3 ಕೋಟಿ 34 ಲಕ್ಷ ನಗದು-5 kg ಚಿನ್ನ ನೀಡಿರುವುದಾಗಿ ಡೆತ್ ನೋಟಿನಲ್ಲಿ ಬರೆದು, ಶಾಸಕರ ಬಳಿ 6 -7 ಬಾರಿ ಸಂಧಾನ ಮಾಡಿಯೂ ಆತ್ಮಹತ್ಯೆ ಮಾಡಿಕೊಂಡ ಕುಂದಾಪುರದ ಉದ್ಯಮಿ
ಗೋಲ್ಡ್ ಜುವೆಲ್ಲರ್ಸ್ನ ಗಣೇಶ್ ಶೆಟ್ಟಿ ಮತ್ತು ಬ್ರೋಕರ್ ಹಂಗಳೂರು ಇಸ್ಮಾಯಿಲ್ ಹೆಸರು ಡೆತ್ ನೋಟ್ನಲ್ಲಿ ನಮೋದಿಸಲಾಗಿದೆ. ಇವರಿಗೆ 3 ಕೋಟಿ 34 ಲಕ್ಷ ನಗದು ಮತ್ತು 5 ಕೆಜಿ ಚಿನ್ನ ನೀಡಿರುವುದಾಗಿ ಕಟ್ಟೆ ಭೋಜಣ್ಣ ಡೆತ್ ನೋಟ್ನಲ್ಲಿ ನಮೂದಿಸಿದ್ದಾರೆ.
ಉಡುಪಿ: ಕುಂದಾಪುರದ ಹೆಸರಾಂತ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಉದ್ಯಮಿ ಡೆತ್ ನೋಟ್ ಪತ್ತೆಯಾಗಿದೆ. ಕಟ್ಟೆ ಭೋಜಣ್ಣ ತಮ್ಮ ಡೆತ್ ನೋಟ್ನಲ್ಲಿ ಇಬ್ಬರು ಉದ್ಯಮಿಗಳ ಹೆಸರು ನಮೂದಿಸಿದ್ದಾರೆ.
ಗೋಲ್ಡ್ ಜುವೆಲ್ಲರ್ಸ್ನ ಗಣೇಶ್ ಶೆಟ್ಟಿ ಮತ್ತು ಬ್ರೋಕರ್ ಹಂಗಳೂರು ಇಸ್ಮಾಯಿಲ್ ಹೆಸರು ಡೆತ್ ನೋಟ್ನಲ್ಲಿ ನಮೋದಿಸಲಾಗಿದೆ. ಇವರಿಗೆ 3 ಕೋಟಿ 34 ಲಕ್ಷ ನಗದು ಮತ್ತು 5 ಕೆಜಿ ಚಿನ್ನ ನೀಡಿರುವುದಾಗಿ ಕಟ್ಟೆ ಭೋಜಣ್ಣ ಡೆತ್ ನೋಟ್ನಲ್ಲಿ ನಮೂದಿಸಿದ್ದಾರೆ. ಅಲ್ಲದೆ 2013ರಲ್ಲಿ ಹಣ ಮತ್ತು ಚಿನ್ನ ನೀಡಿರುವ ಕುರಿತು ಸ್ಪಷ್ಟವಾಗಿ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಹಣ ಮತ್ತು ಚಿನ್ನದ ವಾಪಾಸಾತಿ ಕುರಿತು 6 -7 ಬಾರಿ ಕುಂದಾಪುರ ಶಾಸಕರ ಸಮ್ಮುಖ ಮಾತುಕತೆ ನಡೆದಿತ್ತು. ಆದರೆ ಇದುವರೆಗೆ ಹಣ ಮತ್ತು ಚಿನ್ನ ಜೊತೆಗೆ ಬಡ್ಡಿಯ ಒಂದು ರೂಪಾಯಿ ಕೂಡ ನೀಡಿಲ್ಲ. ಹಣ ಬಾಕಿ ಇರುವುದರಿಂದ ತನಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಟ್ಟೆ ಭೋಜಣ್ಣ ಪತ್ರದಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ. ಹಾಗಾಗಿ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟ್ ನಲ್ಲಿ ರಿವಾಲ್ವರ್ ಇದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನಗೆ ಬರಬೇಕಾಗಿರುವ ಬಾಕಿಯನ್ನು ನಮ್ಮ ಮನೆಯವರಿಗೆ ರಿಕವರಿ ಮಾಡಿ ಎಂದು ಕಟ್ಟೆ ಭೋಜಣ್ಣ ತಿಳಿಸಿದ್ದಾರೆ. ಡೆತ್ ನೋಟ್ ಮೇಲ್ಭಾಗದಲ್ಲಿ ದಿನಾಂಕ ಅಳಿಸಿ ಫುನಃ ಬರೆಯಲಾಗಿದೆ. ಸದ್ಯ ಡೆತ್ ನೋಟ್ ಆಧಾರ ಮೇಲೆ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:27 pm, Thu, 26 May 22