TV9 Kannada News highlights ವಿಶೇಷ ಸಂಪುಟ ಸಭೆ: ಮಂಗಳೂರಿಗೆ ಬಂದಿಳಿದ ಡಿಕೆ ಶಿವಕುಮಾರ್ ಆ್ಯಂಡ್ ಟೀಂ
Karnataka News Today Live Updates: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಬೃಹತ್ ಬೈಕ್ ಯಾತ್ರೆ, ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲೇ ನಂದಿನಿ ಹಾಲು ಹಾಗೂ ಭಟ್ಕಳದಲ್ಲಿ ಮೆರವಣಿಗೆ ವೇಳೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಎಲ್ಲಾ ಪ್ರಮುಖ ಸುದ್ದಿಗಳು, ಕ್ಷಣಕ್ಷಣದ ಬ್ರೇಕಿಂಗ್ ಅಪ್‌ಡೇಟ್‌ಗಳು ಇಲ್ಲಿವೆ.

Breaking News Today Live Updates in Kannada: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಕಾಶಿಯಿಂದ ವಡ್ನಗರದವರೆಗೆ 500 ಬೈಕರ್‌ಗಳ ಬೃಹತ್ ‘ಸೇವಾ ಸಂಕಲ್ಪ’ ಯಾತ್ರೆಗೆ ಚಾಲನೆ ನೀಡಲಾಗಿದೆ. ಮತ್ತೊಂದೆಡೆ, ಬೆಂಗಳೂರಿನ 79 ಇಂದಿರಾ ಕ್ಯಾಂಟೀನ್ ಆವರಣಗಳಲ್ಲಿ ನಂದಿನಿ ಹಾಲಿನ ಮಳಿಗೆಗಳನ್ನು ಸ್ಥಾಪಿಸಲು ಜಿಬಿಎ ಪ್ರಸ್ತಾವನೆ ಸಲ್ಲಿಸಿದ್ದು, ಬಮುಲ್‌ಗೆ ಜಾಗ ಗುತ್ತಿಗೆ ನೀಡಲು ಮುಂದಾಗಿದೆ. ಇದೇ ವೇಳೆ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪ ಕೇಳಿಬಂದಿದ್ದು, ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಬಿಜೆಪಿ ಕಚೇರಿಯಲ್ಲಿ ‘ಆಶೀರ್ವಾದದ ದೀಪ’ ಕಾರ್ಯಕ್ರಮ
ಪ್ರಧಾನಿ ಮೋದಿ ಹುಟ್ಟು ಹಬ್ಬ ಹಾಗೂ ರಾಜಕೀಯದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದಿನಿಂದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ ಶುರುವಾಗಿದ್ದು. ಬೆಂಗಳೂರಿನ ಜಗನ್ನಾಥ ಭವನದಲ್ಲಿ‘ಆಶೀರ್ವಾದದ ದೀಪ’ ಕಾರ್ಯಕ್ರಮ ನಡೆಯಿತು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಹಾಗೂ ಬಿಜೆಪಿ ಕಾರ್ಯಕರ್ತರು, ಕಚೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
-
ಮಂಗಳೂರಿಗೆ ಬಂದಿಳಿದ ಡಿಕೆಶಿ
ನಾಳೆ ವಿಶೇಷ ಸಂಪುಟ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಲಬುರಗಿಯಿಂದ ನೇರವಾಗಿ ಮಂಗಳೂರಿಗೆ ಬಂದಿಳಿದಿದ್ದಾರೆ. ಡಿಕೆ ಶಿವಕುಮಾರ್ ಜತೆ ಡಿಸಿಎಂ ಪರಮೇಶ್ವರ್, ಸಚಿವರಾದ ಪ್ರಿಯಾಂಕ್, ಶರಣಪ್ರಕಾಶ್ ಪಾಟೀಲ್ ಸಹ ಬಂದಿಳಿದಿದ್ದಾರೆ.
-
-
ಆಶೀರ್ವಾದದ ದೀಪ ಬೆಳಗಿದ ಬಿಎಸ್ವೈ
ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ಹಾಗೂ ರಾಜಕೀಯದಲ್ಲಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ. ಹೀಗಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಆಶೀರ್ವಾದದ ದೀಪ ಬೆಳಗಿದರು.
-
ಪ್ರಧಾನಿ ಮೋದಿ ಹುಟ್ಟುಹಬ್ಬ ಹಿನ್ನೆಲೆ ಸೋಮಣ್ಣ ವಿಶೇಷ ಪೂಜೆ
ಪ್ರಧಾನಿ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಅವರು ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.ತುಮಕೂರಿನ ಭದ್ರಮ್ಮ ಸರ್ಕಲ್ ಬಳಿಯ ಸೋಮೇಕಟ್ಟೆಯಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಗೆ ಪೂಜೆ ನೆರವೇರಿಸಿದರು.
-
ಸಚಿವ ಸಂಪುಟ ಸಭೆ ಸಿದ್ದತೆ ಪರಿಶೀಲನೆ ವೇಳೆ ಖಾದರ್ ಗರಂ
ನಾಳೆ (ಸೆ.18) ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಂಪುಟ ಸಭೆಯ ಅಂತಿಮ ಹಂತದ ಸಿದ್ಧತೆಯನ್ನು ಸಚಿವ ಯುಟಿ ಖಾದರ್ ಪರಿಶೀಲಿಸಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಂಪುಟ ಸಭೆ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಂತಿಮ ಸಿದ್ಧತೆಯನ್ನು ಸಚಿವ ಯುಟಿ ಖಾದರ್ ಪರಿಶೀಲಿಸಿದರು. ಆದ್ರೆ, ಈ ವೇಳೆ ಅಧಿಕಾರಿಗಳಿಗೆ ಹ್ಯಾಂಡ್ ರೆಸ್ಟ್ ಇಲ್ಲದ ಚೇರ್ ಹಾಕಿರುವುದಕ್ಕೆ ಸಚಿವರು ಗರಂ ಆಗಿದ್ದಾರೆ. ಎಷ್ಟೋತ್ತು ಅಂತಾ ಹ್ಯಾಂಡ್ ರೆಸ್ಟ್ ಇಲ್ಲದ ಚೇರ್ ನಲ್ಲಿ ಕುಳಿತುಕೊಳ್ಳಲು ಸಾದ್ಯ? ಮೀಟಿಂಗ್ ಹಾಲ್ ಅರೇಂಜ್ ಮಾಡುವವರ ವಿರುದ್ಧ ಗರಂ ಆಗಿದ್ದು, ಕೂಡಲೇ ಬೇರೆ ಚೇರ್ ಅರೇಂಜ್ ಮಾಡಿ ಎಂದಯ ತಾಕೀತು ಮಾಡಿದ್ದಾರೆ.ಇದಕ್ಕೆ ವೆಂಡರ್ ಪ್ರತಿಕ್ರಿಯಿಸಿ ಬೆಂಗಳೂರಿನಲ್ಲಿ ಇದನ್ನೆ ಹಾಕುತ್ತೇವೆ. ಈಗ ಬೆಂಗಳೂರಿಂದ ತರಿಸಲು ಆಗಲ್ಲ ಎಂದಿದ್ದಾರೆ. ಇದಕ್ಕೆ ಮತ್ತಷ್ಟು ಸಿಡಿಮಿಡಿಗೊಂಡ ಖಾದರ್, ಆಗಲ್ಲ ಅನ್ನೊದನ್ನ ಬಿಟ್ಟು, ಹೇಳಿದಷ್ಟು ಮಾಡಿ ಎಂದು ತರಾಟೆ ತೆಗೆದುಕೊಂಡರು. ಹೀಗಾಗಿ ಅಧಿಕಾರಿಗಳ ಚೇರ್ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.
-
-
ಸೆ.17,18ರ ಸಿಎಂ ಕಾರ್ಯಕ್ರಮದ ವೇಳಾಪಟ್ಟಿ
ಸೆ.17 ಗುರುವಾರ ಸಂಜೆ 5.30 ಕ್ಕೆ ಸಿಎಂ ಡಿಕೆ ಶಿವಕುಮಾರ್ ಮಂಗಳೂರು ಆಗಮಿಸಲಿದ್ದು, ಮಂಗಳೂರಿನ ಖಾಸಗಿ ತಾಜ್ ವಿವಾಂತ ಹೊಟೇಲ್ ನಲ್ಲಿ ಡಿಕೆಶಿ ವಾಸ್ತವ್ಯ ಹೂಡಲಿದ್ದಾರೆ. ಸೆ.18 ಶುಕ್ರವಾರ ಬೆಳಗ್ಗೆ 10 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಂಪುಟ ಸಭೆ ನಡೆಯಲಿದೆ. ಸೆ.18 ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆ ಕಾರ್ಕಳದ ಹೆಬ್ರಿಗೆ ಪ್ರಯಾಣಿಸಲಿದ್ದು, ಕಸ್ತೂರಿ ರಂಗನ್ ವರದಿಯ ಬಾಧಿತರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸೆ.18 ರ ಸಂಜೆ 5.30 ಕ್ಕೆ ಮತ್ತೆ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಸೆ.19 ರ ಬೆಳಗ್ಗೆ 9.30 ಕ್ಕೆ ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
-
ಸಚಿವ ಸಂಪುಟಕ್ಕೂ ಮುನ್ನ ಡಿನ್ನರ್ ಸಭೆ ಕರೆದ ಸಿಎಂ
ಇದೇ ಮೊದಲ ಬಾರಿಗೆ ನಾಳೆ (ಸೆ.18) ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಮಂಗಳೂರಿನ ಐತಿಹಾಸಿಕ ಸಂಪುಟ ಸಭೆಗೂ ಮುನ್ನ ಡಿನ್ನರ್ ಮೀಟಿಂಗ್ ನಡೆಯಲಿದೆ. ಇಂದು (ಸೆ.17) ರಾತ್ರಿಯೇಕಡಲ ಕಿನಾರೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಆಯೋಜಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಶಾಸಕರು, ಸಂಸದರಿಗೆ ಈ ಡಿನ್ನರ್ ಸಭೆಗೆ ಆಹ್ವಾನ ನೀಡಿದ್ದಾರೆ.
-
ಕಲಬುರಗಿಯಲ್ಲಿ ಕ್ರೀಡಾ ನಗರಿ ಸ್ಥಾಪನೆಗೆ ಚಿಂತನೆ
ಕಲ್ಯಾಣ ಕರ್ನಾಟಕದಲ್ಲಿ ಯಾವುದೇ ಸಂಪನ್ಮೂಲ ಕೊರತೆ ಇಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದೇವೆ. ರೈತರ ಆದಾಯ ಹೆಚ್ಚಿಸಲು ಪಾರಂಪರಿಕ ಬೆಳೆಗೆ ಒತ್ತು ನೀಡುತ್ತೇವೆ. ಉದ್ಯೋಗ ಸೃಷ್ಟಿಗೆ ರಿಯಾಯಿತಿ ದರದಲ್ಲಿ ಭೂಮಿ ನೀಡುತ್ತಿದ್ದೇವೆ. ಗಾಣಗಾಪುರ ಅಭಿವೃದ್ಧಿಗೆ KKRDBಯಿಂದ ಅನುದಾನಕ್ಕೆ ಸೂಚನೆ ನೀಡಲಾಗಿದೆ. ಕಲಬುರಗಿಯಲ್ಲಿ ಕ್ರೀಡಾ ನಗರಿ ಸ್ಥಾಪನೆಗೆ ಚಿಂತನೆ ನಡೆಸಿದ್ದೇವೆ. ಬೀದರ್ ಜಿಲ್ಲೆ ಬಸವಕಲ್ಯಾಣ ಅಭಿವೃದ್ಧಿ ಆಗುತ್ತಿದೆ. ಅರಣ್ಯ ಅಭಿವೃದ್ಧಿಗೆ ವೃಕ್ಷ ಅಭಿಯಾನ ನಡೆಸಲು ನಿರ್ಧರಿಸಿದ್ದೇವೆ. ಹಾಗೇ ಈ ಭಾಗದಲ್ಲಿ ಬಡವರಿಗೆ 50 ಸಾವಿರ ಸೈಟ್ ನೀಡುತ್ತೇವೆ. ಕಲಬುರಗಿ ಪೆರಿಫೆರಲ್ ರಿಂಗ್ ರಸ್ತೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ ಎಂದು ತಿಳಿಸಿದರು.
-
ಕಲಬುರಗಿಯಲ್ಲಿ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿ
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್, ಈ ಭಾಗದ ಅಭಿವೃದಿದ್ದಿಗೆ ನಾವು ಪ್ರತಿವರ್ಷ 5 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ. ಕೈಗಾರಿಕೆ ಬೆಳವಣಿಗೆಗೆ ಹೆಚ್ಚು ಒತ್ತು ಕೊಡೊಕೆ ಗಮನ ಹರಿಸುತ್ತೆವೆ. ಇಲ್ಲಿ ಹೊಸ ಹೊಸ ಉಧ್ಯಮ ಬರಬೇಕು. ಇಲ್ಲಿ ಯಾವುದೇ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಪ್ರವಾಸಧ್ಯೋಮ ಅಭಿವೃದ್ದಿಗೂ ಒತ್ತು ನೀಡೋಕೆ ನಿರ್ಧರಿಸಿದ್ದೆವೆ. ರೈತರಿಗೆ ಆದಾಯ ಹೆಚ್ಚಿಸೋಕೆ ಈ ಭಾಗದ ಪಾರಂಪರಿಕ ಬೆಳೆಗಳಿಗೆ ಒತ್ತು ನೀಡುತ್ತೇವೆ. ರಕ್ತಹೀನತೆ ಪ್ರಮಾಣ ತಡೆಗಟ್ಟೋಕೆ ವಿಶೇಷ ಅಭಿಯಾನ ಮಾಡೋಕೆ ನಿರ್ಧರಿಸಿದ್ದೇವೆ ಎಂದರು.
-
ರೈತರ ಹೋರಾಟಕ್ಕೆ ಮಣಿದ ಸರ್ಕಾರ: ನಾಲೆಗಳಿಗೆ ಭದ್ರಾ ನೀರು ಹರಿಸುವಂತೆ ಆದೇಶ
ಭದ್ರಾ ನೀರಿಗಾಗಿ ಅನ್ನದಾತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ಭದ್ರಾ ನೀರು ನಾಲೆಗಳಿಗೆ ಹರಿಸುವಂತೆ ಆದೇಶ ಹೊರಡಿಸಿದೆ. ಹದಿನೈದು ದಿನಗಳ ಕಾಲ ಅಂದರೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಭದ್ರಾ ಅಚ್ಚುಕಟ್ಟು ಪ್ರದೇಶ ನಾಲೆಗಳಿಗೆ ನೀರು ಹರಿಸಲು ಆದೇಶಿಸಿದೆ. ಮಳೆ ಆಗದ ಹಿನ್ನಲೆ ಜನ ಜಾನುವಾರಗಳಿಗೆ ಕುಡಿಯುವ ನೀರು,ಅಂತರ್ಜಲ ವೃದ್ಧಿಗೆ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ . ಯಾವುದೇ ಬೆಳೆಗಳಿಗೆ ನೀರು ಉಪಯೋಗಿಸುವಂತಿಲ್ಲ . ಅಕ್ರಮ ನೀರೇತ್ತುವಂತಿಲ್ಲ ಎಂಬ ನಿರ್ಬಂಧ ವಿಧಿಸಿ ನೀರು ಬಿಡುಗಡೆಗೆ ಆದೇಶಿಸಲಾಗಿದೆ.
-
ಪ್ರಧಾನಿ ಮೋದಿ ಜನ್ಮದಿನ: ಪಶ್ಚಿಮ ಬಂಗಾಳದಲ್ಲಿ ‘ಅನ್ನಪೂರ್ಣ ದಿನ’ ಆಚರಣೆ!
ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಪಶ್ಚಿಮ ಬಂಗಾಳ ಸರ್ಕಾರ ಸೆಪ್ಟೆಂಬರ್ 17ನ್ನು ‘ಅನ್ನಪೂರ್ಣ ದಿನ’ವಾಗಿ ಆಚರಿಸುತ್ತಿದ್ದು, ಅನ್ನಪೂರ್ಣ ಯೋಜನೆಯಡಿ ಸುಮಾರು 1.5 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 3,000 ರೂ. ನೇರ ವರ್ಗಾವಣೆ ಮಾಡಿದೆ. ವಿಡಿಯೋ ಸಂದೇಶದ ಮೂಲಕ ಭಾಗಿವಾದ ಮೋದಿ ಬಂಗಾಳದ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸಿದರು.
-
ಉಮರ್ ಖಾಲಿದ್ ಬಗೆಗಿನ ಹೇಳಿಕೆ ಸಮರ್ಥಿಸಿಕೊಂಡ ಹರಿಪ್ರಸಾದ್
ಉಮರ್ ಖಾಲಿದ್ ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಶಾಖೆಗಳಲ್ಲಿ ಖಾಕಿ ಚಡ್ಡಿ ಮತ್ತು ಕರಿ ಟೋಪಿ ಧರಿಸಿ ರಾಷ್ಟ್ರಗೀತೆ ಹಾಡದವರೇ ನಿಜವಾದ ದೇಶದ್ರೋಹಿಗಳು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಮರ್ ಖಾಲಿದ್ ಬಂಧನವನ್ನು ಅನೈತಿಕ ಎಂದು ಅವರು ಖಂಡಿಸಿದ್ದಾರೆ.
-
ಯುವ ಕಾಂಗ್ರೆಸ್ ಮುತ್ತಿಗೆ ಭೀತಿ: ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್!
ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್‌ಗಳ ಮೂಲಕ ಬಂದ್ ಮಾಡಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
-
ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಇ-ಕೆವೈಸಿ ಅವಧಿ ಅಕ್ಟೋಬರ್ 20ರವರೆಗೆ ವಿಸ್ತರಣೆ!
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಕಾಲಾವಕಾಶ ವಿಸ್ತರಿಸಿದೆ. ಬಡವರು ಮತ್ತು ದಿನಗೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಅಕ್ಟೋಬರ್ 1ರಿಂದ ಜಾರಿಯಾಗುವಂತೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿಯನ್ನು ಬೆಳಿಗ್ಗೆ 7ರಿಂದ 12 ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಪರಿಷ್ಕರಿಸಲಾಗಿದೆ.
-
ರಾಜ್ಯದಲ್ಲಿ ಹೆಚ್ಚುವರಿ 53 ತಾಲೂಕುಗಳಲ್ಲಿ ಬರ ಘೋಷಣೆಗೆ ಸಿದ್ಧತೆ
ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಹೆಚ್ಚುವರಿಯಾಗಿ 17 ಜಿಲ್ಲೆಗಳ 53 ತಾಲೂಕುಗಳಲ್ಲಿ ಗ್ರೌಂಡ್ ಟ್ರುಥಿಂಗ್ ಸ್ಥಳ ಪರಿಶೀಲನೆಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಸೆಪ್ಟೆಂಬರ್ 19ರಿಂದ 20ರವರೆಗೆ ಬೆಳೆ ಹಾನಿ ಸಮೀಕ್ಷೆ ನಡೆಯಲಿದೆ.
-
ಪ್ರಧಾನಿ ಮೋದಿ ಹುಟ್ಟುಹಬ್ಬ: ದೆಹಲಿಯಲ್ಲಿ ಪೂರ್ಣ ನವಗ್ರಹ ಯಾಗ!
ಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ದೆಹಲಿಯ ವೇದವ್ಯಾಸ ಗುರುಕುಲದಲ್ಲಿ ಪೇಜಾವರ ಶ್ರೀಗಳ ನಿರ್ದೇಶನದಂತೆ ಪೂರ್ಣ ನವಗ್ರಹ ಯಾಗ ನೆರವೇರಿತು. ಮೋದಿಯವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಶತ್ರುಭಯ ನಿವಾರಣೆ ಹಾಗೂ ರಾಷ್ಟ್ರದ ಸುಖ-ಶಾಂತಿಗಾಗಿ ಪ್ರಾರ್ಥಿಸಿ ಈ ವಿಶೇಷ ಯಾಗ ನಡೆಸಲಾಯಿತು.
-
ಸೆಮಿಕಾನ್ ಇಂಡಿಯಾ 2026: ಯುವ ನಾವೀನ್ಯಕಾರರೊಂದಿಗೆ ಪ್ರಧಾನಿ ಮೋದಿ ಸಂವಾದ!
ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರದರ್ಶನವನ್ನು ವೀಕ್ಷಿಸಿದರು. ಈ ವೇಳೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಲ್ಲಿ ತೊಡಗಿರುವ ಯುವ ನಾವೀನ್ಯಕಾರರೊಂದಿಗೆ ಸಂವಾದ ನಡೆಸಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
-
ರಾಜ್ಯದ 101 ಪೆಟ್ರೋಲ್ ಬಂಕ್‌ಗಳ ವಿರುದ್ಧ ಕೇಸ್!
ರಾಜ್ಯದ 805 ಪೆಟ್ರೋಲ್ ಬಂಕ್‌ಗಳಲ್ಲಿ ಆಹಾರ ಇಲಾಖೆ ತಪಾಸಣೆ ನಡೆಸಿದ್ದು, ಇಂಧನ ಅಳತೆಯಲ್ಲಿ ಮೋಸವೆಸಗಿದ 101 ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದೆ. ಅಳತೆ ವ್ಯತ್ಯಾಸ ಕಂಡುಬಂದಲ್ಲಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1800599100 ಗೆ ಕರೆ ಮಾಡಿ ದೂರು ನೀಡಬಹುದು.
-
ಪ್ರಧಾನಿ ಮೋದಿ ಹುಟ್ಟುಹಬ್ಬ: ಘಾಟಿ ಸುಬ್ರಹ್ಮಣ್ಯದಲ್ಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ವಿಶೇಷ ಪೂಜೆ!
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ದೇವಾಲಯದಲ್ಲಿ ಪ್ರಧಾನಿಯವರ ಹೆಸರಿನಲ್ಲಿ ವಿಶೇಷ ಅರ್ಚನೆ ನಡೆಸಿದರು. ಪೂಜೆಯ ನಂತರ ಪ್ರಧಾನಿ ಮೋದಿ ಅವರಿಗೆ ಸುದೀರ್ಘ ಆಯುಷ್ಯ ಮತ್ತು ಉತ್ತಮ ಆರೋಗ್ಯ ನೀಡುವಂತೆ ಪ್ರಾರ್ಥಿಸಿ ದೇಗುಲದ ಮುಂಭಾಗದಲ್ಲಿ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಲಾಯಿತು.
-
ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕರ್ನಾಟಕಕ್ಕೆ ಹೆಮ್ಮೆ; ಶಿವರಾಜ್ ತಂಗಡಗಿ
ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವ ವಿಷಯ ಎಂದು ಸಚಿವ ಶಿವರಾಜ್ ತಂಗಡಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಅವರು, ಮೋದಿ ಅವರಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸಿದರು.
-
ಕಸ್ತೂರಿ ರಂಗನ್ ವರದಿ: ನಾಳೆ ಹೆಬ್ರಿಯಲ್ಲಿ ಸಿಎಂ ಡಿಕೆಶಿ ಮಹತ್ವದ ಸಭೆ
ಕಸ್ತೂರಿ ರಂಗನ್ ವರದಿ ಕುರಿತು ಪಶ್ಚಿಮ ಘಟ್ಟ ತಪ್ಪಲಿನ ಜನರ ಸಮಸ್ಯೆ ಆಲಿಸಲು ಸಿಎಂ ಡಿಕೆಶಿ ನಾಳೆ ಮಧ್ಯಾಹ್ನ 2:30ಕ್ಕೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಡಿಸಿಎಂ ಪರಮೇಶ್ವರ್, ಸಚಿವರಾದ ರಿಜ್ವಾನ್ ಅರ್ಷದ್, ರಾಮಲಿಂಗಾರೆಡ್ಡಿ ಪಾಲ್ಗೊಳ್ಳಲಿದ್ದಾರೆ.
-
ಪ್ರಧಾನಿ ಮೋದಿ 76ನೇ ಜನ್ಮದಿನ: ‘ಆಶೀರ್ವಾದ್ ಕಾ ದಿಯಾ’ ವಿಶೇಷ ವಿಡಿಯೋ ಸಾಂಗ್ ಬಿಡುಗಡೆ!
ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಸಂಗೀತ ಸಂಯೋಜಕ ಅಮನ್ ಪಂತ್ ‘ಆಶೀರ್ವಾದ್ ಕಾ ದಿಯಾ’ ಎಂಬ ವಿಶೇಷ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದಾರೆ.
Some gestures remain very special! #AshirwadKaDiya is one such expression of affection that has deeply touched me.
Every blessing strengthens my resolve to serve our beloved Bharat with even greater devotion. https://t.co/YPgIUibiMW
— Narendra Modi (@narendramodi) September 17, 2026
-
ಪ್ರಧಾನಿ ಮೋದಿ ಜನ್ಮದಿನ: ಬೆಳಗಾವಿಯಲ್ಲಿ ಬಸ್ ನಿಲ್ದಾಣ ಉದ್ಘಾಟನೆ
ಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ನೂತನ ಬಸ್ ನಿಲ್ದಾಣವನ್ನು ಸಂಸದ ಜಗದೀಶ್ ಶೆಟ್ಟರ್ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು. ಬಳಿಕ ಗಣಪತಿ ದೇವಸ್ಥಾನದಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
-
ಸಿದ್ದರಾಮಯ್ಯ ಮೂರ್ತಿ ತೆರವು
ಕಲಬುರಗಿಯ ಹೈಕೋರ್ಟ್ ವೃತ್ತದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ರಾತ್ರೋರಾತ್ರಿ ಅನುಮತಿಯಿಲ್ಲದೆ ಪ್ರತಿಷ್ಠಾಪಿಸಿದ್ದ 9 ಅಡಿ ಎತ್ತರದ ಮೂರ್ತಿಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದ್ದಾರೆ. ವೀಡಿಯೋ ನೋಡಿ
-
ತಳವಾರ ಸಮುದಾಯ ಎಸ್‌ಟಿಗೆ ಸೇರಿಸಲು ಆಗ್ರಹ: ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದವರು ವಶಕ್ಕೆ!
ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಫಜಲಪುರ ತಾಲೂಕಿನ ಚವಡಾಪುರ ಗ್ರಾಮದ ಬಳಿ ಪ್ರತಿಭಟನೆಗೆ ಸಜ್ಜಾಗಿದ್ದ ತಳವಾರ ಸಮುದಾಯದ ಮುಖಂಡ ಶಿವಕುಮಾರ್ ಸೇರಿದಂತೆ ಹಲವು ಹೋರಾಟಗಾರರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
-
ರಷ್ಯಾ ತೈಲ ಖರೀದಿಸುವ ಭಾರತ-ಚೀನಾಗೆ ಶೇ 100 ಸುಂಕ
ರಷ್ಯಾ ವಿರುದ್ಧ ಅಮೆರಿಕ ಕಾಂಗ್ರೆಸ್ ಕಠಿಣ ಮಸೂದೆ ಅಂಗೀಕರಿಸಿದೆ. ರಷ್ಯಾದಿಂದ ತೈಲ ಅಥವಾ ಅನಿಲ ಖರೀದಿಸುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಶೇಕಡಾ 100ರಷ್ಟು ಭಾರಿ ಸುಂಕ ವಿಧಿಸಲು ಪ್ರಸ್ತಾವಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಬಿದ್ದ ಬಳಿಕ ಈ ಕಾಯ್ದೆ ಜಾರಿಗೆ ಬರಲಿದೆ.
-
ತೆಲಂಗಾಣದಲ್ಲಿ ಗಣೇಶ ವಿಸರ್ಜನೆ ವೇಳೆ ದುರಂತ: ಕೆರೆಯಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು!
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪೆದ್ದ ಕಂಜೆರ್ಲ ಗ್ರಾಮದ ನೇರೇಡು ಚೆರುವು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಆರು ಮಂದಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಂಸ್ಥೆಯೊಂದರ ವಸತಿನಿಲಯದಲ್ಲಿದ್ದ ವಿದ್ಯಾರ್ಥಿಗಳು ಗಣೇಶ ವಿಸರ್ಜನೆಗೆ ಕೆರೆಗೆ ತೆರಳಿದ್ದಾಗ ಮೂರ್ತಿಯನ್ನು ನೀರಾಳಕ್ಕೆ ಕೊಂಡೊಯ್ಯುವಾಗ ಆಕಸ್ಮಿಕವಾಗಿ ನೀರಿನ ಆಳಕ್ಕೆ ಜಾರಿ ಈ ಅನಾಹುತ ಸಂಭವಿಸಿದೆ. ಮೃತರನ್ನು ನರಸಿಂಹ ರಾಜು, ಸುಮಂತ್, ಗಣೇಶ್, ಉದಯ ಕಿರಣ್, ಶ್ಯಾಮ್ ಕುಮಾರ್ ಮತ್ತು ಸಿದ್ಧಾರ್ಥ್ ಎಂದು ಗುರುತಿಸಲಾಗಿದೆ. ಸ್ಥಳೀಯರ ನೆರವಿನಿಂದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-
ಪ್ರಧಾನಿ ಮೋದಿ ಜನ್ಮದಿನ: ಪುರಿ ಕಡಲತೀರದಲ್ಲಿ2500 ದೀಪಗಳ 25 ಅಡಿ ಮರಳು ಕಲಾಕೃತಿ!
ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲತೀರದಲ್ಲಿ ಬರೋಬ್ಬರಿ 25 ಅಡಿ ಎತ್ತರದ ಭವ್ಯ ಮರಳು ಕಲಾಕೃತಿಯನ್ನು ರಚಿಸಿದ್ದಾರೆ. ಈ ಆಕರ್ಷಕ ಶಿಲ್ಪವನ್ನು ಸುಮಾರು 2500 ಮಣ್ಣಿನ ಹಣತೆಗಳಿಂದ ಅದ್ಭುತವಾಗಿ ಅಲಂಕರಿಸಿ, ‘ಆಶೀರ್ವಾದದ ದೀಪ’ಎಂಬ ವಿಶೇಷ ಸಂದೇಶವನ್ನು ಸಾರಿದ್ದಾರೆ. ವೀಡಿಯೋ ನೋಡಿ
-
ಡಿವೈಡರ್‌ಗೆ ಸರ್ಕಾರಿ ಬಸ್ ಡಿಕ್ಕಿ, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ರಾಮಾಪುರ ಗ್ರಾಮದ ಬಳಿ ಆಂಧ್ರದ ಶಾಂತಿಪುರಂನಿಂದ ಕೆಜಿಎಫ್‌ಗೆ ಬರುತ್ತಿದ್ದ ಸರ್ಕಾರಿ ಬಸ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಬಸ್‌ನಲ್ಲಿದ್ದ ೪೦ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ೧೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಅವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ: ಪಟೇಲ್ ಪುತ್ಥಳಿಗೆ ಸಿಎಂ ಮಾಲಾರ್ಪಣೆ
79ನೇ ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಕಲಬುರಗಿಯ ಸರ್ದಾರ್ ಪಟೇಲ್ ವೃತ್ತದಲ್ಲಿರುವ ಪಟೇಲ್ ಅವರ ಪುತ್ಥಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಲಾರ್ಪಣೆ ಮಾಡಿ ಶುಭಾಶಯ ಕೋರಿದರು. ಸಚಿವ ಪ್ರಿಯಾಂಕ್ ಖರ್ಗೆ, ಸಚಿವರು ಹಾಗೂ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Published On - Sep 17,2026 9:10 AM




