AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿಯಾಗ್ತಿದೆ ಹೊಸ ಮನೆ ಕಟ್ಟೋ ಕನಸು: ಇಂದಿನಿಂದ ಮನೆ ನಿರ್ಮಾಣ ಉತ್ಪನ್ನಗಳ ಬೆಲೆ ಏರಿಕೆ

ಇಂದಿನಿಂದ ನಂದಿನಿ ಹಾಲಿನ ದರದ ಜೊತೆಗೆ ಹೋಟೆಲ್ ಊಟ ತಿಂಡಿ ಕಾಫಿ-‌ ಟೀ ದರ ದರ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಹೊಸ ಮನೆ ಕಟ್ಟುವವರಿಗೆ ಬೆಲೆ ಏರಿಕೆಯ ಶಾಕ್​ ಎದುರಾಗಿದೆ.

ದುಬಾರಿಯಾಗ್ತಿದೆ ಹೊಸ ಮನೆ ಕಟ್ಟೋ ಕನಸು: ಇಂದಿನಿಂದ ಮನೆ ನಿರ್ಮಾಣ ಉತ್ಪನ್ನಗಳ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ
ವಿನಯ್​ ಕಾಶಪ್ಪನವರ್​
| Edited By: |

Updated on: Aug 01, 2023 | 9:58 AM

Share

ಬೆಂಗಳೂರು, (ಆಗಸ್ಟ್ 01):  ಕೋವಿಡ್‌ (Covid) ಮುನ್ನ ಕೊಂಚ ಕೈಗೆಟುಕುವಂತಿದ್ದ ಅಗತ್ಯ ವಸ್ತುಗಳು ತದನಂತರ ಗಣನೀಯವಾಗಿ ಏರಿಕೆ ಕಾಣುತ್ತಲೆ ಇದೆ. ಗೃಹ ಹಾಗೂ ಇತರೆ ಕಟ್ಟಡ ನಿರ್ಮಾಣಕ್ಕೆ(house construction)  ಅಗತ್ಯವಿರುವ ಕಚ್ಚಾವಸ್ತುಗಳ ಬೆಲೆಯೂ(price hike) ಏರುತ್ತಲೆ ಇದೆ. ಇದರಿಂದ ಮನೆ ಕಟ್ಟುವವರನ್ನು ಕಂಗಾಲಾಗುವಂತೆ ಮಾಡಿದೆ.  ಹೌದು…. ದಿನಸಿ, ಹಾಲು-ತರಕಾರಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೊಸ ಮನೆ ಕಟ್ಟುವವರಿಗೆ ಬೆಲೆ ಏರಿಕೆಯ ಶಾಕ್​ ಎದುರಾಗಿದೆ. ಇಂದಿನಿಂದ ಅಂದರೆ (ಆಗಸ್ಟ್ 01) ಮರಳು, ಜಲ್ಲಿ, ಗ್ರಾನೈಟ್​​​, ಕಬ್ಬಿಣ ಬೆಲೆ ಮತ್ತಷ್ಟು ಏರಿಕೆಯಾಗಿದೆ.  ಇದರೊಂದಿಗೆ  ಹೊಸ ಮನೆ ಕಟ್ಟೋ ಕನಸು ದುಬಾರಿಯಾಗುತ್ತಿದೆ.

ಇದನ್ನೂ ಓದಿ: ಇಂದಿನಿಂದ ದುಬಾರಿ ದುನಿಯಾ; ಟೊಮೆಟೊ ದರ ಬರೆಯ ಮೇಲೆ ಮತ್ತೊಂದು ಬರೆ, ಹಾಲು-ಹೋಟೆಲ್ ದರ ಹೆಚ್ಚಳ

ಮರಳು, ಎಂ-ಸ್ಯಾಂಡ್​​​, ಜಲ್ಲಿಕಲ್ಲು, ಗ್ರಾನೈಟ್​ ಬಂಡೆ, ಕಬ್ಬಿಣ ಸೇರಿದಂತೆ ಮನೆ ನಿರ್ಮಾಣದ ಇನ್ನಿತರ ವಸ್ತುಗಳ ಪರಿಷ್ಕೃತ ಇಂದಿನಿಂದ ದರ ಜಾರಿಗೆ ಬಂದಿದೆ. ಜೊತೆಗೆ ಮನೆ ನಿರ್ಮಾಣದ ವಸ್ತುಗಳ ಸಾಗಾಣಿಕೆ ದರ ಕೂಡ ದುಬಾರಿಯಾಗಿದೆ. ಇದರೊಂದಿಗೆ ಮನೆ, ಕಟ್ಟಡ ನಿರ್ಮಾಣಕ್ಕೆ ಮುಂದಾದವರಿಗೆ ಮತ್ತಷ್ಟು ಹೆಚ್ಚುವರಿ ದರ ಏರಿಕೆ ಬಿಸಿ ತಟ್ಟಿದೆ.

ಕಳೆದ ಸರ್ಕಾರ ಈ ವರ್ಷ ಶೇ 10 ರಷ್ಟು ರಾಯಲ್ಟಿ ಏರಿಕೆ ಮಾಡಿತ್ತು. ಈ ಬೆನ್ನಲ್ಲೇ ಹೊಸ ಸರ್ಕಾರ ಕೂಡಾ ಮೊದಲ ಬಜೆಟ್ ನಲ್ಲಿ ರಾಜಸ್ವ ಏರಿಕೆ ಮಾಡಿದ್ದು, ನೇರವಾಗಿ ಜನ ಸಾಮಾನ್ಯರಿಗೆ ಇದರ ಎಪೆಕ್ಟ್ ತಟ್ಟಲಿದೆ. ಇದರಿಂದ ಮನೆ ಕಟ್ಟುವ ಕಬ್ಬಿಣ, ಅದಿರು, ಜಲ್ಲಿ ಕಲ್ಲು, ಗ್ರಾನೈಟ್, ಮರಳು, ಎಂ. ಸ್ಯಾಂಡ್ ಸೇರಿದಂತೆ ಇನ್ನಿತರೆ ವಸ್ತುಗಳ ಬೆಲೆ ಇಂದಿನಿಂದ ದುಬಾರಿಯಾಗಲಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ