ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು: ಆದ್ರೆ ಸಂಭ್ರಮ ಇಲ್ಲ; ಸೂತಕವಷ್ಟೆ

ರಾಮನಗರ ನಗರಸಭೆ ಚುನಾವಣೆಗೆ ಫಲಿತಾಂಶ ಹೊರಬಿದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆದಿದೆ. ಆದ್ರೆ ವಿಪರ್ಯಾಸವೆಂದರೆ ಗೆಲುವನ್ನು ಸಂಭ್ರಮಿಸಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿ ಕೊರೊನಾಗೆ ಬಲಿಯಾಗಿದ್ದಾರೆ.

  • TV9 Web Team
  • Published On - 14:57 PM, 30 Apr 2021
ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು: ಆದ್ರೆ ಸಂಭ್ರಮ ಇಲ್ಲ; ಸೂತಕವಷ್ಟೆ
ಚುನಾವಣೆ ಸಮಯದ ದೃಶ್ಯ

ರಾಮನಗರ: ಗೆಲುವಿನ ಸಂಭ್ರಮದಲ್ಲಿರಬೇಕಿದ್ದ ಮನೆ ಇಂದು ಮಹಾಮಾರಿ ಕೊರೊನಾದಿಂದ ಸೂತಕ ತುಂಬಿದ ಮನೆಯಾಗಿದೆ. ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಬೇಕಿದ್ದ ಜನ, ಕಣ್ಣೀರಿಡುತ್ತ ಕೊರೊನಾಗೆ ಶಾಪ ಹಾಕಿದ್ದಾರೆ. ಹೌದು ರಾಮನಗರದಲ್ಲಿ ಇಂತಹದೊಂದು ದುರ್ಘಟನೆ ಸಂಭವಿಸಿದೆ.

ಇಂದು ರಾಮನಗರ ನಗರಸಭೆ ಚುನಾವಣೆಗೆ ಫಲಿತಾಂಶ ಹೊರಬಿದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆದಿದೆ. ಆದ್ರೆ ವಿಪರ್ಯಾಸವೆಂದರೆ ಗೆಲುವನ್ನು ಸಂಭ್ರಮಿಸಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿ ಕೊರೊನಾಗೆ ಬಲಿಯಾಗಿದ್ದಾರೆ. ಹೌದು ಸಂತೋಷ ತುಂಬಿರಬೇಕಿದ್ದ ಮನೆಯಲ್ಲಿ ಇಂದು ಸೂತಕದ ಛಾಯೆ ಆವರಿಸಿದೆ. ಈ ಗೆಲುವನ್ನು ಸಂಭ್ರಮಿಸಬೇಕಿದ್ದ ಅಭ್ಯರ್ಥಿ ಮೃತಪಟ್ಟಿದ್ದಾರೆ. ರಾಮನಗರ 4ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಲೀಲಾ ಗೋವಿಂದರಾಜ್‌ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. ಆದ್ರೆ ನಿನ್ನೆ ಕೊರೊನಾದಿಂದ ಮೃತಪಟ್ಟಿದ್ದಾರೆ.

917 ಮತಗಳನ್ನ ಪಡೆದು 810 ಮತಗಳ ಅಂತರದಿಂದ ಲೀಲಾ ಗೋಂವಿದರಾಜು ಗೆಲವು ಪಡೆದಿದ್ದಾರೆ. ಇವರ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಕೇವಲ 107 ಮತಗಳನ್ನಷ್ಟೆ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಆದ್ರೆ ಈ ಪ್ರಚಂಡ ಗೆಲವು ಅನುಭವಿಸಲು ಅಭ್ಯರ್ಥಿಯೇ ಇಲ್ಲ. ಇನ್ನು ಒಟ್ಟು 31 ವಾರ್ಡುಗಳ ಪೈಕಿ ಕಾಂಗ್ರೆಸ್ 19 ಸ್ಥಾನ ಪಡೆದುಕೊಂಡಿದೆ. ಜೆಡಿಎಸ್ 11 ಸ್ಥಾನ ಗೆದ್ದಿದೆ. ಹಾಗೂ ಒಂದು ವಾರ್ಡ್ನಲ್ಲಿ ಎಸ್ಡಿಪಿಐ ಅಭ್ಯರ್ಥಿ ಗೆದ್ದಿದ್ದಾರೆ. ಆದ್ರೆ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ತಮಿಳು ಚಿತ್ರರಂಗದ ಕಾಮಿಡಿ ನಟ ವಿವೇಕ್ ಅಸ್ಥಿ ಹುಟ್ಟೂರಿನ ಸ್ಮಶಾನದ ಮರಗಳಿಗೆ ಗೊಬ್ಬರವಾಯ್ತು