ಕಾಣಿಕೆ ಹಾಕುವುದಕ್ಕೂ e-Hundi! ಕರ್ನಾಟಕದ ಈ ದೇವಾಲಯದಲ್ಲಿ ಪ್ರಧಾನಿ ಮೋದಿಯ ಡಿಜಿಟಲಿಕರಣ ಚಾಲ್ತಿ

ತುಮಕೂರಿನ ದೇವರಾಯನದುರ್ಗದ ಭೋಗ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ - ಕಾಣಿಕೆ ಹುಂಡಿ ಮಾಡಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಧಾನಿ ಮೋದಿಯ ಡಿಜಿಟಲಿಕರಣವನ್ನು ದೇವಾಲಯ ಮಂಡಳಿ ಚಾಲ್ತಿಗೊಳಿಸಿದೆ.

ಕಾಣಿಕೆ ಹಾಕುವುದಕ್ಕೂ e-Hundi! ಕರ್ನಾಟಕದ ಈ ದೇವಾಲಯದಲ್ಲಿ ಪ್ರಧಾನಿ ಮೋದಿಯ ಡಿಜಿಟಲಿಕರಣ ಚಾಲ್ತಿ
ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ - ಕಾಣಿಕೆ ಹುಂಡಿ ಜಾರಿಯಾಗಿದೆ
Follow us
TV9 Web
| Updated By: sandhya thejappa

Updated on:Jun 07, 2022 | 1:03 PM

ತುಮಕೂರು: ಟೆಕ್ನಾಲಜಿ (Technology) ಬದಲಾದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಾರೆ. ಕೈಯಲ್ಲೇ ಹಣವಿಟ್ಟು ವ್ಯವಹಾರ (Transaction) ನಡೆಸುತ್ತಿದ್ದ ಕಾಲವಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಪ್ರತಿ ವ್ಯವಹಾರಕ್ಕೂ ಗೂಗಲ್ ಪೇ, ಫೋನ್ ಪೇಗೆ ಜನರು ಅವಲಂಬಿತರಾಗಿದ್ದಾರೆ. ಮೊಬೈಲ್​ನಲ್ಲೇ ವ್ಯವಹಾರ ನಡೆಯುತ್ತಿರುವ ಕಾರಣ ದೇವಸ್ಥಾನಕ್ಕೆ ಬರುವವರು ಕಾಣಿಕೆ ತಂದಿರಲ್ಲ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲೀಕರಣವನ್ನು ಜಾರಿಗೊಳಿಸಿದ್ದರು. ಸದ್ಯ ಮೋದಿಯ ಈ ಕ್ಯಾಶ್​ಲೆಸ್​ನ ಕನಸನ್ನು ತುಮಕೂರಿನ ದೇವಾಲಯ ಮಂಡಳಿ ನನಸು ಮಾಡಿದೆ.

ತುಮಕೂರಿನ ದೇವರಾಯನದುರ್ಗದ ಭೋಗ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ – ಕಾಣಿಕೆ ಹುಂಡಿ ಮಾಡಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಧಾನಿ ಮೋದಿಯ ಡಿಜಿಟಲಿಕರಣವನ್ನು ದೇವಾಲಯ ಮಂಡಳಿ ಚಾಲ್ತಿಗೊಳಿಸಿದೆ.

ಕಾಣಿಕೆಯ ಹುಂಡಿಯ ಜೊತೆಗೆ ದೇವಾಲಯದಲ್ಲಿ ಇ – ಸ್ಕ್ಯಾನಿಂಗ್, ಸ್ವೈಪಿಂಗ್ ಸೇರಿ ಇತರೆ ಸೌಲಭ್ಯ ಲಭ್ಯವಿದೆ. ಇನ್ನು ಭಕ್ತರು ಫೋನ್ ಪೇ, ಯುಪಿಐ ಇತರೆ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡಬಹುದು. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ ಸುನೀಲ್ ಕುಮಾರ್ ಮಾತನಾಡಿ, ಬೆಂಗಳೂರು, ಮೈಸೂರು ಸೇರಿ ಇತರೆ ಕಡೆಗಳಿಂದ ಬರುವವರು ಹಣ ತರುವುದಕ್ಕೆ ಆಗಲ್ಲ. ಅಂತಹವರ ಅನುಕೂಲಕ್ಕಾಗಿ ಈ ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗಿದೆ ಇನ್ನು ಮುಂದೆ ದೇವಾಲಯದಲ್ಲಿ ಹುಂಡಿಗಳಿಗೆ ಹಾಕಲು ಭಕ್ತರು ಚಿಲ್ಲರೆಗಾಗಿ ಪರದಾಡುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ
Image
ಫಿಲ್ಮ್​ ಚೇಂಬರ್​ ನೂತನ ಅಧ್ಯಕ್ಷ ಭಾಮಾ ಹರೀಶ್​ಗೆ ಪೊರಕೆ, ಫಿನಾಯಿಲ್​ ಗಿಫ್ಟ್​​! ಕಾರಣವೇನು?
Image
ಪ್ಯಾರಸಿಟಮಾಲ್ ಸೇರಿದಂತೆ 16 ಔಷಧಗಳನ್ನು ನೇರವಾಗಿ ಕೌಂಟರ್​​ನಲ್ಲಿ ಮಾರಲು ಸರ್ಕಾರ ನಿರ್ಧಾರ
Image
ಬೆಳ್ಳಂಬೆಳಗ್ಗೆ ಮುಳುಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿಯ ಭೀಕರ ಹತ್ಯೆ
Image
ಸಿಎಂ ಭೇಟಿ ಮಾಡಿ ಪಠ್ಯ ಪರಿಷ್ಕರಣೆ ಸಂಬಂಧ 2 ನಿರ್ಧಾರ ಕೈಗೊಂಡಿದ್ದೇವೆ; ನಮ್ಮ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಜನರ ಮುಂದಿಡುತ್ತೇವೆ -ಸಚಿವ ಬಿ.ಸಿ. ನಾಗೇಶ್

ಇದನ್ನೂ ಓದಿ: ಫಿಲ್ಮ್​ ಚೇಂಬರ್​ ನೂತನ ಅಧ್ಯಕ್ಷ ಭಾಮಾ ಹರೀಶ್​ಗೆ ಪೊರಕೆ, ಫಿನಾಯಿಲ್​ ಗಿಫ್ಟ್​​! ಕಾರಣವೇನು?

ಸ್ಫಟಿಕಲಿಂಗ ಕಳ್ಳತನ: ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ಸ್ಫಟಿಕಲಿಂಗವನ್ನು ಕಳ್ಳತನ ಮಾಡಿದ್ದಾರೆ. 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದ ಸ್ಫಟಿಕ‌ಲಿಂಗ ಕಳ್ಳತನವಾಗಿದೆ. ದಕ್ಷಿಣ ಭಾರತದಲ್ಲೇ‌ ಇದುಅತ್ಯಂತ ದೊಡ್ಡ ಸ್ಫಟಿಕಲಿಂಗವಾಗಿದೆ. ನಿನ್ನೆ ರಾತ್ರಿ ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲದ ವೇಳೆ ಕಳ್ಳತನ ಆಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Tue, 7 June 22

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ