AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಎಂ ಕೃಷ್ಣ ಲಗ್ನಪತ್ರಿಕೆ ಹೇಗಿತ್ತು ನೋಡಿ! ಈಗ ವೈರಲ್ ಆಗ್ತಿದೆ ವಿವಾಹ ಆಮಂತ್ರಣ ಪತ್ರಿಕೆ

ಮಾಜಿ ಸಿಎಂ ಎಸ್​ಎಂ ಕೃಷ್ಣರ ವಿವಾಹದ ಆಮಂತ್ರಣ ಪತ್ರಿಕೆಯ ಪ್ರತಿ ಈಗ ವೈರಲ್ ಆಗುತ್ತಿದೆ! ಹೌದು, ಎಸ್​​ಎಂ ಕೃಷ್ಣ ಹಾಗೂ ಅವರ ಪತ್ನಿ ಪ್ರೇಮ ಮೊದಲು ಭೇಟಿಯಾಗಿದ್ದೆಲ್ಲಿ? ಅವರ ನಡುವೆ ವಿವಾಹದ ಮಾತುಕತೆ ನಡೆದಿದ್ದು ಹೇಗೆ? ಮದುವೆಯಾಗಿದ್ದು ಯಾವಾಗ ಎಂಬ ಮಾಹಿತಿ ಜತೆಗೆ ಲಗ್ನಪತ್ರಿಕೆಯ ಪ್ರತಿ ಕೂಡ ಇಲ್ಲಿದೆ ನೋಡಿ.

ಎಸ್​ಎಂ ಕೃಷ್ಣ ಲಗ್ನಪತ್ರಿಕೆ ಹೇಗಿತ್ತು ನೋಡಿ! ಈಗ ವೈರಲ್ ಆಗ್ತಿದೆ ವಿವಾಹ ಆಮಂತ್ರಣ ಪತ್ರಿಕೆ
ಎಸ್​ಎಂ ಕೃಷ್ಣ ಲಗ್ನಪತ್ರಿಕೆ
Basavaraj Yaraganavi
| Edited By: |

Updated on:Dec 11, 2024 | 11:28 AM

Share

ಮಂಡ್ಯ, ಡಿಸೆಂಬರ್ 11: ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಸಿಎಂ ಎಸ್​ಎಂ ಕೃಷ್ಣ ಮಂಗಳವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ಸಂಜೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕಾಫಿ ಡೇ ಆವರಣದಲ್ಲಿ ನಡೆಯಲಿದೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಿಂದ ರಸ್ತೆ ಮಾರ್ಗವಾಗಿ ಎಸ್​ಎಂ ಕೃಷ್ಣ ಅಂತಿಮ ಯಾತ್ರೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ, ಎಸ್ಎಂ ಕೃಷ್ಣ ಅವರ ವಿವಾಹದ ಆಮಂತ್ರಣ ಪತ್ರಿಕೆ ಈಗ ವೈರಲ್ ಆಗುತ್ತಿದೆ!

ಎಸ್​ಎಂ ಕೃಷ್ಣ 1966 ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಪ್ರೇಮರನ್ನು ವಿವಾಹವಾಗಿದ್ದರು. ಇವರಿಬ್ಬರ ವಿವಾಹ 1966 ರ ಏಪ್ರಿಲ್ 29 ರಂದು ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್​ನಲ್ಲಿ ನೆರವೇರಿತ್ತು.

ಮೊದಲ ನೋಟದಲ್ಲೇ ಪ್ರೇಮ ಜೊತೆ ಪ್ರೇಮಾಂಕುರ!

ಒಕ್ಕಲಿಗ ಸಮುದಾಯದ ಪ್ರಸಿದ್ಧ ಮನೆತನದ ಪ್ರೇಮ ಜತೆ ವಿವಾಹವಾಗುವ ಮೂಲಕ ಎಸ್​ಎಂ ಕೃಷ್ಣ ತೀರ್ಥಹಳ್ಳಿಯ ಅಳಿಯನಾಗಿದ್ದರು. ಮಂಡ್ಯಕ್ಕೂ ಮಲೆನಾಡಿಗೂ ಮೊದಲ ಸಂಬಂಧ ಇದಾಗಿತ್ತು ಎಂದು ‘ಟಿವಿ9’ಗೆ ಪ್ರೇಮಾ ಸಂಬಂಧಿ ಪದ್ಮನಾಭ ತಿಳಿಸಿದ್ದಾರೆ. ಕೃಷ್ಣ ತುಂಬಾ ಸರಳ, ಸಜ್ಜನಿಕೆಯ ವ್ಯಕ್ತಿ. ಮಾಜಿ ಸಿಎಂ ಕಡಿದಾಳ ಮಂಜಪ್ಪ ಅವರ ಮೂಲಕ ಕೃಷ್ಣ ಜೊತೆ ಸಂಬಂಧಕ್ಕೆ ಮಾತುಕತೆ ನಡೆದಿತ್ತು. ಬಳಿಕ ಬೆಂಗಳೂರಿನ ಕ್ಲಬ್​ನಲ್ಲಿ ಪ್ರೇಮಾ ಅವರನ್ನು ತೋರಿಸಿದ್ದರು. ಮೊದಲ ನೋಟದಲ್ಲೇ ಕೃಷ್ಣ ಅವರು ಮಲೆನಾಡಿನ ಯುವತಿಗೆ ಮನಸೋತಿದ್ದರು ಎಂದು ಪದ್ಮನಾಭ ತಿಳಿಸಿದ್ದಾರೆ.

ಲಗ್ನಪತ್ರಿಕೆಯ ಒಕ್ಕಣೆ ಹೀಗಿತ್ತು…

‘‘ಸೋಮನಹಳ್ಳಿ ಎಸ್​​ಸಿ ಮಲ್ಲಯ್ಯನವರ ಕುಟುಂಬ ಮತ್ತು ಬಂಧು ವರ್ಗದವರು ತಾ 29-4-1966 ನೇ ಶುಕ್ರವಾರ ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್​ನಲ್ಲಿ ನಡೆಯುವ ಚಿರಂಜೀವಿ ಎಸ್​ಎಂ ಕೃಷ್ಣ (ದಿವಂಗತ ಎಸ್​​ಸಿ ಮಲ್ಲಯ್ಯನವರ ಪುತ್ರ) ಹಾಗೂ ಸೌಭಾಗ್ಯವತಿ ಪ್ರೇಮ (ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಕೆಆರ್​ ಚನ್ನಪ್ಪಗೌಡರ ಪುತ್ರಿ) ಇವರುಗಳ ವಿವಾಹಕ್ಕೆ ತಾವು ದಯಮಾಡಿಸಿ ವಧೂವರರನ್ನು ಆಶೀರ್ವದಿಸಬೇಕಾಗಿ ಆಹ್ವಾನಿಸುತ್ತಾರೆ’’ ಎಂದು ಲಗ್ನಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಸದ್ಯ ಎಸ್​​ಎಂ ಕೃಷ್ಣ ವಿವಾಹದ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಅಂತಿಮ ಯಾತ್ರೆಗೆ ಸಹಸ್ರಾರು ಮಂದಿ ಸಾಕ್ಷಿ

ಎಸ್​ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ಯಾತ್ರೆ ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇನಲ್ಲಿ ಸಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಮಂದಿ ಅಂತಿಮ ದರ್ಶನ ಪಡೆದಿದ್ದಾರೆ. ರಾಮನಗರದಲ್ಲಿ ಹೆದ್ದಾರಿಯ ಎರಡೂ ಬದಿ ನಿಂತಿರುವ ಸಾರ್ವಜನಿಕರು, ಕಟ್ಟಡಗಳ ಮೇಲೆ ಏರಿ ಅಗಲಿದೆ ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:27 am, Wed, 11 December 24

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?