
ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾಗೌಡ ಅವರ ಜಾಮೀನು ಅರ್ಜಿ ಸಂಬಂಧ ಇಂದು ಆದೇಶ ಹೊರಬೀಳಲಿದೆ. ಅನಾರೋಗ್ಯ ಸೇರಿದಂತೆ ವಿವಿಧ ಕಾರಣ ನೀಡಿ ಜಾಮೀನು ಕೋರಿದ್ದು, ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಬರ ಪರಿಹಾರ ಮೊತ್ತ ಸಾಲದೆಂಬ ಪ್ರತಿಪಕ್ಷಗಳ ಟೀಕೆಗೆ ಸಚಿವ ಜಿ. ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “250 ಕೋಟಿ ರೂ. ಸಣ್ಣ ಮೊತ್ತವಲ್ಲ, ಇದು ಮೊದಲ ಹಂತ. ಪ್ರತಿಪಕ್ಷಗಳಿಗೆ ರಾಜಕೀಯ ಬೇಕೇ ಹೊರತು ರೈತರ ಹಿತವಲ್ಲ. ಕರೆಂಟ್, ಅಕ್ಕಿ ಹಾಗೂ ಪಂಪ್‌ಸೆಟ್ ಸಬ್ಸಿಡಿಗಳೂ ರೈತರಿಗೆ ನೆರವೇ,” ಎಂದಿದ್ದಾರೆ.
ಕಾನ್ಪುರದ ಔಷಧ ಉದ್ಯಮಿ ವಿನೀತ್ ಮನೋಚಾ ಹತ್ಯೆ ಪ್ರಕರಣದಲ್ಲಿ ಆಘಾತಕಾರಿ ಸತ್ಯ ಬಯಲಾಗಿದೆ. ಆಸ್ತಿ ಕೈತಪ್ಪುವ ಭೀತಿ ಹಾಗೂ ಸಾಲದ ಸುಳಿಯಲ್ಲಿದ್ದ ಮಗ ಸುಬ್ರತ್, ತಂದೆಯ ಕೊಲೆಗೆ 6 ಲಕ್ಷ ರೂ. ಸುಪಾರಿ ನೀಡಿದ್ದ. ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ. ಮತ್ತಷ್ಟು ಓದಿ
ಭಾರಿ ಹೈಪ್ ಮೂಡಿಸಿದ್ದ ‘ಪ್ಯಾರಡೈಸ್’ ಸಿನಿಮಾ ನೆಗೆಟಿವ್ ವಿಮರ್ಶೆಗಳ ನಡುವೆಯೂ ಮೊದಲ ದಿನ ವಿಶ್ವದಾದ್ಯಂತ 74.90 ಕೋಟಿ ರೂ. ಗ್ರೋಸ್ ಗಳಿಸಿದೆ. ಭಾರತದಲ್ಲೇ 34.65 ಕೋಟಿ ನೆಟ್ ಗಳಿಸಿದರೂ, ಪ್ರೇಕ್ಷಕರ ಕಳಪೆ ಪ್ರತಿಕ್ರಿಯೆಯಿಂದಾಗಿ ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಗಳಿಕೆ ಕುಸಿಯುವ ಭೀತಿ ಎದುರಾಗಿದೆ. ಮತ್ತಷ್ಟು ಓದಿ
ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಲೋಕೋಪಯೋಗಿ ಕಾಮಗಾರಿ ಅಕ್ರಮ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಆರೋಪದ ಇಡಿ ತನಿಖೆ ದೆಹಲಿ ಘಟಕಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಇತ್ತೀಚಿನ ದಾಳಿ ವೇಳೆ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ಮತ್ತಷ್ಟು ಬಿಗಿಯಾಗುವ ಲಕ್ಷಣಗಳು ಗೋಚರಿಸಿವೆ. ಮತ್ತಷ್ಟು ಓದಿ
ಉಡುಪಿ ತಾಲೂಕಿನ ಮಣಿಪುರ ಪಂಚಾಯಿತಿ ವ್ಯಾಪ್ತಿಯ ದೆಂದೂರುಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಮುಂಜಾನೆ ಬೆಂಕಿಗಾಹುತಿಯಾಗಿದೆ. ಸಿಬ್ಬಂದಿ ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಿದ್ದು, ಪಕ್ಕದಲ್ಲಿದ್ದ ಬಸ್‌ಗಳು, ಟೆಂಪೋ ಹಾಗೂ ಪೆಟ್ರೋಲ್ ಬಂಕ್‌ಗೆ ಎದುರಾಗಿದ್ದ ಭಾರೀ ಅಗ್ನಿ ಅವಘಡ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಟೆಲಿಗ್ರಾಂನಲ್ಲಿ ಭಯೋತ್ಪಾದನಾ ಕೃತ್ಯದ ಬಗ್ಗೆ ಚರ್ಚಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪದ್ಮಿನಿ ಸಾಹು ತಿಳಿಸಿದ್ದಾರೆ. ಬಂಧಿತರಿಗೆ ಸದ್ಯಕ್ಕೆ ಉಗ್ರ ಹಿನ್ನೆಲೆಯಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುವುದು ಎಂದು ಅವರು ಟಿವಿ9ಗೆ ತಿಳಿಸಿದ್ದಾರೆ.
ಸುರಕ್ಷತಾ ಕಾರಣಗಳಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಸಕ್ರೆಬೈಲು ಆನೆ ಬಿಡಾರ ಸೆಪ್ಟೆಂಬರ್ 26 ರಿಂದ ಸಾರ್ವಜನಿಕರಿಗೆ ಮತ್ತೆ ಮುಕ್ತವಾಗಲಿದೆ. ಪ್ರತ್ಯೇಕ ಸಂಚಾರ ಮಾರ್ಗ, ಬಿಗಿ ಭದ್ರತೆ ಹಾಗೂ ಮುನ್ನೆಚ್ಚರಿಕಾ ಫಲಕಗಳ ಸ್ಥಾಪನೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರವೇಶಕ್ಕೆ ಅಧಿಕೃತ ಆದೇಶ ನೀಡಿದೆ.
ಕೊಪ್ಪಳ ತಾಲೂಕು ಕ್ರೀಡಾಂಗಣದ ಮುಂಭಾಗ 11ನೇ ದಿನದ ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಭೀಕರ ಗಲಾಟೆ ನಡೆದಿದೆ. ರೊಚ್ಚಿಗೆದ್ದ ಯುವಕರು ಪರಸ್ಪರ ಬಡಿಗೆಗಳಿಂದ ಬಡಿದಾಡಿಕೊಂಡಿದ್ದಾರೆ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Breaking News Today Live Updates in Kannada: ಚಿಕ್ಕಬಳ್ಳಾಪುರದ ಬಾಪೂಜಿನಗರದ ಶಬ್ಬೀರ್ ಎಂಬ ಯುವಕನನ್ನು ದೇಶದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಭಯೋತ್ಪಾದನೆಗೆ ಸಂಚು ರೂಪಿಸಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಬಂಧಿಸಿದ್ದಾರೆ. ಜೊತೆಗೆ ಉತ್ತರಭಾರತ ಮೂಲದ ಸಲ್ಮಾನ್ ಕೂಡ ಅರೆಸ್ಟ್ ಆಗಿದ್ದಾನೆ. ಆರೋಪಿಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಗ್ರೂಪ್ ಸೃಷ್ಟಿಸಿ, ಶ್ರೀಮಂತರ ಅಪಹರಣದ ಮೂಲಕ ಹಣ ಸಂಗ್ರಹಿಸಿ ದೇಶದ ಪ್ರಭಾವಿ ಮೂವರು ನಾಯಕರ ಹತ್ಯೆ ಹಾಗೂ ಭಯೋತ್ಪಾದನೆ ಸೃಷ್ಟಿಸಲು ಪ್ರತಿದಿನ ಚರ್ಚಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಗ್ರೂಪ್‌ನಲ್ಲಿದ್ದ ಇತರರ ಪತ್ತೆಗೆ ಜಾಲ ಬೀಸಲಾಗಿದೆ. ಹೈದರಾಬಾದ್‌ನ ಬಿಜೆಪಿ ನಾಯಕಿ ಕೊಂಪೆಲ್ಲಾ ಮಾಧವಿಲತಾ ಅವರಿಗೆ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸದಂತೆ ಅಕ್ಟೋಬರ್ 23ರವರೆಗೆ ನಿರ್ಬಂಧ ವಿಧಿಸಿ ಡಿಸಿ ಸಂಗಪ್ಪ ಆದೇಶಿಸಿದ್ದಾರೆ. ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿದ್ದ ಅವರ ಪ್ರಚೋದನಾಕಾರಿ ಭಾಷಣದ ಸಾಧ್ಯತೆ ಕುರಿತು ಎಸ್‌ನ ಪತ್ರದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ರಸ್ತೆ ಹಾಗೂ ಆಸ್ತಪಾಸ್ತಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Published On - 8:56 am, Fri, 25 September 26