ಸಮಾಜವನ್ನ ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ; ಅವರವರು ಅವರ ಪದ್ಧತಿ ಮುಂದುವರಿಸಿಕೊಂಡು ಹೋಗಲಿ -ಸಚಿವ ಕೆ.ಎಸ್. ಈಶ್ವರಪ್ಪ

ಸಮಾಜವನ್ನ ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ; ಅವರವರು ಅವರ ಪದ್ಧತಿ ಮುಂದುವರಿಸಿಕೊಂಡು ಹೋಗಲಿ -ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಕೆ.ಎಸ್​.ಈಶ್ವರಪ್ಪ

ಅವರವರು ಅವರ ಪದ್ಧತಿ ಮುಂದುವರಿಸಿಕೊಂಡು ಹೋಗಲಿ. ಮುಸಲ್ಮಾನರು ಹಲಾಲ್ ಕಟ್ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ ಕಟ್ ಮಾಂಸ ಮಾಡುವುದಾದ್ರೆ ಮಾಡಲಿ. ಮುಸಲ್ಮಾನರು ನಮ್ಮ ಮನೆಗೆ ಬಂದು ಒತ್ತಡ ಹಾಕುವುದಿಲ್ಲ. -ಸಚಿವ ಕೆ.ಎಸ್. ಈಶ್ವರಪ್ಪ

TV9kannada Web Team

| Edited By: Ayesha Banu

Apr 03, 2022 | 2:54 PM

ಉಡುಪಿ: ನಿನ್ನೆ ಯುಗಾದಿ(Ugadi) ಮೂಲಕ ಕರುನಾಡಿನ ಜನ ನವ ಸಂವತ್ಸರಕ್ಕೆ ಕಾಲಿಟ್ಟದ್ದಾರೆ. ರಾಜ್ಯದ ಅನೇಕ ಕಡೆ ಇಂದು ಹೊಸತೊಡಕು ಆಚರಣೆ ಮಾಡಲಾಗುತ್ತಿದೆ. ಆದ್ರೆ, ಮುಸ್ಲಿಮರ ಹಲಾಲ್ ಕಟ್(Halal Cut) ಮಾಂಸದ ವಿರುದ್ಧ ಹಿಂದೂ ಸಂಘಟನೆಗಳು ಸಮರ ಸಾರಿವೆ. ರಾಜ್ಯದಲ್ಲಿ ಹಲಾಲ್, ಜಟ್ಕಾ ಕಟ್ ಮಾಂಸ ವಿವಾದ ನಡೆಯುತ್ತಿದೆ. ಸದ್ಯ ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಮತ್ತು ಸಚಿವ ಈಶ್ವರಪ್ಪ(KS Eshwarappa) ಪ್ರತಿಕ್ರಿಯೆ ನೀಡಿದ್ದಾರೆ.

ನಾವೆಲ್ಲರೂ ಹಲಾಲ್ ಮಾಂಸ ತಿನ್ನಬೇಕು ಎನ್ನುವುದು ಸರಿಯಲ್ಲ. ಮುಸಲ್ಮಾನರು ಹಲಾಲ್ ಮಾಂಸ ತಿನ್ನಲು ವಿರೋಧವಿಲ್ಲ. ಎಲ್ಲರಿಗೂ ಹಲಾಲ್ ತಿನ್ನಿಸಬೇಕೆಂಬ ಭಾವನೆ ಸರಿಯಲ್ಲ ಎಂದು ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ದೇಶದ ಜನ ಕಾಂಗ್ರೆಸ್, JDSಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಮೋದಿ ಪ್ರಧಾನಿಯಾದ ಮೇಲೆ ಕೋಮು ಗಲಭೆ ನಡೆದಿಲ್ಲ. ಸಂಘರ್ಷವಾಗದಂತೆ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಬಿಜೆಪಿ ಚಿಂತನೆ. ಬಿಜೆಪಿ ರಾಜ್ಯ, ದೇಶದಲ್ಲಿ ಒಡೆದು ಆಳುವ ನೀತಿ ಮಾಡ್ತ್ತಿಲ್ಲ. ಸಿದ್ದರಾಮಯ್ಯ ಶಾದಿ ಭಾಗ್ಯ, ಟಿಪ್ಪು ಜಯಂತಿ ಮಾಡಿದರು. ಅದೇ ಮಾನಸಿಕತೆ ರಾಜ್ಯದ ಮೇಲೆ ಹೇರಲು ‘ಕೈ’ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್‌ಗೆ ವೋಟ್ ಮಾತ್ರ ಕಾಣುತ್ತಿದೆ. ಬಿಜೆಪಿಗೆ ಜನರು ಕಾಣುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಹೇಳಿದ್ರು.

ಇನ್ನು ಇದೇ ವೇಳೆ ಹರ್ಷ ಕೊಲೆ ಪ್ರಕರಣದ ಸಂಬಂಧ ಮಾತನಾಡಿದ ಶೋಭಾ ಕರಂದ್ಲಾಜೆ, NIAಯಿಂದ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಹರ್ಷ ಕೊಲೆ ಹಿಂದೆ ಯಾರಿದ್ದಾರೆ, ಕಾರಣ ತಿಳಿಯಬೇಕು. ಪೊಲೀಸರನ್ನು ಹಿಮ್ಮೆಟ್ಟಿಸಿದ್ದರ ಬಗ್ಗೆಯೂ ತನಿಖೆಯಾಗ್ಬೇಕು. SDPI, PFI ದೇಶದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡ್ತಿದೆ. ಹಿಜಬ್ ವಿಚಾರದಲ್ಲಿ ಬಡ ಮಕ್ಕಳನ್ನು ಎತ್ತಿ ಕಟ್ಟಿದರು. NIAಯಿಂದ ಹಿಂದಿನ ಶಕ್ತಿಗಳ ತನಿಖೆಯಾಗಬೇಕು ಎಂದರು.

ಮುಸಲ್ಮಾನರು ಹಲಾಲ್ ಕಟ್ ಮಾಡುವುದಾದರೆ ಮಾಡಲಿ ಇನ್ನು ಮತ್ತೊಂದೆಡೆ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಹಲಾಲ್ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಅವರವರು ಅವರ ಪದ್ಧತಿ ಮುಂದುವರಿಸಿಕೊಂಡು ಹೋಗಲಿ. ಮುಸಲ್ಮಾನರು ಹಲಾಲ್ ಕಟ್ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ ಕಟ್ ಮಾಂಸ ಮಾಡುವುದಾದ್ರೆ ಮಾಡಲಿ. ಮುಸಲ್ಮಾನರು ನಮ್ಮ ಮನೆಗೆ ಬಂದು ಒತ್ತಡ ಹಾಕುವುದಿಲ್ಲ. ನಾನು ಮುಸಲ್ಮಾನರ ಮನೆಗೆ ಹೋಗಿ ಒತ್ತಡ ಹಾಕುವುದಿಲ್ಲ. ಸಮಾಜವನ್ನ ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನಾನು ರಾಜಕಾರಣ ಮಾಡಲು ಇಷ್ಟಪಡಲ್ಲ ಎಂದರು.

ಹಿಜಾಬ್ ವಿವಾದವನ್ನು ಆರಂಭ ಮಾಡಿದ್ದು ಯಾರು? ಹರ್ಷ ಕೊಲೆಯನ್ನ ಕಾಂಗ್ರೆಸ್ ಯಾಕೆ ಖಂಡಿಸಲಿಲ್ಲ? ಹಿಜಾಬ್, ಹಲಾಲ್, ರಾಷ್ಟ್ರಧ್ವಜದ ಕುರಿತು ಚರ್ಚಿಸ್ತಿದೆ. ಮುಸಲ್ಮಾನರನ್ನು ತೃಪ್ತಿ ಪಡಿಸುವ ಯತ್ನ ಒಳ್ಳೆಯದಲ್ಲ. ‘ಇಲ್ಲಿ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಅಂತಾರೆ’. ಪಾಕಿಸ್ತಾನದಿಂದ ಜಿಂದಾಬಾದ್ ಅನ್ನುವವರನ್ನ ಬಿಡಲ್ಲ. NIA ತನಿಖೆಯಿಂದ ಹರ್ಷ ಕೊಲೆಗೆ ನ್ಯಾಯ ಸಿಗುತ್ತೆ. ಹಿಂದೆಯಿಂದ ಕೊಚ್ಚಿದವರನ್ನ ಗಂಡಸರೆನ್ನಲು ಸಾಧ್ಯವೇ? ಚುನಾವಣೆ ಬಂದಾಗ ನಾವು ಉತ್ತರ ಕೊಡುತ್ತೇವೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಎಲೆಕ್ಷನ್ನಲ್ಲಿ ಒಂದೂ ಸೀಟ್ ಬರಲ್ಲ ಅಂದಿದ್ರು. ನಾವು ಚುನಾವಣೆಗೂ ಮುನ್ನ ಏನನ್ನೂ ಕೊಚ್ಚಿಕೊಳ್ಳುವುದಿಲ್ಲ. ನಾನೇ ಸಿಎಂ ಎಂದ ಸಿದ್ದರಾಮಯ್ಯ ಎಲೆಕ್ಷನ್ನಲ್ಲಿ ಸೋತರು. ಕಾಂಗ್ರೆಸ್ನಿಂದ ಬರೀ ಘೋಷಣೆ, ಬಿಜೆಪಿಯಿಂದ ಸಾಧನೆಯಾಗಿದೆ. ಬೆಲೆ ಏರಿಕೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ವಿದೇಶಿ ವಿನಿಮಯದ ಮೇಲೆ ಇಂಧನ ಅವಲಂಬಿತವಾಗಿದೆ. ಕೇಂದ್ರ ಸರ್ಕಾರ ಇಂಧನ ಬೆಲೆ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ಉಡುಪಿಯ ಕಾರ್ಕಳದಲ್ಲಿ ಸಚಿವ K.S.ಈಶ್ವರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ‘ಬಾನದಾರಿಯಲ್ಲಿ’ ಪ್ರೀತಂ ಗುಬ್ಬಿ- ಗಣೇಶ್ ಆಫ್ರಿಕಾ ಪಯಣ; ಹರೆಯದ ಹೃದಯಗಳ ಹಾರೈಕೆ ಕೋರಿದ ಗೋಲ್ಡನ್ ಸ್ಟಾರ್

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನೇಪಾಳ ಪ್ರಧಾನಮಂತ್ರಿ; ಸಿಎಂ ಯೋಗಿ ಆದಿತ್ಯನಾಥ್ ಉಪಸ್ಥಿತಿ

Follow us on

Related Stories

Most Read Stories

Click on your DTH Provider to Add TV9 Kannada