AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣದಿಂದ ವಿಧಾನಸಭೆ ಉಪ ಚುನಾವಣೆ ಸ್ಪರ್ಧೆ ಇಲ್ಲ, ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ: ಡಿಕೆ ಸುರೇಶ್

ಡಿಕೆ ಸುರೇಶ್​​ನ ಸೋಲಿಸಬಿಟ್ಟಿದ್ದೇವೆ, ಏನೋ ಆಗಿಬಿಡುತ್ತದೆ ಎಂದುಕೊಂಡರೆ ಅದು ಭ್ರಮೆ ಎಂದ ಡಿಕೆ ಸುರೇಶ್, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲದೆ, ನನಗೇ ನಾನೇ ಶತ್ರು, ಈಗ ವಿರಾಮ ಎಂದು ಮಾರ್ಮಿಕ ಮಾತನಾಡಿದ್ದಾರೆ. ವಿವರ ಇಲ್ಲಿದೆ.

ಚನ್ನಪಟ್ಟಣದಿಂದ ವಿಧಾನಸಭೆ ಉಪ ಚುನಾವಣೆ ಸ್ಪರ್ಧೆ ಇಲ್ಲ, ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ: ಡಿಕೆ ಸುರೇಶ್
ಡಿಕೆ ಸುರೇಶ್
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on:Jun 10, 2024 | 1:42 PM

Share

ರಾಮನಗರ, ಜೂನ್ 10: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಸೋಲನುಭವಿಸಿರುವ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ (DK Suresh), ತೆರವಾಗಿರುವ ಚನ್ನಪಟ್ಟಣ (Channapatna) ವಿಧಾನಸಭೆ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಬಹುದು ಎಂಬ ವದಂತಿಗಳ ಬಗ್ಗೆ ಇದೀಗ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಅಲ್ಲಿ ಕಾಂಗ್ರೆಸ್​ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು. ಈ ಮೂಲಕ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.

ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ.

ನನಗೇ ನಾನೇ ಶತ್ರು, ಈಗ ವಿರಾಮ: ಸುರೇಶ್ ಮಾರ್ಮಿಕ ಮಾತು

ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಕೆಲಸ‌ ಮಾಡಿದ್ದೇನೆ. ನನಗೆ ರಾಮನಗರ ಮಾಧ್ಯಮದವರು ಪ್ರೋತ್ಸಾಹ ಕೊಟ್ಟಿದ್ದಾರೆ. ರಾಜಕೀಯದಲ್ಲಿ ನನಗೆ ಆಸಕ್ತಿ ಇರಲಿಲ್ಲ. ಉಪ‌ಚುನಾವಣೆ ನಡೆದಾಗ ಜಿಲ್ಲೆ ಹಾಗೂ ರಾಜ್ಯದ ನಾಯಕರು ನನ್ನನ್ನು ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರು. ಡಿಕೆ ‌ಶಿವಕುಮಾರ್ ಅವರಿಗೆ ಒತ್ತಡ ತಂದು ನಾಯಕರು ನನಗೆ ಅವಕಾಶ ಕೊಟ್ಟಿದ್ದರು. ಹತ್ತು ವರ್ಷ ಎಂಟು ತಿಂಗಳುಗಳ ಕಾಲ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಅವಕಾಶಕ್ಕೆ ತಕ್ಕಂತೆ ಬಡವರು, ದೀನ ದಲಿತರು, ಮಹಿಳೆಯರ ಅಭಿವೃದ್ಧಿಗೆ ನನ್ನ ಗಮನಕ್ಕೆ ಬಂದಿದನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೇಂದ್ರ ಸರ್ಕಾರ ಆಗಲೀ, ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ತಲುಪುವ ಹಾಗೆ ಹಗಲಿರುಳು ಶ್ರಮಿಸಿದ್ದೇನೆ ಎಂದು ಸುರೇಶ್ ಹೇಳಿದರು.

ನಾನು ಸಂಸದನಾಗಿದ್ದಾಗ ಎಂಟು ತಿಂಗಳು ಕಾಲ ಯುಪಿಎ ಸರ್ಕಾರ ಇತ್ತು. ಆಗ ನನಗೆ ಕೆಲಸ ಮಾಡಲಾಗಿದ್ದು ಕೇವಲ 5 ತಿಂಗಳು ಮಾತ್ರ. ತದನಂತರ ಎನ್​ಡಿಎ ಸರ್ಕಾರ ಬಂತು. ಎರಡು ಬಾರಿಯೂ ಸಂಸತ್ ಸದಸ್ಯನಾಗಿ ಸದನದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ರಾಮನಗರ ಅಭಿವೃದ್ಧಿಗೆ ಕೆಲಸ ಮಾಡಿದ ಆತ್ಮತೃಪ್ತಿ ಸಂತೋಷ ನನಗಿದೆ. ನಾನು ಚುನಾವಣೆಗೆ 4 ಬಾರಿ ನಿಂತಾಗ, ಕನ್ನಡಿಗರ ತೆರಿಗೆ ಬಗ್ಗೆ ಧ್ವನಿ ಎತ್ತಿ ಇಡೀ ರಾಷ್ಟ್ರದಲ್ಲಿ ಟೀಕೆ ಎದುರಿಸಿದ್ದೇನೆ. ನಮಗೆ ಕರ್ನಾಟಕದ ಪಾಲು ಸಿಗಬೇಕು ಎಂಬುದು ಬಹಳ ಪ್ರಮುಖ ವಿಚಾರ. ಇದಕ್ಕಾಗಿ ವೈಯಕ್ತಿಕವಾಗಿ ಯಾವತ್ತೂ ಧ್ವನಿ ಎತ್ತೋದಕ್ಕೆ ಸಿದ್ಧನಾಗಿದ್ದೇನೆ. ನಾನು ಮತ ಕೇಳುವ ಸಂದರ್ಭದಲ್ಲಿ ಬೇರೆಯವರ ಹೆಸರಿನಲ್ಲಿ ಮತ ಕೇಳಲಿಲ್ಲ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಅಂತ ಕೇಳಿದ್ದೇನೆ. ಜನ ಸಾರಸಗಟಾಗಿ ಅದನ್ನು ತಿರಸ್ಕಾರ ಮಾಡಿದ್ದಾರೆ. ಆ ಸೋಲನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತೇನೆ. ಇನ್ನು ಮುಂದೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಕೊಟ್ಟ ಮಾತಿಂದ ಹಿಂದೆ ಸರಿಯುವ ಮಾತಿಲ್ಲ. ನಾನು ಹೊಸದಾಗಿ ಬಂದಾಗ ಜನ ಕೆಲಸ ಮಾಡ್ತಾರೆ ಅಂತ ಗೆಲ್ಲಿಸಿದ್ರು. ಡಾಕ್ಟರ್ ಬಂದಾಗ ಡಾಕ್ಟರ್ ಅವರನ್ನೂ ಗೆಲ್ಲಿಸಿದ್ದಾರೆ. ಅವರಿಗೆ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದೇನೆ. ಮಾಧ್ಯಮಗಳು ನನ್ನನ್ನು ಹೇಗೆ ಬಿಂಬಿಸಿದವು, ಅವರನ್ನು ಹೇಗೆ ಬಿಂಬಿಸಿದವು ಎಂಬುದು ಗೊತ್ತಿದೆ. ಹೀಗಾಗಿ ಮಾಧ್ಯಮಗಳಿಗೂ ಅಭಿನಂದನೆ ಅರ್ಪಿಸುತ್ತೇನೆ ಎಂದರು.

ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್, ತಪ್ಪಿದ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ!

ಡಿಕೆ ಸುರೇಶ್​​ನ ಸೋಲಿಸಬಿಟ್ಟಿದ್ದೇವೆ. ಏನೋ ಆಗಿಬಿಡುತ್ತದೆ ಅನ್ನೋದಾದ್ರೆ ಅದು ಭ್ರಮೆ. ನಾನು ನನ್ನ ಕಾರ್ಯಕರ್ತರ ಜೊತೆಗಿದ್ದೇನೆ. ಯಾರಿಗೂ ನಾನು ವೈಯಕ್ತಿಕವಾಗಿ ತೊಂದರೆ ಕೊಟ್ಟವನಲ್ಲ. ಈ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಮಾತನಾಡಿರಬಹುದು ವಿನಃ ಯಾರನ್ನೂ ಕೆಟ್ಟದಾಗಿ ನಡೆಸಿಕೊಂಡಿಲ್ಲ. ನನ್ನ ನಡೆಯಿಂದ ಯಾರಿಗಾದರೂ ಮನಸ್ಸಿಗೆ ನೊವಾಗಿದ್ದರೆ, ಪಕ್ಷದ ಕಾರ್ಯಕರ್ತರ ಪರವಾಗಿ, ನನ್ನ ಪರವಾಗಿ ಕ್ಷಮೆ ಕೇಳುತ್ತೇನೆ. ನನಗೆ ಯಾರೂ ಹಿತಶತ್ರುಗಳಿಲ್ಲ ನನಗೆ ನಾನೇ ಶತ್ರು. ನಾನೂ ಒಂದು ವಿರಾಮ ನಿರೀಕ್ಷೆ ಮಾಡಿದ್ದೆ. ಈಗ ವಿರಾಮ. ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು ಅಸೂಯೆ ನನ್ನ ಸೋಲಿಗೆ ಕಾರಣ ಎಂದು ಸುರೇಶ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Mon, 10 June 24

Follow Us
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ