ಉಡುಪಿ ಮಲ್ಪೆ ಬೀಚ್​ನಲ್ಲಿ ಎರಡು ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ತೇಲುವ ಸೇತುವೆ ಬ್ಲಾಕ್​ಗಳು ಚೆಲ್ಲಾಪಿಲ್ಲಿ! ಕಾರ್ಯ ಸ್ಥಗಿತ

ಉಡುಪಿ ಮಲ್ಪೆ ಬೀಚ್​ನಲ್ಲಿ ಎರಡು ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ತೇಲುವ ಸೇತುವೆ ಬ್ಲಾಕ್​ಗಳು ಚೆಲ್ಲಾಪಿಲ್ಲಿ! ಕಾರ್ಯ ಸ್ಥಗಿತ
ಸೇತುವೆ ಬ್ಲಾಕ್​ಗಳು ಚೆಲ್ಲಾಪಿಲ್ಲಿಯಾಗಿವೆ

ಮಲ್ಪೆ ಬೀಚ್​ನ ತೇಲುವ ಸೇತುವೆ ಸ್ಥಗಿತವಾಗಿದೆ. ಅಲೆಗಳ ಅಬ್ಬರಕ್ಕೆ ಸೇತುವೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಸೇತುವೆ ಬ್ಲಾಕ್​ಗಳು ಪ್ರತ್ಯೇಕಗೊಂಡು ಚೆಲ್ಲಾಪಿಲ್ಲಿಯಾಗಿವೆ.

TV9kannada Web Team

| Edited By: sandhya thejappa

May 09, 2022 | 4:18 PM


ಉಡುಪಿ: ಬೇಸಿಗೆ ಸಮಯದಲ್ಲಿ ಪ್ರವಾಸಿಗರು ಬೀಚ್​ಗಳತ್ತ. (Beach) ಮುಖ ಮಾಡುತ್ತಾರೆ. ಇನ್ನು ರಾಜ್ಯದಲ್ಲಿ ಬೇಸಿಗೆ ಹೊತ್ತಿಗೆ ಜನರು ಉಡುಪಿ (Udupi), ಮಂಗಳೂರತ್ತ (Mangalore) ಆಗಮಿಸುತ್ತಾರೆ. ಬೀಚ್​ಗಳಲ್ಲಿ ಇಳಿದು ನೀರಿನಲ್ಲಿ ಆಟವಾಡುತ್ತಾರೆ. ಸಂತೋಷದ ಘಳಿಗೆಯನ್ನು ಹುಟ್ಟುಹಾಕಲು ಬೀಚ್​ನಲ್ಲಿ ಸಂಭ್ರಮಿಸುತ್ತಾರೆ. ಇದೇನೇ ಇರಲಿ, ಎರಡು ದಿನಗಳಿಂದ ಮಲ್ಪೆ ಬೀಚ್ ಜರರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಇದಕ್ಕೆ ಕಾರಣ ನೂತನವಾಗಿ ಸಿದ್ಧವಾಗಿರುವ ತೇಲುವ ಸೇತುವೆ. ರಾಜ್ಯದಲ್ಲೇ ಮೊಟ್ಟ ಮೊದಲಿಗೆ ನೀರಿನಲ್ಲಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ ಈ ಸೇತುವೆ ಕೇವಲ ಎರಡೇ ದಿನಕ್ಕೆ ಸ್ಥಗಿತಗೊಂಡಿದ್ದು, ಭಾರಿ ನಿರಾಸೆ ಮೂಡಿದೆ.

ಸದ್ಯ ಮಲ್ಪೆ ಬೀಚ್​ನ ತೇಲುವ ಸೇತುವೆ ಸ್ಥಗಿತವಾಗಿದೆ. ಅಲೆಗಳ ಅಬ್ಬರಕ್ಕೆ ಸೇತುವೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಸೇತುವೆ ಬ್ಲಾಕ್​ಗಳು ಪ್ರತ್ಯೇಕಗೊಂಡು ಚೆಲ್ಲಾಪಿಲ್ಲಿಯಾಗಿವೆ. ಸೇತುವೆಯ ಬ್ಲಾಕ್​ಗಳು ಚೆಲ್ಲಾಪಿಲ್ಲಿಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರ ಸಂಜೆಯಿಂದಲೇ ತೇಲುವ ಸೇತುವೆ ಬಂದ್ ಆಗಿದ್ದು, ಎಂಜಾಯ್ ಮಾಡಲು ಬಂದ ಪ್ರವಾಸಿಗರಿಗೆ ಬೇಸರವಾಗಿದೆ.

ಬಂಗಾಳಕೊಲ್ಲಿಯಲ್ಲಿ ಅಸಾನಿ‌ ಚಂಡಮಾರುತದ ಹಿನ್ನೆಲೆ ಅರಬ್ಬಿ ಸಮುದ್ರದಲ್ಲಿ ಭಾರಿ ಗಾಳಿ ಜೊತೆಗೆ ಬೃಹತ್ ಅಲೆಗಳ ಅಬ್ಬರದ ಜೋರಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಡಲ ತೀರ ಜಲಕ್ರೀಡೆಗಳು ಬಂದ್ ಆಗಿವೆ. ಬೀಚ್ ಅಭಿವೃದ್ಧಿ ಸಮಿತಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಭೇಟಿಗೂ ನಿರ್ಬಂಧ ಹೇರಿದೆ. ಜಿಲ್ಲಾಡಳಿದ ಮುಂದಿನ ಆದೇಶದ ವರೆಗೆ ಮಲ್ಪೆ ಬೀಚ್ ಬಂದ್ ಆಗಲಿದೆ. ಧ್ವನಿವರ್ಧಕ, ಫಲಕ ಅಳವಡಿಸಿ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಒಮ್ಮೆ ಸೇತುವೆ ಮೇಲೆ 100 ಜನರು ಹೋಗಬಹುದು. 15 ನಿಮಿಷಗಳ ಕಾಲ ಎಂಜಾಯ್ ಮಾಡಲು ಅವಕಾಶ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸುಮಾರು 10 ಜೀವ ರಕ್ಷರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ

Atta Price: ಚಪಾತಿ, ಪೂರಿ, ಉಪ್ಪಿಟ್ಟಿನ ಮೇಲೂ ರಷ್ಯಾ- ಉಕ್ರೇನ್ ಯುದ್ಧದ ಎಫೆಕ್ಟ್; ಅಡುಗೆ ಎಣ್ಣೆ ಜತೆಗೆ ಎಲ್ಲವೂ ಮೇಲೇರಿದೆ

Dinesh Karthik: 8 ಬಾಲ್, 30 ರನ್ ಚಚ್ಚಿ ಕಾರ್ತಿಕ್ ಪೆವಿಲಿಯನ್​​ಗೆ ಬಂದಾಗ ಕೊಹ್ಲಿ ಮಾಡಿದ್ದೇನು ನೋಡಿ

Follow us on

Related Stories

Most Read Stories

Click on your DTH Provider to Add TV9 Kannada