ಸಮುದ್ರ ಮೀನಿನ ಟೆಂಡರ್ ಕೊಡಿಸುವುದಾಗಿ 2 ಲಕ್ಷ ರೂ. ವಂಚನೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

ನಗರದಲ್ಲಿ ಎಲ್ಲಿ ಸಮುದ್ರ ಮೀನನ್ನು ಮಾರಲು ಅಂಗಡಿ ಅರಂಭಿಸುತ್ತಿರೋ ಅಲ್ಲಿ ಟೆಂಡರ್ ಕೊಡಿಸಿ ಫ್ರಾಂಚೈಸಿ ಕೊಡಿಸುವುದಾಗಿ ಆಯೇಷಾರಿಗೆ ಇವರು ನಂಬಿಸಿದ್ದಾರೆ. ಬಳಿಕ ನಾಲ್ವರು ಆಯೇಷಾ ಅವರ ಬಳಿ 4 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇವರ ಮಾತು ನಂಬಿದ ಆಯೇಷಾ ಎರಡು ಲಕ್ಷ ರೂ. ಹಣ ನೀಡಿದ್ದಾರೆ.

ಸಮುದ್ರ ಮೀನಿನ ಟೆಂಡರ್ ಕೊಡಿಸುವುದಾಗಿ 2 ಲಕ್ಷ ರೂ. ವಂಚನೆ; ನಾಲ್ವರ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on:Sep 05, 2021 | 7:49 AM

ಶಿವಮೊಗ್ಗ: ಮಲೆನಾಡಿನಲ್ಲಿ ಇತ್ತೀಚೆಗೆ ವಂಚಕರ ಹಾವಳಿ ಹೆಚ್ಚಾಗುತ್ತಿದೆ. ಹಣ ಕೊಟ್ಟು ಮೋಸ ಹೋಗುವವರು ಕೂಡ ಹೆಚ್ಚಾಗುತ್ತಿದ್ದಾರೆ.ಆ ಮೂಲಕ ನಿತ್ಯ ಒಂದಲ್ಲ ಒಂದು ಮೋಸಕ್ಕೆ ಅಮಾಯಕರು ತುತ್ತಾಗುತ್ತಿದ್ದಾರೆ. ಸದ್ಯ ಶಿವಮೊಗ್ಗದ ಮಹಿಳೆಯೊಬ್ಬಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹೋಗಿ ಕೈ ಸುಟ್ಟಿಕೊಂಡಿದ್ದಾರೆ.

ಶಿವಮೊಗ್ಗ ನಗರದ ನ್ಯೂ ಮಂಡ್ಲಿಯ ವಾಸಿ ಆಯೇಷಾ ತಬುಸುಂ ಎಂಬ ಮಹಿಳೆಗೆ ಸಮುದ್ರ ಮೀನಿನ ಟೆಂಡರ್ ಕೊಡಿಸುವುದಾಗಿ ನಂಬಿಸಿ ನಾಲ್ವರು ವಂಚಿಸಿದ್ದಾರೆ. ಈ ಮಹಿಳೆಗೆ ಮಂಗಳೂರಿನ ತಲಪಾಡಿ ಅಬುಬಕರ್ ಅಹ್ಮದ್, ಜಿಯಾ ಉಲ್ಲಾ ಹಾಸನ್, ಫೈರೋಸ್ ಖಾನ್ ಮತ್ತು ಅಬುಬಕರ್ ಸಿದ್ದಿಕ್ ಎಂಬುವವರು ಸಮುದ್ರ ಮೀನಿನ ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿದ್ದಾರೆ.

ನಗರದಲ್ಲಿ ಎಲ್ಲಿ ಸಮುದ್ರ ಮೀನನ್ನು ಮಾರಲು ಅಂಗಡಿ ಅರಂಭಿಸುತ್ತಿರೋ ಅಲ್ಲಿ ಟೆಂಡರ್ ಕೊಡಿಸಿ ಫ್ರಾಂಚೈಸಿ ಕೊಡಿಸುವುದಾಗಿ ಆಯೇಷಾರಿಗೆ ಇವರು ನಂಬಿಸಿದ್ದಾರೆ. ಬಳಿಕ ನಾಲ್ವರು ಆಯೇಷಾ ಅವರ ಬಳಿ 4 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇವರ ಮಾತು ನಂಬಿದ ಆಯೇಷಾ ಎರಡು ಲಕ್ಷ ರೂ. ಹಣ ನೀಡಿದ್ದಾರೆ.

ಹಣ ಪಡೆದ ಈ ನಾಲ್ವರು ತದನಂತರ ಮಹಿಳೆಯ ಸಂಪರ್ಕಕ್ಕೆ ಸಿಗುತ್ತಿಲ್ಲ. ಅನೇಕ ಬಾರಿ ಅವರ ಮೊಬೈಲ್​ಗೆ ಕರೆ ಮಾಡಿದರೆ ಈ ನಾಲ್ವರು ನಾಟ್ ರೀಚಬಲ್ ಆಗಿದ್ದಾರೆ. ಇದರಿಂದ ಮಹಿಳೆಗೆ ಗೊತ್ತಾಗಿದೆ ತಾನು ಮೋಸ ಹೋಗಿದ್ದೇನೆ ಎಂದು. ಸದ್ಯ ಹತಾಶೆ ಆಗಿರುವ ಮಹಿಳೆಯು ವಂಚಕರ ವಿರುದ್ಧ ದೂರು ನೀಡಿದ್ದಾರೆ. ಆಯೇಷಾ ತಬುಸಂರನ್ನು ವಂಚಿಸಿದ ಅಬುಬಕರ್ ಅಹ್ಮದ್, ಅಬುಬಕರ್ ಸಿದ್ದಕಿ, ಜಿಯಾ ಉಲ್ಲಾ ಹಾಸನ್, ಫೈರೋಜ್ ಖಾನ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೀದರ್: ಎಲ್ಐಸಿ ಮಾಡಿಸುವುದಾಗಿ 165 ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಆರೋಪ

ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ

(Fish tender Fraud woman files case against four in Shivamogga)

Published On - 7:45 am, Sun, 5 September 21