AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು ಜನರಿಗೆ ಗುಡ್​​​ ನ್ಯೂಸ್: ಕೇಂದ್ರದಿಂದ ಬರಲಿವೆ 50 ಹೊಸ ಎಲೆಕ್ಟ್ರಿಕ್ ಬಸ್‌ಗಳು; ಹಳೆ ಬಸ್ ನಿಲ್ದಾಣವೇ ಇನ್ಮುಂದೆ ಇ-ಬಸ್ ಡಿಪೋ

ತುಮಕೂರು ನಗರ ಸಾರಿಗೆಗೆ ಪಿಎಂ ಇ-ಬಸ್ ಸೇವಾ ಯೋಜನೆಯಡಿ 50 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ತರಲು ಕೆಎಸ್‌ಆರ್‌ಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಬಾಳೇಕಟ್ಟೆ ಹಳೆ ಬಸ್ ನಿಲ್ದಾಣವೇ ಇ-ಬಸ್ ಡಿಪೋ ಆಗಲಿದೆ, ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸರಿಯಾದ ಸಾರಿಗೆ ವ್ಯವಸ್ಥೆಗಳು ಇರಲಿಲ್ಲ. ಇದೀಗ ಕೇಂದ್ರ ಸರ್ಕಾರ ಮಹತ್ದ ಯೋಜನೆ ಅಡಿಯಲ್ಲಿ 50 ಬಸ್​​ಗಳು ಬರುತ್ತಿದೆ.

ತುಮಕೂರು ಜನರಿಗೆ ಗುಡ್​​​ ನ್ಯೂಸ್: ಕೇಂದ್ರದಿಂದ ಬರಲಿವೆ 50 ಹೊಸ ಎಲೆಕ್ಟ್ರಿಕ್ ಬಸ್‌ಗಳು; ಹಳೆ ಬಸ್ ನಿಲ್ದಾಣವೇ ಇನ್ಮುಂದೆ ಇ-ಬಸ್ ಡಿಪೋ
ತುಮಕೂರು ಬಸ್​​ ನಿಲ್ದಾಣ Image Credit source: Tv9 kannada
ಜಗದೀಶ ಬಿ.
| Edited By: |

Updated on: Nov 10, 2026 | 3:51 PM

Share

ತುಮಕೂರು, ನ.10: ತುಮಕೂರು ನಗರದಲ್ಲಿ ಬಸ್‌ಗಳ ಕೊರತೆಯಿಂದ ಪ್ರತಿನಿತ್ಯ ಗಂಟೆಗಟ್ಟಲೆ ಕಾಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಪರದಾಟಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ನಗರದ ಸಾರಿಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಮತ್ತು ಪರಿಸರ ಸ್ನೇಹಿ ಸಂಚಾರ ಕಲ್ಪಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದ್ದು, ಶೀಘ್ರದಲ್ಲೇ 50 ಹೊಸ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿವೆ. ಕೇಂದ್ರ ಸರ್ಕಾರದ ‘ಪಿಎಂ ಇ-ಬಸ್ ಸೇವಾ’ ಯೋಜನೆಯಡಿ ತುಮಕೂರು ನಗರ ಸಾರಿಗೆಗಾಗಿ ಬರೋಬ್ಬರಿ 50 ಇ-ಬಸ್‌ಗಳನ್ನು ಒದಗಿಸುವಂತೆ ಕೆಎಸ್‌ಆರ್‌ಟಿಸಿ ಪ್ರಸ್ತಾವನೆ ಸಲ್ಲಿಸಿದೆ.

ಸದ್ಯ ತುಮಕೂರು ನಗರ ಸಾರಿಗೆಯಲ್ಲಿ ಕೇವಲ 60 ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕೆಂಬ ಸಾರ್ವಜನಿಕ ಬೇಡಿಕೆ ಇತ್ತು. ಸೂಕ್ತ ಸಮಯಕ್ಕೆ ಬಸ್‌ಗಳಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ 50 ಹೊಸ ಇ-ಬಸ್‌ಗಳು ಸೇರ್ಪಡೆಯಾದರೆ ನಗರದ ಸಾರಿಗೆ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.

ಡೀಸೆಲ್ ಬಸ್‌ಗಳಿಂದ ಉಂಟಾಗುವ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದು ಕೆಎಸ್‌ಆರ್‌ಟಿಸಿಯ ಮುಖ್ಯ ಉದ್ದೇಶವಾಗಿದೆ. ನಗರದ ಬಾಳೇಕಟ್ಟೆಯಲ್ಲಿರುವ ಕೆಎಸ್‌ಆರ್‌ಟಿಸಿ ಹಳೆ ಬಸ್ ನಿಲ್ದಾಣ ಕಳೆದ ಎರಡು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದಿತ್ತು. ಇದೀಗ ಈ ನಿರುಪಯುಕ್ತ ಜಾಗವನ್ನು ‘ಇ-ಬಸ್ ಡಿಪೋ’ ಮಾಡಲು ನಿರ್ಧರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ.

ಇದನ್ನೂ ಓದಿ: ಮೆಟ್ರೋ ರೈಲು ಬರುತ್ತಿರುವಾಗಲೇ ಟ್ರ್ಯಾಕ್​ಗೆ ಇಳಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬ

ಇ-ಬಸ್‌ಗಳ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ 11 ಕೆ.ವಿ (11 KV) ವಿದ್ಯುತ್ ಫೀಡರ್ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಬೆಸ್ಕಾಂ ಸಂಸ್ಥೆಯು ಬರೋಬ್ಬರಿ 3,000 ಕೆ.ವಿ.ಎ (KVA) ವಿದ್ಯುತ್ ಪೂರೈಕೆಗೆ ಅಗತ್ಯ ಸಿದ್ಧತೆ ನಡೆಸಿದೆ. ಸದ್ಯ ತುಮಕೂರು ಜಿಲ್ಲೆಯಾದ್ಯಂತ ಒಟ್ಟು 711 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಮೊದಲ ಹಂತದಲ್ಲಿ ನಗರ ಸಾರಿಗೆಗೆ ಮಾತ್ರ ಈ 50 ಇ-ಬಸ್‌ಗಳನ್ನು ಬಳಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ನಗರದ ಸುತ್ತಮುತ್ತಲಿನ ತಾಲೂಕುಗಳಿಗೂ ಇ-ಬಸ್ ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ ಎಂದು ತುಮಕೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ತಿಳಿಸಿದ್ದಾರೆ. ಪ್ರಸ್ತಾವನೆ ಸಲ್ಲಿಕೆಯಾಗಿ ಡಿಪೋ ಕಾಮಗಾರಿ ಆರಂಭವಾಗಿರುವ ಈ 50 ಇ-ಬಸ್‌ಗಳು ಅಧಿಕೃತವಾಗಿ ಯಾವಾಗ ರಸ್ತೆಗಿಳಿಯಲಿವೆ ಎಂಬುದನ್ನು ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ
ಇಂದು ಬಲಿಪಾಡ್ಯಮಿ ಮತ್ತು ಗೋವರ್ಧನ ಪೂಜೆಗೆ ವಿಶೇಷ ಕಾಲ
ಇಂದು ಬಲಿಪಾಡ್ಯಮಿ ಮತ್ತು ಗೋವರ್ಧನ ಪೂಜೆಗೆ ವಿಶೇಷ ಕಾಲ