ನಿರಂತರ ಮಳೆಗೆ ತುಮಕೂರಿನಲ್ಲಾದ ನಷ್ಟದ ವಿವರ ಇಲ್ಲಿದೆ
ಸದ್ಯ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಮಳೆಯಿಂದಾದ ನಷ್ಟ ಅಷ್ಟಿಷ್ಟಲ್ಲ. ತುಮಕೂರು ಜಿಲ್ಲೆಯಲ್ಲೂ ಅಕಾಲಿಕ ಮಳೆಗೆ ಅಪಾರ ನಷ್ಟವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ತುಮಕೂರು: ಸುಮಾರು 15 ದಿನಗಳಿಂದ ರಾಜ್ಯದ ಹಲವೆಡೆ ಸುರಿದ ನಿರಂತರ ಮಳೆಗೆ ರೈತರು ಹೈರಾಣಾಗಿದ್ದಾರೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಫಸಲು ರೈತನ ಕೈ ಸೇರುವ ಹೊತ್ತಿಗೆ ನೀರು ಪಾಲಾಗಿರುವುದು ವಿಪರ್ಯಾಸ. ಸದ್ಯ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಮಳೆಯಿಂದಾದ ನಷ್ಟ ಅಷ್ಟಿಷ್ಟಲ್ಲ. ತುಮಕೂರು ಜಿಲ್ಲೆಯಲ್ಲೂ ಅಕಾಲಿಕ ಮಳೆಗೆ ಅಪಾರ ನಷ್ಟವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ರಾಗಿ ಬೆಳೆ ಹಾನಿಯಾಗಿದೆ. 4,771 ಹೆಕ್ಟೇರ್ ಪ್ರದೇಶದಲ್ಲಿದ್ದ ಶೇಂಗಾ, 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಜೋಳ, 186 ಹೆಕ್ಟೇರ್ ಪ್ರದೇಶದಲ್ಲಿದ್ದ ತೊಗರಿ ಬೆಳೆ ಹಾನಿಯಾಗಿದೆ ಅಂತ ತುಮಕೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಸುಮಾರು 32 ಜಾನುವಾರು ಬಲಿಯಾಗಿವೆ. 310 ಮನೆಗಳು ಭಾಗಶಃ ಹಾನಿಯಾಗಿವೆ ಅಂತ ತಿಳಿಸಿರುವ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.
ಕೃಷಿ ಸಚಿವರಿಗೆ ಮನವಿ ಅಕಾಲಿಕ ಮಳೆಯಿಂದ ಬಾಗಲಕೋಟೆಯಲ್ಲೂ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನಡೋಣಿ ಗ್ರಾಮದಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಇಷ್ಟೆಲ್ಲ ಹಾನಿಯಾಗಿದರೂ ಶಾಸಕರು, ಅಧಿಕಾರಿಗಳು ಭೇಟಿ ನೀಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ ರೈತರು ತಮ್ಮ ಕಷ್ಟಕ್ಕೆ ಧಾವಿಸುವಂತೆ ಸಿಎಂ ಮತ್ತು ಕೃಷಿ ಸಚಿವರಿಗೆ ಮನವಿ ಮಾಡುತ್ತಿದ್ದಾರೆ. ಜೊತೆಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಹೂವಿನ ತೋಟಕ್ಕೆ ಹಾನಿ ನಿರಂತರ ಮಳೆಗೆ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ 300 ಎಕೆರೆಯಲ್ಲಿದ್ದ ಹೂವಿನ ತೋಟಕ್ಕೆ ಹಾನಿಯಾಗಿದೆ. ಸಾಲ ಮಾಡಿ ಹೂವು ಬೆಳೆ ಬೆಳೆದಿದ್ದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಬೆಳೆ ನೀರುಪಾಲಾಗಿದೆ. ಭತ್ತ ಗದ್ದೆಯಲ್ಲಿಯೇ ಮೊಳಕೆಯೊಡೆಯುತ್ತಿದೆ. ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್, ಚಂದನಹಳ್ಳಿ, ರವಡಕುಂದಾ, ರಾಮಕ್ಯಾಂಪ್, ಗೋರೆಬಾಳ, ಶಾಂತಿನಗರ, ಅಂಬಾಮಠ, ಗೊಬ್ಬರಕಲ್, ಸಿಂಗಾಪುರದಲ್ಲಿ ಬೆಳೆ ಹಾನಿಯಾಗಿದೆ. ಕೋಟ್ಯಂತರ ರೂ. ಮೌಲ್ಯದ ಭತ್ತದ ಬೆಳೆ ನೀರುಪಾಲಾಗಿದ್ದು, ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ
Viral Video: ಓಡಿ ಹೋಗದಂತೆ ಕೋತಿಯನ್ನು ಹಿಡಿದು ನಿಂತ ವ್ಯಕ್ತಿಗೆ ಏನಾಯ್ತು ನೋಡಿ; ವಿಡಿಯೊ ವೈರಲ್
ಬೆಂಗಳೂರನ್ನ ಬಿಟ್ಟೂ ಬಿಡದೆ ಕಾಡ್ತಿದೆ ಮಹಾಮಳೆ: ಕೆರೆಗಳಾದ ರಸ್ತೆಗಳು, ಮನೆಗಳು ಜಲಾವೃತ
Published On - 8:53 am, Mon, 22 November 21