ಹೊರಗಿನಿಂದ ಬಂದವರಿಗೆ ಉತ್ತರ ಕೊಡುವ ಅಗತ್ಯವಿಲ್ಲ: ಎಸ್​ಡಿಪಿಐ ಆರೋಪಕ್ಕೆ ರಘುಪತಿ ಭಟ್ ಪ್ರತಿಕ್ರಿಯೆ

ನಾನೆಂದೂ ಇಸ್ಲಾಮ್ ಧರ್ಮದ ಅಥವಾ ಮುಸ್ಲಿಮರ ಆಚರಣೆ ವಿರುದ್ಧ ಮಾತನಾಡಿಲ್ಲ. ಹೊರಗಿನಿಂದ ಬಂದು ಬೆಂಕಿ ಹಾಕುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಹೊರಗಿನಿಂದ ಬಂದವರಿಗೆ ಉತ್ತರ ಕೊಡುವ ಅಗತ್ಯವಿಲ್ಲ: ಎಸ್​ಡಿಪಿಐ ಆರೋಪಕ್ಕೆ ರಘುಪತಿ ಭಟ್ ಪ್ರತಿಕ್ರಿಯೆ
ಶಾಸಕ ರಘುಪತಿ ಭಟ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 18, 2022 | 2:57 PM

ಉಡುಪಿ: ಹಿಜಾಬ್ ವಿಚಾರದಲ್ಲಿ ಎಸ್​ಡಿಪಿಐನಂಥ ಸಂಘಟನೆಗಳಿಗೆ ಉತ್ತರ ಹೇಳುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದ ಮುಸ್ಲಿಮರು ಪ್ರಶ್ನೆ ಕೇಳಿದರೆ ಉತ್ತರಿಸುತ್ತೇನೆ. ಹೊರಗಿನಿಂದ ಬಂದವರಿಗೆ ಏಕೆ ಉತ್ತರಿಸಬೇಕು. ಎಸ್​ಡಿಪಿಐನಿಂದ ಪ್ರಶಂಸಾ ಪತ್ರ ಪಡೆಯುವ ಅಗತ್ಯ ನನಗಿಲ್ಲ. ಕಾಂಗ್ರೆಸ್ ನಾಯಕರ ಬೆಂಬಲವೂ ನಮಗಿದೆ ಎಂದು ಶಾಸಕ ರಘುಪತಿ ಭಟ್ (MLA Raghupathi Bhat) ಹೇಳಿದರು. ಶಾಸಕ ರಘುಪತಿ ಭಟ್ ಅಜ್ಞಾನಿ, ಅನರ್ಹ ಶಾಸಕ ಎಂಬ ಎಸ್​ಡಿಪಿಐ ಆರೋಪದ ಬಗ್ಗೆ ಶಾಸಕರು ಪ್ರತಿಕ್ರಿಯಿಸಿದರು. ನಾನೆಂದೂ ಇಸ್ಲಾಮ್ ಧರ್ಮದ ಅಥವಾ ಮುಸ್ಲಿಮರ ಆಚರಣೆ ವಿರುದ್ಧ ಮಾತನಾಡಿಲ್ಲ. ಹೊರಗಿನಿಂದ ಬಂದು ಬೆಂಕಿ ಹಾಕುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಹಿಜಾಬ್ ಬಗ್ಗೆ ಇಸ್ಲಾಮ್​ನಲ್ಲಿ ಉಲ್ಲೇಖವಿದೆ. ಅವರು ಶಿಕ್ಷಣ ಸಂಸ್ಥೆ ಹೊರತುಪಡಿಸಿ ಬೇರೆಡೆ ಹಿಜಾಬ್ ಹಾಕಲಿ ಎಂದರು. ಇದು 21ನೇ ಶತಮಾನ ಎನ್ನುವವರು ಸ್ವಲ್ಪವಾದರೂ ಈ ಬಗ್ಗೆ ಯೋಚಿಸಬೇಕು. ನನ್ನ ಕ್ಷೇತ್ರದ ಜನರು ಕೇಳಿದರೆ ರಾಜೀನಾಮೆ ಕೊಡುತ್ತೇನೆ. ಯಾರೋ ಹೊರಗಿನವರು ರಾಜೀನಾಮೆ ಕೇಳಿದರೆ ಕೊಡುವುದಿಲ್ಲ ಎಂದರು.

ರಘುಪತಿ ಭಟ್ ಮತ್ತು ಸಂಘಪರಿವಾರದವರ ಷಡ್ಯಂತ್ರದಿಂದ ಉಡುಪಿಯಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗಿದೆ ಎಂದು ಎಸ್​ಡಿಪಿಐ ಸದಸ್ಯ ಅತಾವುಲ್ಲಾ ಜೋಕಟ್ಟೆ ಆರೋಪ ಮಾಡಿದ್ದರು. ಅಲ್ಲದೇ, ಯಾವುದೇ ಧರ್ಮವನ್ನು ಆಧರಿಸಿ ಪಕ್ಷವನ್ನು ಕಟ್ಟಿಲ್ಲ. ಎಸ್​ಡಿಪಿಐ ಸ್ಥಾಪಿಸಿದವರು ಮುಸ್ಲಿಂ ಆಗಿದ್ದರೂ ಪಕ್ಷದಲ್ಲಿ ಕ್ರೈಸ್ತರು, ಹಿಂದುಳಿದವರು ಇದ್ದಾರೆ. ಪ್ರಜಾಪ್ರಭುತ್ವ ದೇಶವಾಗಿರಬೇಕೆನ್ನುವ ನಿಟ್ಟಿನಲ್ಲಿ ಸಂಘಟನೆ ಇದೆ. ಹಿಂದುಳಿದವರು, ಅಲ್ಪಸಂಖ್ಯಾತರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನಮ್ಮ ವಿರುದ್ಧ ಶಾಸಕ ರಘುಪತಿ ಭಟ್​ ಆರೋಪ ನಿರಾಧಾರ ಆಗಿದೆ. ಶಾಲೆಯ ಆರಂಭದಿಂದಲೂ ಹಿಜಾಬ್ ಧರಿಸಿ ಹೋಗುತ್ತಿದ್ದರು. ಆದರೆ, ಈಗ ಪರೀಕ್ಷೆ ಸಂದರ್ಭದಲ್ಲಿ ಕೇಸರಿ ಧರಿಸಿ ಸಮಸ್ಯೆ ಸೃಷ್ಟಿಸಿದ್ಯಾರು? ಇದು ರಘುಪತಿ ಭಟ್, ಸಂಘ ಪರಿವಾರದವರ ಷಡ್ಯಂತ್ರ. ಹಿಜಾಬ್, ಕೇಸರಿ ಶಾಲು ವಿವಾದದ ಬಗ್ಗೆ ತನಿಖೆಯಾಗಬೇಕು. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿ ವಿವಾದ ಸೃಷ್ಟಿ ಮಾಡಲಾಗಿದೆ. ಇದೀಗ ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದೆ ಎಂದು ಹೇಳಿದ್ದರು.

ಹೈಕೋರ್ಟ್​ನ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇವೆ. ಹೈಕೋರ್ಟ್, ಸುಪ್ರೀಂಕೋರ್ಟ್​ ಮೇಲೆ ನಮಗೆ ಗೌರವವಿದೆ. ಹೈಕೋರ್ಟ್​ ನಮಗೆ ನ್ಯಾಯ ಒದಗಿಸುವ ಆಶಾಭಾವನೆಯಿದೆ. ಯಾವುದೇ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ. ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾರಿಗೆ ಹಕ್ಕು ನೀಡಿದೆ. ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಕಸಿಯುವ ಹಕ್ಕು ಇಲ್ಲ. ಧಾರ್ಮಿಕ ಸ್ವಾತಂತ್ರ್ಯ ಕಸಿಯುವುದಕ್ಕೆ ಎಸ್​ಡಿಪಿಐ ವಿರೋಧವಿದೆ ಎಂದು ಎಸ್​ಡಿಪಿಐ ರಾಜ್ಯ ಸಮಿತಿ ಸದಸ್ಯ ತಿಳಿಸಿದ್ದರು.

ಈಗ ಬಂದಿರುವುದು ಮಧ್ಯಂತರ ಆದೇಶವಷ್ಟೇ. ಅದು ಸಂಪೂರ್ಣ ತೀರ್ಪಲ್ಲ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಬಗ್ಗೆ ನಮಗೆ ಗೌರವವಿದೆ. ಕೋರ್ಟ್​ನ ನಿರ್ಣಯದ ಬಗ್ಗೆ ಆಶಾಭಾವವಿದೆ. ದೇಶದಲ್ಲಿ ಸಂವಿಧಾನವಿದೆ. ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಕೂಡ ನಮಗೆ ನ್ಯಾಯ ಒದಗಿಸಲಿದೆ ಎನ್ನುವ ಆಶಾಭಾವವಿದೆ. ಬಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ ಧರ್ಮಕ್ಕೂ ಹಕ್ಕನ್ನು ನೀಡಲಾಗಿದೆ. ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಹಕ್ಕು ಯಾರಿಗೂ ಕೂಡ ಇಲ್ಲ. ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವುದಕ್ಕೆ ಎಸ್​ಡಿಪಿಐ ವಿರೋಧ ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಹಿಜಾಬ್ ವಿವಾದ: 12 ಮಕ್ಕಳಿಗೆ ಟ್ರೈನಿಂಗ್ ನೀಡಲಾಗಿದೆ, ನನಗೆ ಸಿಕ್ಕ ಮಾಹಿತಿ ನೀಡಿದ್ದೀನಿ ಸರ್ಕಾರ ತನಿಖೆ ನಡೆಸಲಿ -ಶಾಸಕ ರಘುಪತಿ ಭಟ್

ಇದನ್ನೂ ಓದಿ: ಹಿಜಾಬ್ V/S ಕೇಸರಿ ಶಾಲು; ಉಡುಪಿ ಶಾಸಕ ರಘುಪತಿ ಭಟ್​ಗೆ ವಿದೇಶಗಳಿಂದ ಜೀವ ಬೆದರಿಕೆ ಕರೆಗಳು

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು