AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ ಕಡ್ಡಾಯ

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ ಕಡ್ಡಾಯ
ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್ ಧರಿಸುವಂತೆ ಸುತ್ತೋಲೆ
ಕಿರಣ್​ ಹನಿಯಡ್ಕ
| Edited By: |

Updated on: Aug 16, 2024 | 4:41 PM

Share

ಬೆಂಗಳೂರು, (ಆಗಸ್ಟ್ 16): ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನ ಹಮ್ಮಿಕೊಂಡಿದೆ. ಇದರ ಅಭಿಯಾನದಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್‌ ಬಿ.ಕೆ. ಸುತ್ತೋಲೆ ಹೊರಡಿಸಿದ್ದಾರೆ.

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರವು ನಿರ್ಣಯಿಸಿದೆ.

ಇದನ್ನೂ ಓದಿ: ಕರ್ನಾಟಕದ ಸಾಂಪ್ರದಾಯಿಕ ತಿನಿಸು ಈ ನುಚ್ಚಿನುಂಡೆ, ಮಾಡೋದು ಹೇಗೆ?

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬ್ಬಂದಿ ತಮ್ಮ ಇಲಾಖೆ, ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ತಮ್ಮ ಇಲಾಖೆ/ಸಂಸ್ಥೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ತಿಳಿಸಲಾಗಿದೆ.

ನೂತನ ಕೊರಳದಾರ ವಿನ್ಯಾಸವನ್ನು https://photos.app.goo.gl/YcJeNHnDNPecW8Q48 ಆನ್‌ಲೈನ್ ವಿಳಾಸದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!