Shiradi ghat ಮಳೆ ಕಡಿಮೆಯಾದ ಹಿನ್ನೆಲೆ ಶಿರಾಡಿಘಾಟ್ನಲ್ಲಿ ವಾಹನ ಸಂಚಾರಕ್ಕೆ ಹಾಸನ ಡಿಸಿ ಗ್ರೀನ್ ಸಿಗ್ನಲ್
Hassan DC: ತಕ್ಷಣದಿಂದ ಜಾರಿಗೆ ಬರುವಂತೆ ಕಾರು, ಬಸ್ ಸೇರಿ 6 ಚಕ್ರದ ವಾಹನಗಳು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ನಲ್ಲಿ ಎಂದಿನಂತೆ ಸಂಚರಿಸಬಹುದು ಎಂದು ಹಾಸನ ಡಿಸಿ ಆರ್.ಗಿರೀಶ್ ತಿಳಿಸಿದ್ದಾರೆ.
ಹಾಸನ: ನಿರಂಗತರವಾಗಿ ಸುರಿಯುತ್ತಿದ್ದ ಮಳೆ ಕಡಿಮೆಯಾದ ಹಿನ್ನೆಲೆ (Hassan rains) ಶಿರಾಡಿಘಾಟ್ನಲ್ಲಿ (Shiradi ghat) ವಾಹನ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಕಾರು, ಬಸ್ ಸೇರಿ 6 ಚಕ್ರದ ವಾಹನಗಳು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ನಲ್ಲಿ ಎಂದಿನಂತೆ ಸಂಚರಿಸಬಹುದು ಎಂದು ಹಾಸನ ಡಿಸಿ (Hassan DC) ಆರ್.ಗಿರೀಶ್ ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಜುಲೈ 15ರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ದೋಣಿಗಲ್ ಬಳಿ 2 ಕಡೆ ಭೂಕುಸಿತ ಮತ್ತು ರಸ್ತೆ ಕುಸಿತ ಉಂಟಾಗಿತ್ತು. ಆಗ ಮುಂಜಾಗ್ರತಾ ಕ್ರಮವಾಗಿ ಹಾಸನ ಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು. ಈ ಮಧ್ಯೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುವ ಹಿನ್ನೆಲೆ ಸಂಚಾರಕ್ಕೆ ಇದೀಗ ಅನುಮತಿ ನೀಡಲಾಗಿದೆ.