಡೆಸಿದ ಪೊಲೀಸರು 13 ಮಂದಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

rmg vamachara 1

ಮನೆಯಲ್ಲಿ ಪತ್ತೆಯಾದ ಗುಂಡಿಗಳು

ಇನ್ನು ವಶಕ್ಕೆ ಪಡೆದವರಲ್ಲಿ 8 ಮಂದಿ ಹೊರ ಜಿಲ್ಲೆಯವರು ಎನ್ನಲಾಗುತ್ತಿದೆ. ವಿಚಾರಣೆ ವೇಳೆ ನಾವು ತಮಿಳುನಾಡಿನಿಂದ ಬಂದಿದ್ದು ನಮಗೆ ಜಮೀನು ವಿಚಾರದಲ್ಲಿ ಸಮಸ್ಯೆ ಇತ್ತು ಹಾಗಾಗಿ ಪೂಜೆ ಮಾಡಿಸುತ್ತಿದ್ದೇವೆ ಎಂದು ಪೊಲೀಸರ ಬಳಿ ತಿಳಿಸಿದ್ದಾರೆ. ಆದರೆ ವಶಕ್ಕೆ ಪಡೆದವರಲ್ಲಿ ಮಗುವೂ ಇರುವ ಕಾರಣ ಮಗುವನ್ನು ಬಲಿ ನೀಡಲು ಕರೆತರಲಾಗಿದೆ ಎಂಬ ಅನುಮಾನ ಹುಟ್ಟುಕೊಂಡಿದೆ. ಅಲ್ಲದೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಗುಂಡಿಗಳು ಪತ್ತೆಯಾಗಿವೆ. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿ: ವಾಮಾಚಾರ ಮಾಡಿ ಯುವತಿ ಮದುವೆಯಾದ ಆರೋಪ! ಕುಟುಂಬಸ್ಥರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

Published On - 11:23 am, Wed, 10 November 21

Follow Us
TV9 Web
TV9 Web

TV9 Kannada

Read More