ಗೃಹ ಸಚಿವ ಆರಗ ಕ್ಷೇತ್ರದಲ್ಲಿ 10 ಲಕ್ಷ ರೂ ಸೋಲಾರ್ ಪ್ಯಾನಲ್ ಕಳವು: ಕೊನೆಗೂ ಸಿಕ್ಕಿಬಿದ್ದ ಕಳ್ಳ -ಗ್ರಾಮ ಪಂ. ಉದ್ಯೋಗಿಯಿಂದಲೇ ಕಳ್ಳತನ!

ಗ್ರಾಮಸ್ಥರ ಕುಡಿಯುವ ನೀರಿಗೆ ಅನುಕೂಲಕ್ಕೆಂದು ಸರಕಾರವು ಸೋಲಾರ್ ಯೋಜನೆ ಜಾರಿಗೆ ತಂದಿತ್ತು. 10 ಲಕ್ಷ ರೂ ಮೌಲ್ಯದ ಸೋಲಾರ್ ಕದ್ದವನು ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗ್ರಾ.ಪಂ ಉದ್ಯೋಗಿಯೇ ಕಿಲಾಡಿ ಕಳ್ಳ ಎನ್ನುವ ಸುದ್ದಿ ಕೇಳಿದ ಗ್ರಾಮಸ್ಥರಿಗೆ ದೊಡ್ಡ ಅಚ್ಚರಿಯಾಗಿದೆ.

ಗೃಹ ಸಚಿವ ಆರಗ ಕ್ಷೇತ್ರದಲ್ಲಿ 10 ಲಕ್ಷ ರೂ ಸೋಲಾರ್ ಪ್ಯಾನಲ್ ಕಳವು: ಕೊನೆಗೂ ಸಿಕ್ಕಿಬಿದ್ದ ಕಳ್ಳ -ಗ್ರಾಮ ಪಂ. ಉದ್ಯೋಗಿಯಿಂದಲೇ ಕಳ್ಳತನ!
ಗೃಹ ಸಚಿವರ ತವರು ಕ್ಷೇತ್ರದಲ್ಲಿ ಸೋಲಾರ್ ಪ್ಯಾನಲ್ ಕಳವು (ಆರೋಪಿಗಳು ಮಧು ಮತ್ತು ಧನು)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 02, 2023 | 2:47 PM

ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗಬಾರದೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿತ್ತು. ಈ ಮೂಲಕ ವಿದ್ಯುತ್ ಇಲ್ಲದಿದ್ದರೂ ಸೋಲಾರ್ ವಿದ್ಯುತ್ ಮೂಲಕ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ದಿಢೀರನೆ ಸೋಲಾರ್ ಪ್ಯಾನಲ್ ಪ್ಲೇಟ್ ಗಳು ನಾಪತ್ತೆಯಾಗಿದ್ದವು. ಗೃಹ ಸಚಿವರ ತವರು ಕ್ಷೇತ್ರದ ಗ್ರಾಮ ಪಂಚಾಯತ್​ ನಲ್ಲಿ ಲಕ್ಷಾಂತರ ರೂಪಾಯಿ ಸೋಲಾರ್ ಪ್ಯಾನಲ್ ಪ್ಲೇಟ್ ಗಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೋಲಾರ್ ಕಳ್ಳರ ಕುರಿತು ಒಂದು ವರದಿ ಇಲ್ಲಿದೆ…

ಶಿವಮೊಗ್ಗ ತಾಲೂಕಿಗೆ ಸೇರಿದ ತೀರ್ಥಹಳ್ಳಿಯಲ್ಲಿ ಗೃಹ ಸಚಿವರ ವಿಧಾನಸಭಾ ಕ್ಷೇತ್ರವಾದ ಉಂಬ್ಳೇಬೈಲು ಗ್ರಾಮ ಪಂಚಾಯತ್​​ ನ ಕಣಗಲಸರ ಗ್ರಾಮದ ಚಿಕ್ಕೆರೆ ಕೆರೆ ಹತ್ತಿರ ಅಳವಡಿಸಲಾಗಿದ್ದ 10 ಲಕ್ಷ ರೂಪಾಯಿ ಮೌಲ್ಯದ ಸೋಲಾರ್ ಪ್ಯಾನೆಲ್ ಪ್ಲೇಟ್ ಗಳು ಕಳುವಾಗಿದ್ದವು. ಸೋಲಾರ್ ಕಳ್ಳತನ ಕುರಿತು ಗ್ರಾಮ ಪಂಚಾಯಿತಿ ಪಿಡಿಓ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

2018-19 ನೇ ಸಾಲಿನಲ್ಲಿ ಕಣಗಲಸರ ಗ್ರಾಮದಲ್ಲಿ ಸೋಲಾರ್ ಅಳವಡಿಕೆ ಮಾಡಲಾಗಿತ್ತು. ಸೆಪ್ಟೆಂಬರ್ 2022 ನೇ ಸಾಲಿನಲ್ಲಿ ಸೋಲಾರ್ ಪ್ಯಾನೆಲ್ ಪ್ಲೇಟ್ ಗಳ ಕಳ್ಳತನವಾಗಿತ್ತು. ತುಂಗಾ ನಗರ ಪೊಲೀಸರು ಕಳ್ಳತನ ಕೇಸ್ ದಾಖಲಿಸಿಕೊಂಡರಾದರೂ ತನಿಖೆಯನ್ನು ಆಮೆಗತಿಯಲ್ಲಿ ನಡೆಸುತ್ತಿದ್ದರು. ಇದರ ಪರಿಣಾಮ ಸೋಲಾರ್ ಕಳ್ಳರ ಬಂಧನವಾಗಿರಲಿಲ್ಲ. ಈ ಕುರಿತು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು.

ಈ ನಡುವೆ ತುಂಗಾ ನಗರ ಪೊಲೀಸರು ಧನು ಎಂಬಾತನನ್ನು ಸೋಲಾರ್ ಕಳ್ಳತನ ಕೇಸ್ ನಲ್ಲಿ ಮೊದಲು ಬಂಧಿಸಿದ್ದರು. ಆರೋಪಿ ಧನುನನ್ನು ವಿಚಾರಣೆಗೊಳಪಡಿಸಿದಾಗ ಒಂದು ಅಚ್ಚರಿಯ ಸಂಗತಿ ಹೊರಬಿದ್ದಿತ್ತು. ಇದೇ ಗ್ರಾ.ಪಂ. ಪಿಡಿಒ ಕಚೇರಿಯಲ್ಲಿ ಡಾಟಾ ‌ಆಪರೇಟರ್ ಆಗಿದ್ದ ಮಧು ಎಂಬ ವ್ಯಕ್ತಿ ಸೋಲಾರ್ ಕಳ್ಳತನದ ಪ್ರಮುಖ ಆರೋಪಿ ಆಗಿದ್ದನು. ಮಧು ಈ ಸೋಲಾರ್ ಪ್ಯಾನೆಲ್ ಗಳನ್ನ ಕಳವು ಮಾಡಿ, ಅದರಿಂದ ಬರುವ ಲಕ್ಷಾಂತರ ರೂಪಾಯಿ ಲಾಭದಲ್ಲಿ ಪಾಲುದಾರನೂ ಆಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿತ್ತು.

ಯಾವಾಗ ಧನು ಅರೆಸ್ಟ್ ಆಗಿದ್ದಾನೆ ಎಂಬ ಮಾಹಿತಿ ಹೊರಗೆ ಬಿತ್ತೋ ಆಗಿನಿಂದ ಡಾಟಾ ಆಪರೇಟರ್ ನಿಗೂಢವಾಗಿ ಕಣ್ಮರೆಯಾಗಿದ್ದ. ಇನ್ನು ಮಧು ಸಾಕಷ್ಟು ಪ್ರಭಾವ ಬೀರಿ ಪ್ರಕರಣದಿಂದ ಬಚಾವ್ ಆಗುವುದಕ್ಕೆ ನಿರಂತರ ಪ್ರಯತ್ನ ಮಾಡಿದ್ದನು. ಆದ್ರೆ ಅದು ಸಾಧ್ಯವಾಗದ ಹಿನ್ನೆಲೆ ಕೊನೆಗೆ ಹತಾಶನಾಗಿ ತುಂಗಾ ನಗರ ಪೊಲೀಸ್ ಠಾಣೆಗೆ ಬಂದು ಮಧು ಶರಣಾಗಿದ್ದಾನೆ.

ಗ್ರಾ.ಪಂ.ಗೆ ಸೇರಿದ ಸೋಲಾರ್ ಪ್ಯಾನಲ್ ಪ್ಲೇಟ್ ಗಳ ಕಳ್ಳತನವಾಗಿತ್ತು. ಪಿಡಿಓ ಅಮಿತ್ ರಾಜ್ ತುಂಗಾ ನಗರ ಠಾಣೆಯಲ್ಲಿ ಕಳ್ಳತನ ಕೇಸ್ ದಾಖಲಿಸಿದ್ದರು. ಈ ದೂರು ನೀಡುವ ಸಮಯದಲ್ಲಿ ಪಿಡಿಒ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಮಧು ಕೂಡಾ ಜೊತೆಯಲ್ಲಿದ್ದನು. ಸೋಲಾರ್ ಕಳ್ಳತನ ಮಾಡಿ ಅಮಾಯಕನಂತೆ ನಟನೆ ಮಾಡಿದ್ದನು. ಸುಮಾರು ಆರೇಳು ತಿಂಗಳು ಯಾರಿಗೂ ಅನುಮಾನ ಬಾರದಂತೆ ಮಧು ಇದ್ದನು.

ಸೋಲಾರ್ ಪ್ರಕರಣದ ತನಿಖೆಗೆ ಗ್ರಾಮಸ್ಥರಿಂದ ಒತ್ತಡ ದಿನೇ ದಿನೇ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ತುಂಗಾ ನಗರ ಪೊಲೀಸರು ಕಳ್ಳರ ಬೆನ್ನು ಬಿದ್ದಿದ್ದರು. ಇದೇ ಗ್ರಾಮದ ಧನುವಿನ ಮೇಲೆ ಪೊಲೀಸರಿಗೆ ಅನುಮಾನವಿತ್ತು. ಈತನ ವಿಚಾರಣೆ ಬಳಿಕ ಈ ಸೋಲಾರ್ ಕಳ್ಳತನ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ. ಅದೇ ಗ್ರಾ.ಪಂ. ಡಾಟಾ ಎಂಟ್ರಿ ಆಪರೇಟರ್ ಮಧು ಆಗಿದ್ದನು.

ಈತನ ಬಂಧನದ ಬಳಿಕ ಗ್ರಾಮಸ್ಥರಿಗೂ ದೊಡ್ಡ ಅಚ್ಚರಿಯಾಗಿದೆ. ಕಳ್ಳತನ ಮಾಡಿದ ಮಧು ಊರು ಒಳಗೆ ಗ್ರಾ.ಪಂ.ನಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದನು. ಆದ್ರೆ ಕೊನೆಗೂ ತುಂಗಾ ನಗರ ಪೊಲೀಸರು ಜಟೀಲವಾಗಿದ್ದ ಸೋಲಾರ್ ಪ್ಯಾನಲ್ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧನು ಮತ್ತು ಮಧು ಇಬ್ಬರೂ ಸದ್ಯ ಕಳ್ಳತನ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಮತ್ತೆ ಬೇರೆ ಯಾರಾದ್ರೂ ಶಾಮೀಲು ಆಗಿದ್ದಾರಾ? ಎನ್ನುವ ಅನುಮಾನಗಳಿವೆ. ಈ ನಿಟ್ಟಿನಲ್ಲೂ ತುಂಗಾ ನಗರ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಗ್ರಾಮಸ್ಥರ ಕುಡಿಯುವ ನೀರಿಗೆ ಅನುಕೂಲಕ್ಕೆಂದು ಸರಕಾರವು ಸೋಲಾರ್ ಯೋಜನೆ ಜಾರಿಗೆ ತಂದಿತ್ತು. 10 ಲಕ್ಷ ರೂ ಮೌಲ್ಯದ ಸೋಲಾರ್ ಕದ್ದವನು ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗ್ರಾ.ಪಂ ಉದ್ಯೋಗಿಯೇ ಕಿಲಾಡಿ ಕಳ್ಳ ಎನ್ನುವ ಸುದ್ದಿ ಕೇಳಿದ ಗ್ರಾಮಸ್ಥರಿಗೆ ದೊಡ್ಡ ಅಚ್ಚರಿಯಾಗಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9, ಶಿವಮೊಗ್ಗ

Published On - 2:10 pm, Thu, 2 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್