AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಆಘಾತ; ಪಾಕಿಸ್ತಾನ್ ಪಂದ್ಯವೇ ನಿರ್ಣಾಯಕ!

Hockey World Cup 2026: ವಿಶ್ವ ಹಾಕಿಯ ಅತ್ಯಂತ ಪ್ರತಿಷ್ಠಿತ ವೇದಿಕೆಯಾದ 'ಎಫ್‌ಐಎಚ್ ಹಾಕಿ ವಿಶ್ವಕಪ್ 2026' ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಆರಂಭಿಕ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡಕ್ಕೆ, ಎರಡನೇ ಪಂದ್ಯದಲ್ಲೇ ಇಂಗ್ಲೆಂಡ್ ಆಘಾತ ನೀಡಿದೆ. ಈ ಒಂದು ಸೋಲು ಗ್ರೂಪ್ ಹಂತದ ಇಡೀ ಲೆಕ್ಕಾಚಾರವನ್ನೇ ಬದಲಾಯಿಸಿದ್ದು, ಟೀಮ್ ಇಂಡಿಯಾವನ್ನು ಮಾಡು ಇಲ್ಲವೇ ಮಡಿ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಆಘಾತ; ಪಾಕಿಸ್ತಾನ್ ಪಂದ್ಯವೇ ನಿರ್ಣಾಯಕ!
Team IndiaImage Credit source: JioHotstar
ಝಾಹಿರ್ ಯೂಸುಫ್
|

Updated on: Aug 18, 2026 | 9:04 AM

Share

ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2026ರ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಆಘಾತಕಾರಿ ಸೋಲನುಭವಿಸಿದೆ. ನೆದರ್ಲ್ಯಾಂಡ್ಸ್‌ನ ವ್ಯಾಗನರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 4-2 ಗೋಲುಗಳ ಅಂತರದಿಂದ ಟೀಮ್ ಇಂಡಿಯಾವನ್ನು ಮಣಿಸಿದೆ. ಈ ಸೋಲಿನೊಂದಿಗೆ ಹರ್ಮನ್‌ಪ್ರೀತ್ ಸಿಂಗ್ ಪಡೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಕೊಂಡಿದೆ.

ಅತ್ತ ಸತತ ಎರಡನೇ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ 6 ಅಂಕಗಳನ್ನು ಗಳಿಸಿ, ಪೂಲ್ ‘ಡಿ’ನಿಂದ ಮುಂದಿನ ಹಂತಕ್ಕೆ ತನ್ನ ಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿದೆ. ಇತ್ತ ಭಾರತ ತಂಡವು ಮುಂದಿನ ಹಂತಕ್ಕೇರಬೇಕಿದ್ದರೆ ತನ್ನ ಮುಂದಿನ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಹಾಕಿ ವಿಶ್ವಕಪ್​ ನಿಯಮಗಳ ಪ್ರಕಾರ, ಪ್ರತಿ ಪೂಲ್‌ನಿಂದ ಕೇವಲ ಅಗ್ರ ಎರಡು ತಂಡಗಳು ಮಾತ್ರ ಎರಡನೇ ಸುತ್ತಿಗೆ ಪ್ರವೇಶಿಸಲಿವೆ. ಕೊನೆಯ ಎರಡು ಸ್ಥಾನ ಪಡೆಯುವ ತಂಡಗಳು 9 ರಿಂದ 16ನೇ ಸ್ಥಾನದ ಕ್ಲಾಸಿಫಿಕೇಶನ್ ಪಂದ್ಯಗಳನ್ನು ಆಡಬೇಕಾಗುತ್ತದೆ.

ಹಾಕಿ ವಿಶ್ವಕಪ್ ಪೂಲ್ ‘ಡಿ’ ಅಂಕಪಟ್ಟಿ:

ತಂಡ ಪಂದ್ಯ ಗೆಲುವು ಡ್ರಾ ಸೋಲು ಅಂಕಗಳು ಗೋಲು ವ್ಯತ್ಯಾಸ
ಇಂಗ್ಲೆಂಡ್ (Q) 2 2 0 0 6 +4
ಭಾರತ 2 1 0 1 3 0
ವೇಲ್ಸ್ 2 0 1 1 1 -2
ಪಾಕಿಸ್ತಾನ್ 2 0 1 1 1 -3

ಭಾರತದ ಸಮೀಕರಣ:

ಭಾರತ ತಂಡ ಮುಂದಿನ ಹಂತಕ್ಕೇರಲು ಎರಡು ಆಯ್ಕೆಗಳಿವೆ. ಈ ಎರಡು ಆಯ್ಕೆಗಳಲ್ಲಿ ಅತ್ಯಂತ ಸುಲಭ ಹಾಗೂ ನೇರ ಆಯ್ಕೆ ಎಂದರೆ ಪಾಕಿಸ್ತಾನ್ ವಿರುದ್ಧದ ಗೆಲುವು. ಅದರಂತೆ ಟೀಮ್ ಇಂಡಿಯಾ ಮುಂದಿರುವ ಹಾದಿಗಳಾವುವು ಎಂದು ನೋಡುವುದಾದರೆ…

ಪಾಕಿಸ್ತಾನ್ ವಿರುದ್ಧ ಗೆಲುವು (ಖಚಿತ ಅರ್ಹತೆ): ಬುಧವಾರ ಪಾಕಿಸ್ತಾನ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದರೆ, ತಂಡದ ಒಟ್ಟು ಅಂಕಗಳು 6ಕ್ಕೆ ಏರಲಿವೆ. ಈ ಮೂಲಕ ಯಾವುದೇ ಲೆಕ್ಕಾಚಾರವಿಲ್ಲದೆ ಭಾರತ ನೇರವಾಗಿ ಎರಡನೇ ಹಂತಕ್ಕೆ ಲಗ್ಗೆ ಇಡಲಿದೆ.

ಪಂದ್ಯ ಡ್ರಾ (ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬನೆ): ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ್ ಪಂದ್ಯ ಡ್ರಾ ಆಗಿ ಅಂತ್ಯಗೊಂಡರೆ, ಭಾರತ 4 ಅಂಕಗಳನ್ನು ಹೊಂದಲಿದೆ. ಈ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಲ್ಸ್ ತಂಡ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಭಾರತ ಸುಲಭವಾಗಿ ಅರ್ಹತೆ ಪಡೆಯುತ್ತದೆ. ಆದರೆ, ವೇಲ್ಸ್ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದರೆ, ಭಾರತ ಮತ್ತು ವೇಲ್ಸ್ ನಡುವೆ ‘ಗೋಲು ವ್ಯತ್ಯಾಸ’ ಲೆಕ್ಕಕ್ಕೆ ಬರುತ್ತದೆ. ಸದ್ಯ ಗೋಲು ವ್ಯತ್ಯಾಸದಲ್ಲಿ ಭಾರತ (0) ವೇಲ್ಸ್‌ಗಿಂತ (-2) ಉತ್ತಮ ಸ್ಥಾನದಲ್ಲಿದೆ.

ಭಾರತ ಸೋತರೆ (ಟೂರ್ನಿಯಿಂದ ಹೊರಕ್ಕೆ): ಒಂದು ವೇಳೆ ಪಾಕಿಸ್ತಾನ್ ವಿರುದ್ಧ ಭಾರತ ಸೋಲನುಭವಿಸಿದರೆ, ಭಾರತ ತಂಡ ವಿಶ್ವಕಪ್‌ನ ಮುಖ್ಯ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಆ ಬಳಿಕ ಕ್ಲಾಸಿಫಿಕೇಶನ್ ಪಂದ್ಯಗಳನ್ನು ಆಡಲಿದೆ. ಕ್ಲಾಸಿಫಿಕೇಶನ್ ಪಂದ್ಯ ಎಂದರೆ ಟೂರ್ನಿಯಲ್ಲಿ ಪ್ರಶಸ್ತಿ ರೇಸ್ ಅಥವಾ ಮುಂದಿನ ಹಂತದಿಂದ ಹೊರಬಿದ್ದ ತಂಡಗಳ ನಡುವೆ, ಕೊನೆಯ ಸ್ಥಾನಗಳನ್ನು ನಿರ್ಧರಿಸಲು ನಡೆಸುವ ಪಂದ್ಯಗಳಾಗಿವೆ.

ಇದನ್ನೂ ಓದಿ: ‘ಕತ್ತಿ ವರಸೆ’ ಕಾಲೆಳೆಯುವಿಕೆ: ಪಂತ್​ಗೆ ರವೀಂದ್ರ ಜಡೇಜಾ ಪ್ರತ್ಯುತ್ತರ

ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಹಾಕಿಯ ಇತಿಹಾಸದಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯಗಳು ಕೇವಲ ಆಟವಾಗಿರದೆ, ಕೋಟ್ಯಂತರ ಅಭಿಮಾನಿಗಳ ಭಾವನೆಯಾಗಿರುತ್ತವೆ. ಆದರೆ ಈ ಬಾರಿ ಭಾವನೆಯ ಜೊತೆಗೆ ವಿಶ್ವಕಪ್‌ನಲ್ಲಿ ಉಳಿಯುವ ಅಸ್ತಿತ್ವದ ಪ್ರಶ್ನೆಯೂ ಭಾರತದ ಮುಂದಿದೆ. ಟೋಕಿಯೋ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸತತ ಕಂಚಿನ ಪದಕ ಗೆದ್ದು ಬೀಗಿದ್ದ ಹರ್ಮನ್‌ಪ್ರೀತ್ ಪಡೆಗೆ ಈ ಪಂದ್ಯವು ನಿಜವಾದ ಅಗ್ನಿಪರೀಕ್ಷೆಯಾಗಿದೆ. ಒತ್ತಡವನ್ನು ನಿಭಾಯಿಸಿ ಟೀಮ್ ಇಂಡಿಯಾ ಕ್ವಾರ್ಟರ್ ಫೈನಲ್ ಹಾದಿಯನ್ನು ಸುಗಮಗೊಳಿಸಿಕೊಳ್ಳಲಿದೆಯೇ ಅಥವಾ ನಿರಾಸೆ ಮೂಡಿಸಲಿದೆಯೇ ಎಂಬುದಕ್ಕೆ ಬುಧವಾರವೇ ಉತ್ತರ ಸಿಗಲಿದೆ.

Follow Us
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!