AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರು ಎನ್‌ಕೌಂಟರ್‌ಗೆ ಬಲಿ

ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿವೆ. ಜಮ್ಮು ಮತ್ತು ಕಾಶ್ಮೀರದ ಎಸ್​ಒಜಿ ಮತ್ತು ಭಾರತೀಯ ಸೇನೆಯ ಜಂಟಿ ತಂಡ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಗಡಿಯಾಚೆಗಿನ ನುಸುಳುವಿಕೆ ಯತ್ನಗಳನ್ನು ತಡೆಗಟ್ಟಲು ಈ ಕಾರ್ಯಾಚರಣೆ ಮಹತ್ವಪೂರ್ಣವಾಗಿದೆ.

ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರು ಎನ್‌ಕೌಂಟರ್‌ಗೆ ಬಲಿ
ಭಾರತೀಯ ಸೇನೆImage Credit source: India TV
ನಯನಾ ರಾಜೀವ್
|

Updated on: Sep 17, 2026 | 9:03 AM

Share

ಉಧಂಪುರ, ಸೆಪ್ಟೆಂಬರ್ 17: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣಾ ಪಡೆ (SOG) ಮತ್ತು ಭಾರತೀಯ ಸೇನೆಯ ಜಂಟಿ ತಂಡ ನಡೆಸಿದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ತಡರಾತ್ರಿ ಎನ್‌ಕೌಂಟರ್: ಉಧಂಪುರದ ದುರ್ಗಮ ಕಾಡು ಪ್ರದೇಶದಲ್ಲಿ ಉಗ್ರರು ಅವಿತಿರುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಜಂಟಿ ಕೂಂಬಿಂಗ್ ಆರಂಭಿಸಿದವು. ಈ ವೇಳೆ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಿದಾಗ ಎನ್‌ಕೌಂಟರ್ ಆರಂಭವಾಗಿ, ಭದ್ರತಾ ಪಡೆಗಳ ಪ್ರತಿದಾಳಿಗೆ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹತರಾದ ಉಗ್ರರು ಯಾವ ಸಂಘಟನೆಗೆ ಸೇರಿದವರು ಮತ್ತು ಅವರ ವಿವರಗಳೇನು ಎಂಬುದನ್ನು ಭದ್ರತಾ ಪಡೆಗಳು ಖಚಿತಪಡಿಸಿಕೊಳ್ಳುತ್ತಿವೆ.

ಎನ್‌ಕೌಂಟರ್ ಸ್ಥಳದಿಂದ ಎಕೆ ಸರಣಿಯ ರೈಫಲ್‌ಗಳು, ಮದ್ದುಗುಂಡುಗಳು ಹಾಗೂ ಸುಧಾರಿತ ಸಂವಹನ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಉಗ್ರರಿಗಾಗಿ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ.

ಮತ್ತಷ್ಟು ಓದಿ: ಜಾಗತಿಕ ಸಮುದಾಯವನ್ನು ಮತ್ತೊಮ್ಮೆ ದಾರಿತಪ್ಪಿಸಲು ಪಾಕಿಸ್ತಾನ ಯತ್ನ: ಉಗ್ರ ಮಸೂದ್ ಅಜರ್‌ ತಲೆಗೆ 70 ಲಕ್ಷ ಬಹುಮಾನ ಘೋಷಣೆ

ಬುದ್ಗಾಮ್‌ನಲ್ಲಿ ಲಷ್ಕರ್ ಕಮಾಂಡರ್ ಯಾಸಿರ್ ಹತ್ಯೆ: ಇದೇ ತಿಂಗಳ ಆರಂಭದಲ್ಲಿ ಬುದ್ಗಾಮ್ ಜಿಲ್ಲೆಯ ಯುಸ್ಮಾರ್ಗ್ ಅರಣ್ಯ ಪ್ರದೇಶದಲ್ಲಿ ಸೇನೆಯ 53 ರಾಷ್ಟ್ರೀಯ ರೈಫಲ್ಸ್ (RR) ಹಾಗೂ ವಿಶೇಷ ಪಡೆಗಳು ನಡೆಸಿದ ‘ಆಪರೇಷನ್ ಅಶ್ದರ್’ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್, ಪಾಕಿಸ್ತಾನ ಮೂಲದ ಯಾಸಿರ್ ಎಂಬಾತನನ್ನು ಹೊಡೆದುರುಳಿಸಲಾಗಿತ್ತು. ಈ ಹಿಂದೆ ಸುಲೈಮಾನ್ ಮೂಸಾ ಗ್ಯಾಂಗ್‌ನಲ್ಲಿದ್ದ ಯಾಸಿರ್, ನಂತರ ಪ್ರತ್ಯೇಕವಾಗಿ ತನ್ನದೇ ಜಾಲ ನಿರ್ಮಿಸಿಕೊಂಡು ಕಾಶ್ಮೀರದ ಎತ್ತರದ ಅರಣ್ಯ ಪ್ರದೇಶಗಳಲ್ಲಿ ಸಕ್ರಿಯನಾಗಿದ್ದ. ಆತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಪಡೆಗಳು ಆತನನ್ನು ಯಶಸ್ವಿಯಾಗಿ ಮಟ್ಟಹಾಕಿದ್ದವು.

ಕಾಶ್ಮೀರ ಕಣಿವೆಯ ಜತೆಗೆ ಜಮ್ಮು ವಲಯದ ದೋಡಾ, ಕಿಶ್ತ್ವಾರ್ ಮತ್ತು ಉಧಂಪುರದ ಕಣಿವೆ ಮಾರ್ಗಗಳನ್ನು ನುಸುಳುವಿಕೆಗೆ ಬಳಸಿಕೊಳ್ಳಲು ಗಡಿಯಾಚೆಗಿನ ಉಗ್ರ ಗುಂಪುಗಳು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಸೇನೆ ಮತ್ತು ಪೊಲೀಸರು ಪರ್ವತ ಶ್ರೇಣಿಗಳಲ್ಲಿ ‘ಸರ್ಚ್ ಅಂಡ್ ಡೆಸ್ಟ್ರಾಯ್’ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’