ಗ್ರಾಮ ಪಂಚಾಯಿತಿ ಪಿಡಿಓ ಜೊತೆ ಸದಸ್ಯನ ಅಸಭ್ಯ ವರ್ತನೆ; ಘಟನೆ ಕುರಿತು ವರದಿ ನೀಡುವಂತೆ ಜಿಪಂ ಸಿಇಒ ಸೂಚನೆ

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿಪುರ ಗ್ರಾಮ ಪಂಚಾಯಿತಿನಲ್ಲಿ ಪಿಡಿಓ ಕೋಕಿಲಾ ಜೊತೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್  ಅಸಭ್ಯವಾಗಿ ವರ್ತಿಸಿರೊ ವಿಡಿಯೋ ವೈರಲ್​​ ಆಗಿದೆ.

ಗ್ರಾಮ ಪಂಚಾಯಿತಿ ಪಿಡಿಓ ಜೊತೆ ಸದಸ್ಯನ ಅಸಭ್ಯ ವರ್ತನೆ; ಘಟನೆ ಕುರಿತು ವರದಿ ನೀಡುವಂತೆ ಜಿಪಂ ಸಿಇಒ ಸೂಚನೆ
ಪಿಡಿಒ ಜೊತೆ ಗ್ರಾಪಂ ಸದಸ್ಯನ ಅಸಭ್ಯ ವರ್ತನೆ
TV9kannada Web Team

| Edited By: Vivek Biradar

Jul 03, 2022 | 5:15 PM

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿಪುರ ಗ್ರಾಮ ಪಂಚಾಯಿತಿನಲ್ಲಿ (Gram Panchayat) ಪಿಡಿಓ (PDO) ಕೋಕಿಲಾ ಜೊತೆ ಗ್ರಾಮ ಪಂಚಾಯಿತಿ ಸದಸ್ಯ (Member) ಪ್ರಸನ್ನ ಕುಮಾರ್  ಅಸಭ್ಯವಾಗಿ ವರ್ತಿಸಿರೊ ವಿಡಿಯೋ ವೈರಲ್​​ ಆಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್, ಪಿಡಿಓ ಕೋಕಿಲಾ  ಅವರಿಗೆ ಬಲವಂತವಾಗಿ ಮುತ್ತು(Kiss) ಕೊಟ್ಟಿದ್ದು, ಜೊತೆಗೆ ಬಲವಂತವಾಗಿ ಪಿಡಿಓ ಕೋಕಿಲಾರನ್ನ ತಬ್ಬಿಕೊಂಡು ಮುದ್ದಾಡಿದ್ದಾನೆ.  ಘಟನೆ ಸಂಬಂಧ ಜಿಲ್ಲಾ ಪಂಚಾಯಿತಿ (Zilla Panchayat) ಸಿಇಒ ಡಾ. ವಿದ್ಯಾಕುಮಾರಿ ಕುರಿತು ವರದಿ ನೀಡುವಂತೆ ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಇಒಗೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಅಪರಿಚಿತ ವಿಶಿಷ್ಟಚೇತನ ವ್ಯಕ್ತಿಯೊಂದಿಗೆ ಜನ್ಮದಿನವನ್ನು ಆಚರಿಸಿದ ವಿದ್ಯಾರ್ಥಿ, ನೆಟ್ಟಿಗರ ಮನಗೆದ್ದ ವಿಡಿಯೋ ಇಲ್ಲಿದೆ

ಚಿಕ್ಕ ಎಮ್ಮಿಗನೂರಿನಲ್ಲಿ ‘ಕೈ’ ಕಾರ್ಯಕರ್ತರ ನಡುವೆ ಘರ್ಷಣೆ

ಚಿತ್ರದುರ್ಗ: ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕ ಎಮ್ಮಿಗನೂರಿನಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಘರ್ಷಣೆ  ನಡೆದಿದೆ. ಮಾಜಿ ಸಚಿವ ಹೆಚ್.ಆಂಜನೇಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಘುಬೆಂಬಲಿಗರ ನಡುವೆ ವೀಕ್ಷಕರಾಗಿ ಕ್ಷೇತ್ರಕ್ಕೆ ಆಗಮಿಸಿದ್ದ ‘ಕೈ’ ನಾಯಕ ಸಾಸಲು ಸತೀಶ್ ಎದುರು ಕಾರ್ಯಕರ್ತರು ಜಗಳವಾಡಿದ್ದಾರೆ. ಬೆಂಬಲಿಗರು ಪರಸ್ಪರ ಘೋಷಣೆ ಕೂಗುವಾಗ ಕಾರ್ಯಕರ್ತರ ನಡುವೆ ಜಗಳ ನಡೆದಿದೆ. ಆಂಜನೇಯ ಮತ್ತು ಸವಿತಾ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada