ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಗುಂಡಿಟ್ಟು ಕೊಲ್ಲಬೇಕು: ಕನ್ಹಯ್ಯಾ ಲಾಲ್ ಕೊಲೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ

ಧರ್ಮದ ಹೆಸರಲ್ಲಿ ಇದೆಲ್ಲಾ ನಡೆಯಬಾರದು. ಅವರೆಲ್ಲಾ ಮತಾಂಧರು, ಜಗತ್ತಿನ ನೆಮ್ಮದಿ ಕೆಡಿಸಿದ್ದಾರೆ. ಬುದ್ದಿ ಜೀವಿಗಳ ನಾಲಿಗೆಗೆ ಲಕ್ವಾ ಹೊಡೆದಿದೆಯಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಗುಂಡಿಟ್ಟು ಕೊಲ್ಲಬೇಕು: ಕನ್ಹಯ್ಯಾ ಲಾಲ್ ಕೊಲೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 29, 2022 | 2:38 PM

ಶಿವಮೊಗ್ಗ: ರಾಷ್ಟ್ರಭಕ್ತ ಹಿಂದೂಗಳನ್ನ ಹೇಡಿಗಳ ರೀತಿ ಹೋಗಿ ಕೊಲೆ (Murder) ಮಾಡುತ್ತಾರೆ. ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಗುಂಡಿಟ್ಟು ಕೊಲ್ಲಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆದರು. ಇಲ್ಲವೇ ಕನ್ಹಯ್ಯಾ ಲಾಲ್ ಹಂತಕರನ್ನ ತಕ್ಷಣ ಗಲ್ಲಿಗೇರಿಸಬೇಕು. ಹಂತಕರ ವಿಚಾರಣೆ ಮಾಡುವ ಅಗತ್ಯವಿಲ್ಲ, ಈಗಲೇ ಶಿಕ್ಷೆ ಕೊಡಿ. ಈಗಾಗಲೇ ಆರೋಪಿಗಳು ವಿಡಿಯೋದಲ್ಲಿ ಕೃತ್ಯ ಒಪ್ಪಿಕೊಂಡಿದ್ದಾರೆ. ವಿಶ್ವನಾಯಕ ನರೇಂದ್ರ ಮೋದಿಯ ಕೊಲೆಗೆ ಸಂಚು ರೂಪಿಸಿದ್ದಾರೆ. ವಿಶ್ವಸಂಸ್ಥೆ ಈಗಲೇ ಸಭೆ ಕರೆದು ಕೊಲೆ ಬೆದರಿಕೆ ಬಗ್ಗೆ ಸಭೆ ನಡೆಸಬೇಕು. ಮಂದಿರಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಗಿದೆ. ಕಲ್ಯಾಣಿಗಳಲ್ಲಿರುವ ಲಿಂಗದ ಮೇಲಿರುವ ನೀರಿನಲ್ಲಿ ಕಾಲು ತೊಳೀತಾರೆ. ಪ್ರಧಾನಿಗೆ ಬೆದರಿಕೆ ಹಾಕುವ ವ್ಯವಸ್ಥೆ ಇದೇ ಪ್ರಥಮ ಬಾರಿಗೆ ನಡೆದಿದೆ. ಹಿಂದೂಗಳನ್ನು ಕೆಣಕುವ ಪ್ರಯತ್ನ ಮಾಡಬೇಡಿ. ಹಿಂದೂ ಟೈಲರ್​ಗೆ ಆದ ರೀತಿಯಲ್ಲಿಯೇ ಮುಸಲ್ಮಾರಿಗೆ ಆದ್ರೆ ಎಂದು ಪ್ರಶ್ನಿಸಿದರು. ಮುಸಲ್ಮಾನರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಕೆಲ ಪುಂಡರು ಪೊಲೀಸರಿಗೆ ಚಾಕು ಇರಿಯುತ್ತಾರೆಂದರೆ ಏನು ಕಥೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಹೇಳಿಕೆ ನೀಡಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಖಂಡನೀಯ: ಬಿ.ಕೆ ಹರಿಪ್ರಸಾದ್ 

ನವದೆಹಲಿ: ರಾಜಸ್ಥಾನದಲ್ಲಿ ನಡೆದಿರುವುದು ಘೋರವಾದ ಘಟನೆ, ಇದು ಖಂಡನೀಯ ಎಂದು ನವದೆಹಲಿಯಲ್ಲಿ ವಿಧಾನ ಪರಿಷತ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದು, ಇದನ್ನು ಮುಂದಿಟ್ಟುಕೊಂಡು ರಾಜಕೀಯ ಹೇಳಿಕೆ ನೀಡುಬಹದು ತಪ್ಪು. ಎಲ್ಲ ಧರ್ಮ ಭಾಷೆಗಳು ಅನ್ಯೂನವಾಗಿರುವ ದೇಶ. ಘಟನೆಗೆ ಹಲವಾರು ಘಟನೆಗಳು ಇರಬಹುದು. ಸಾವನ್ನು ವೈಭವಿಕರಿಸಬಾರದು. ಹಿಂದೆ ಶಂಕರಲಾಲ್ ಎನ್ನುವವರು ಓರ್ವ ಹುಡ್ಗನ ಹತ್ಯೆ ಮಾಡಿಸಿದ್ದರು. ಫರಿದಾಬಾದ್​ನಲ್ಲಿ ಅಲ್ಪ ಸಂಖ್ಯಾತ ಅನ್ನೊ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಕಟುವಾದಲ್ಲಿ ಐದು ವರ್ಷದ ಹೆಣ್ಣು ಮಗು ಕೊಲೆ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಖಂಡಿಸಬೇಕು. ಅಸಹಿಷ್ಣುತೆ ಎನ್ನುವುದು ಭಾರತದಲ್ಲಿ ಇರಲಿಲ್ಲ. ಎಂಟು ವರ್ಷದ ಹಿಂದೆ ವಿಶ್ವಗುರು ಬಂದ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿದೆ. ಇದನ್ನು ಸಭ್ಯ ನಾಗರಿಕ ಸಮಾಜ ವಿರೋಧಿಸಬೇಕು ಎಂದು ಹೇಳಿದರು.

ರಾಜಸ್ಥಾನದಲ್ಲಿ ನಡೆದ ಹತ್ಯೆ ಅತ್ಯಂತ ಅಮಾನುಷವಾಗಿದೆ; ಆರಗ ಜ್ಞಾನೇಂದ್ರ

ಬೆಂಗಳೂರು: ರಾಜಸ್ಥಾನ ಹತ್ಯೆ ಪ್ರಕರಣ ನೋಡಲಾರದಷ್ಟು ಅಮಾನುಷವಾಗಿದೆ. ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ರಾಜಸ್ಥಾನ ಸರ್ಕಾರ ವಿಫಲವಾಗಿದೆ ಎಂದು ನಗರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಸಮಾಜ‌ ಇದನ್ನು ಖಂಡಿಸಿದಾಗ ಇದಕ್ಕೆ ಕಡಿವಾಣ ಆಗುತ್ತದೆ. ಧರ್ಮದ ಹೆಸರಲ್ಲಿ ಇದೆಲ್ಲಾ ನಡೆಯಬಾರದು. ಅವರೆಲ್ಲಾ ಮತಾಂಧರು, ಜಗತ್ತಿನ ನೆಮ್ಮದಿ ಕೆಡಿಸಿದ್ದಾರೆ. ಬುದ್ದಿ ಜೀವಿಗಳ ನಾಲಿಗೆಗೆ ಲಕ್ವಾ ಹೊಡೆದಿದೆಯಾ ಎಂದು ಪ್ರಶ್ನಿಸಿದರು. ಎಲ್ಲಾ ವರ್ಗದ ತಪ್ಪನ್ನೂ ಖಂಡಿಸಬೇಕು. ಕೇವಲ ಒಂದು ವರ್ಗದವ ಪರ ನಿಲ್ಲುವುದು. ಇನ್ನೊಂದು ವರ್ಗದ ವಿರುದ್ಧ ಮಾತಾಡುವುದು ಅಪಾಯಕಾರಿ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಬೆಳಂ ಬೆಳಗ್ಗೆ ರೌಡಿಗಳಿಗೆ ಶಾಕ್​ ನೀಡಿದ ಖಾಕಿ: 26 ರೌಡಿಗಳ ಮನೆಗಳ ಮೇಲೆ ದಾಳಿ