ಸೌದಿಗೆ ಹಾರಿದ ಪತ್ನಿಯ ಅಸಲಿ ಕಹಾನಿ ಬಯಲು: ಮಕ್ಕಳ ಅಳುವಿಗೂ ಕರಗದ ತಾಯಿ ಹೃದಯ, ಮೋಜು ಮಸ್ತಿ ಮಾಡುತ್ತ ವಿಡಿಯೋ ಕಾಲ್ ಮಾಡುತ್ತಿದ್ದಳು!

ತುಮಕೂರಿನಲ್ಲಿ ಪೇಯಿಂಟ್ ಕೆಲಸ ಮಾಡಿಕೊಂಡಿದ್ದ ಸಮಿವುಲ್ಲಾಗೂ ಸಾಹೇರಾ ಬಾನುಗೆ ಮದುವೆಯಾಗಿ 14 ವರ್ಷ ತುಂಬಿದೆ. ದಂಪತಿಗೆ ಮೂವರು ಮುದ್ದಾದ ಮಕ್ಕಳಿದ್ದಾರೆ. ಆದರೆ ಅದ್ಯಾಗೆ ಈಕೆಗೆ ದುಡಿಯುವ ಮನಸ್ಸಾಯ್ತೋ ಸೌದಿಗೆ ತನ್ನ ಅಕ್ಕನ ಜೊತೆ ಹಾರಿದ್ದಾಳೆ

ಸೌದಿಗೆ ಹಾರಿದ ಪತ್ನಿಯ ಅಸಲಿ ಕಹಾನಿ ಬಯಲು: ಮಕ್ಕಳ ಅಳುವಿಗೂ ಕರಗದ ತಾಯಿ ಹೃದಯ, ಮೋಜು ಮಸ್ತಿ ಮಾಡುತ್ತ ವಿಡಿಯೋ ಕಾಲ್ ಮಾಡುತ್ತಿದ್ದಳು!
ಸೌದಿಗೆ ಹಾರಿದ ಪತ್ನಿಯ ಅಸಲಿ ಕಹಾನಿ ಬಯಲು: ಮಕ್ಕಳ ಅಳುವಿಗೂ ಕರಗದ ತಾಯಿ ಹೃದಯ, ಮೋಜು ಮಸ್ತಿ ಮಾಡುತ್ತ ವಿಡಿಯೋ ಕಾಲ್ ಮಾಡುತ್ತಿದ್ದಳು!
Follow us
TV9 Web
| Updated By: ಆಯೇಷಾ ಬಾನು

Updated on:Aug 18, 2022 | 8:04 PM

ತುಮಕೂರು: ಗಂಡ, ಮೂರು ಮಕ್ಕಳನ್ನು ಬಿಟ್ಟು ಸೌದಿಗೆ ಹೋಗಿದ್ದ ಮಹಿಳೆಯ ಅಸಲಿ ಕಹಾನಿ ಬಯಲಾಗಿದೆ. ಸಾಹೇರಾ ಬಾನು ದುಡಿಮೆಗೆ ಅಂತಾ ಮಕ್ಕಳು, ಪತಿ ಎಲ್ಲರನ್ನೂ ಬಿಟ್ಟು ಸೌದಿಗೆ ಹೋಗಿ ಸೆಟಲ್ ಆಗಿದ್ದಾಳೆ. ಆದ್ರೆ ಪತ್ನಿ ವಾಪಸ್ ಬರಲು ನಿರಾಕರಿಸಿದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗೂ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ಪೇಯಿಂಟ್ ಕೆಲಸ ಮಾಡಿಕೊಂಡಿದ್ದ ಸಮಿವುಲ್ಲಾಗೂ ಸಾಹೇರಾ ಬಾನುಗೆ ಮದುವೆಯಾಗಿ 14 ವರ್ಷ ತುಂಬಿದೆ. ದಂಪತಿಗೆ ಮೂವರು ಮುದ್ದಾದ ಮಕ್ಕಳಿದ್ದಾರೆ. ಆದರೆ ಅದ್ಯಾಗೆ ಈಕೆಗೆ ದುಡಿಯುವ ಮನಸ್ಸಾಯ್ತೋ ಸೌದಿಗೆ ತನ್ನ ಅಕ್ಕನ ಜೊತೆ ಹಾರಿದ್ದಾಳೆ. ತನ್ನ ಅಕ್ಕ ಸಲ್ಮಾ ಭಾನು ಜೊತೆಗೆ ದುಡಿಮೆಗಾಗಿ ಸೌದಿಗೆ ಹೋಗಿದ್ದಾಳೆ. ಅದರಂತೆ ತನ್ನ ಕುಟುಂಬಕ್ಕೆ ತಿಂಗಳಿಗೊಮ್ಮೆ ಹತ್ತು ಸಾವಿರ ಹಣವೂ ಕಳಿಸುತ್ತಿದ್ದಳಂತೆ. ಆದ್ರೆ ಬಳಿಕ ಹಣ ಕಳಿಸದನ್ನ ನಿಲ್ಲಿಸಿದ್ದಾಳೆ. ದುಡಿಮೆಗೆಂದು ಹೋದ ಸಾಹೇರಾ ಬಾನು ಹುಕ್ಕಾ ಬಾರ್ ಡ್ಯಾನ್ಸ್ ಅಂತಾ ಮೋಜು ಮಸ್ತಿಗೆ ಇಳಿದಿದ್ದಾಳಂತೆ. ಈ ಬಗ್ಗೆ ಅಲ್ಲಿಂದಲೇ ತನ್ನ ಪತಿ ಸಮಿವುಲ್ಲಾಗೆ ವಿಡಿಯೋ ಕಾಲ್ ಮಾಡಿ ತೋರಿಸುತ್ತಿದ್ದಳಂತೆ. ನಾನು ವಾಪಸ್ ಬರಲ್ಲ ಇಲ್ಲೇ ಇರ್ತಿನಿ. ಇಲ್ಲೆ ಚೆನ್ನಾಗಿದೆ ಅಂತಾ ಹೇಳಿ ಪತಿಗೆ ರೇಗಿಸುತ್ತಿದ್ದಳು ಎನ್ನಲಾಗಿದೆ.

ಇನ್ನೂ ಯಾವಾಗ ಸಾಹೇರಾ ಬಾನು ತನ್ನ ಮೋಜು ಮಸ್ತಿಯಲ್ಲಿ ಬಿದ್ದು ಸೌದಿಯಲ್ಲಿ ಸೆಟ್ಲ್ ಆದ್ಲು ಇತ್ತ ಸಮೀವುಲ್ಲಾ ಕುಟುಂಬ ನಲುಗಿದೆ. ತನ್ನ ಮೂವರು ಮಕ್ಕಳೊಂದಿಗೆ ಸಮೀವುಲ್ಲಾ ಪಡಬಾರದ ಕಷ್ಟ ಪಟ್ಟಿದ್ದಾನೆ. ತಾನೇ ದುಡಿದು ಮಕ್ಕಳನ್ನ ನೋಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರತಿದಿನ ಕೂಡ ಸಮೀವುಲ್ಲಾ ಪತ್ನಿಗೆ ವಿಡಿಯೋ ಕಾಲ್ ಮಾಡಿದಾಗ ವಾಪಸ್ ತುಮಕೂರಿಗೆ ಬಂದು ಬಿಡು ಅಂತಾ ಗೋಗರೆದಿದ್ದಾನೆ. ಸಾಲದಕ್ಕೆ ಮಕ್ಕಳು ಕೂಡ ತಾಯಿಗೆ ಬಾ ಅಮ್ಮ ಅಂತಾ ಕರೆದಿದ್ದಾರೆ. ಆದ್ರೂ ಸಾಹೇರ ಬಾನು ಮನಸ್ಸು ಕರಗಿಲ್ಲ. ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ತುಮಕೂರಿನ ಪುರೋಸ್ ಕಾಲೋನಿಯಲ್ಲಿ ವಾಸವಿದ್ದರು. ಪತ್ನಿ ಸೌದಿಯಲ್ಲಿ ಸೆಟ್ಲಾದ ಕಾರಣಕ್ಕೆ ಕಳೆದ ಆಗಸ್ಟ್ 13 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಮಕ್ಕಳ ಸಮೇತ ಸಮೀವುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದು ತುಮಕೂರಿನ ಜಿಲ್ಲಾಸ್ಪತ್ರೆಗೆ ಸಂಬಂಧಿಕರು ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 15 ಕ್ಕೆ ಸಮೀವುಲ್ಲಾ ಸಾವನ್ನಪ್ಪಿದ್ದು ಸದ್ಯ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.

ಒಟ್ಟಾರೆ ದುಡಿಮೆಗೆಂದು ಹೋಗಿ ಸಾಹೇರಾ ಬಾನು ಆಡಬಾರದ ಆಟ ಆಡಿದ್ದಾಳೆ ಇತ್ತ ಮಕ್ಕಳು ಪತಿ ವಾಪಸ್ ಬಾ ಅಂತಾ ಗೋಗರೆದರೂ ತಮ್ಮ ಜೊತೆ ಮಾತನಾಡು ಅಂತಾ ಹೇಳಿದ್ರೂ ಕರುಳು ಹಿಂಡಿಲ್ಲ. ಪಾಪ ತಮ್ಮ ಅಮ್ಮ ಮಾಡಿದ ತಪ್ಪಿಗೆ ಮಕ್ಕಳು ಹಾಗೂ ತಂದೆ ವಿಷ ಸೇವಿಸಿದ್ದಾರೆ. ಸದ್ಯ ತಂದೆ ಸಾವನ್ನಪ್ಪಿದ್ದು ಮಕ್ಕಳು ಸ್ಥಿತಿ ಚಿಂತಾಜನಕವಾಗಿದೆ.

ವರದಿ: ಮಹೇಶ್, ಟಿವಿ9 ತುಮಕೂರು

Published On - 8:04 pm, Thu, 18 August 22