ಮುಂದಿನ ನಡೆ ತೀರ್ಮಾನಕ್ಕೆ ಜಾರಕಿಹೊಳಿ ಸಹೋದರರ ಮಾತುಕತೆ: ರಮೇಶ್, ಬಾಲಚಂದ್ರ, ಲಖನ್ ಭಾಗಿ?

ರಮೇಶ್ ಭೇಟಿಗೆ ಸಹೋದರ ಲಖನ್ ಜಾರಕಿಹೊಳಿ ಈಗಾಗಲೇ ಆಗಮಿಸಿದ್ದಾರೆ. ಸಂಜೆ ಬಳಿಕ ಮೂವರು ಸಹೋದರರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಮುಂದಿನ ನಡೆ ತೀರ್ಮಾನಕ್ಕೆ ಜಾರಕಿಹೊಳಿ ಸಹೋದರರ ಮಾತುಕತೆ: ರಮೇಶ್, ಬಾಲಚಂದ್ರ, ಲಖನ್ ಭಾಗಿ?
ರಮೇಶ್​ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ
Edited By:

Updated on: Apr 05, 2022 | 1:01 PM

ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ, ತಮ್ಮ ಮುಂದಿನ ನಡೆಯನ್ನು ತೀರ್ಮಾನಿಸಲು ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಸಹೋದರರೊಂದಿಗೆ ಚರ್ಚೆಗೆ ತೊಡಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ಮುಂದಿನ ನಡೆಯ ಬಗ್ಗೆ ಸಹೋದರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ರಮೇಶ್ ಭೇಟಿಗೆ ಸಹೋದರ ಲಖನ್ ಜಾರಕಿಹೊಳಿ ಈಗಾಗಲೇ ಆಗಮಿಸಿದ್ದಾರೆ. ಸಂಜೆ ಬಳಿಕ ಮೂವರು ಸಹೋದರರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಸಂತ್ರಸ್ತ ಯುವತಿ ವಿಚಾರಣೆಗೆ ಎಸ್‌ಐಟಿ ಸಿದ್ಧತೆ
ಮತ್ತೊಂದೆಡೆ, ಸಂತ್ರಸ್ತ ಯುವತಿಯನ್ನು ವಿಚಾರಣೆ ನಡೆಸಲು ವಿಶೇಷ ತನಿಖಾ ದಳ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಮೊದಲು ಯುವತಿಯ ಧ್ವನಿ ಮಾದರಿಯನ್ನು (ವಾಯ್ಸ್ ಸ್ಯಾಂಪಲ್ಸ್) ಎಸ್​ಐಟಿ ಸಂಗ್ರಹಿಸಿದೆ. ನಿರ್ದಿಷ್ಟ ಪ್ರಮಾಣದಲ್ಲಿ ಸಂತ್ರಸ್ತೆ ವಾಯ್ಸ್ ಸ್ಯಾಂಪಲ್ಸ್ ಸಂಗ್ರಹಿಸಿದೆ. ಮುಂದೆ, ಈ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗುತ್ತದೆ. ಜೊತೆಗೆ, ವೈರಲ್ ವಿಡಿಯೋ ತುಣುಕು ಸಹ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗುತ್ತದೆ. ಎರಡು ಧ್ವನಿಯಲ್ಲೂ ಹೊಂದಾಣಿಕೆ ಇದೆಯಾ ಎಂದು ಪರಿಶೀಲನೆ ಮಾಡಲಾಗುತ್ತದೆ.

ಇಂದು ಮಧ್ಯಾಹ್ನ ವೇಳೆ ಮೆಡಿಕಲ್ ಟೆಸ್ಟ್ ಮುಗಿಸಿ ಬಂದಿರುವ ಹಿನ್ನೆಲೆಯಲ್ಲಿ ಯುವತಿಗೆ ವಿಶ್ರಾಂತಿ ನೀಡಲಾಗಿತ್ತು. ಆಡುಗೋಡಿಯ ಟೆಕ್ನಿಕಲ್ ವಿಂಗ್‌ನಲ್ಲಿ ಸಂತ್ರಸ್ತೆ ವಿಶ್ರಾಂತಿ ಪಡೆದಿದ್ದಳು. ಕೆಲಕಾಲ ವಿಶ್ರಾಂತಿಯ ಬಳಿಕ ಸಂತ್ರಸ್ತೆಯ ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿ: ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್​ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ

ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆಯಲ್ಲಿ ಚಿತ್ರಾನ್ನ ಸೇವಿಸಿದ ಸಿಡಿ ಲೇಡಿ; ಕೌನ್ಸೆಲಿಂಗ್ ನಡೆಸಿ ಸಂತ್ರಸ್ತೆಗೆ ಧೈರ್ಯ ತುಂಬಿದ ಮನೋವೈದ್ಯರು

YouTube video player

Published On - 6:50 pm, Wed, 31 March 21

TV9 Web

TV9 Kannada

Read More
Loading...
Unable to load recommendations.
Follow Us