AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಜೋಳದ ಚಿಗುರು ಸೇವಿಸಿ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಕುರಿಗಳ ಸಾವು!

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆನ್ನೋಬನಹಳ್ಳಿ ಗ್ರಾಮದಲ್ಲಿ ಜೋಳದ ಚಿಗುರು ಸಿಪ್ಪೆ ಸೇವಿಸಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಸೈನೆಡ್ ಅಂಶ ಇರುವ ಚಿಗುರು ವಿಷವಾಗಿ ಪರಿಣಮಿಸಿ ಕುರಿಗಳು ಮೃತಪಟ್ಟಿವೆ ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕುರಿಗಾಹಿಗಳು ಮತ್ತು ರೈತರು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಮನವಿ ಮಾಡಲಾಗಿದೆ.

ತುಮಕೂರು: ಜೋಳದ ಚಿಗುರು ಸೇವಿಸಿ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಕುರಿಗಳ ಸಾವು!
ಜೋಳದ ಚಿಗುರು ಸೇವಿಸಿ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಕುರಿಗಳ ಸಾವು!
ಜಗದೀಶ ಬಿ.
| Edited By: |

Updated on: Jan 03, 2026 | 10:15 AM

Share

ತುಮಕೂರು, ಜನವರಿ 03: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆನ್ನೋಬನಹಳ್ಳಿ ಗ್ರಾಮದಲ್ಲಿ ಜೋಳದ ಚಿಗುರು ಸಿಪ್ಪೆ ಸೇವಿಸಿದ ಪರಿಣಾಮ ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಗ್ರಾಮದ ಜಂಪಕ್ಕ ಎಂಬುವರಿಗೆ ಸೇರಿದ ಸುಮಾರು 200ಕ್ಕೂ ಅಧಿಕ ಕುರಿಗಳ ಹಿಂಡಿನಲ್ಲಿ 50ಕ್ಕೂ ಹೆಚ್ಚು ಕುರಿ ಮರಿಗಳು ಮೃತಪಟ್ಟಿವೆ.

ಲಕ್ಷಾಂತರ ರೂಪಾಯಿ ನಷ್ಟ

ಪ್ರತಿದಿನದಂತೆ ಮೊನ್ನೆ ಕುರಿಗಳನ್ನು ಮೇವಿಗಾಗಿ ಹೊಲದತ್ತ ಕರೆದೊಯ್ಯಲಾಗಿತ್ತು. ಎಂದಿನಂತೆ ಹುಲ್ಲು ಮೇಯುತ್ತಿದ್ದ ಕುರಿಗಳು, ಏಕಾಏಕಿ ಕುಸಿದು ಬೀಳತೊಡಗಿದ್ದು, ಕೆಲವೇ ಕ್ಷಣಗಳಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದರಿಂದ ಕುರಿಗಾಹಿಗೆ ಭಾರೀ ಆಘಾತವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೆಡ್ ಅಂಶ

ವಿಷಯ ತಿಳಿಯುತ್ತಿದ್ದಂತೆ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆಯ ವೇಳೆ ಕುರಿಗಳು ಜೋಳದ ಚಿಗುರು ಸಿಪ್ಪೆಯನ್ನು ಸೇವಿಸಿರುವುದು ಪತ್ತೆಯಾಗಿದೆ. ವೈದ್ಯಾಧಿಕಾರಿ ಅರ್ಕೆರಪ್ಪ ಅವರು, ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೆಡ್ ಅಂಶ ಇರುವುದರಿಂದ ಅದು ವಿಷವಾಗಿ ಪರಿಣಮಿಸಿ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ ಕುರಿಗಳ ಮಾದರಿ ಸ್ಯಾಂಪಲ್‌ಗಳನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದ್ದು, ಅಂತಿಮ ವರದಿ ನಿರೀಕ್ಷಿಸಲಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ರೈತರು ಹಾಗೂ ಕುರಿಗಾಹಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪಶು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?