AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ಕನ್ನಡಿಗನ ಕಮಾಲ್: ಭರ್ಜರಿ 49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ!

ಯುನೈಟೆಡ್ ಅರಬ್ ಎಮಿರೇಟ್ಸ್ ನ (ಯುಎಇ) ಪ್ರತಿಷ್ಠಿತ ನಗರವಾದ ಅಬುಧಾಬಿಯಲ್ಲಿ ಮಾರಾಟವಾಗುವ ಬಿಗ್ ಲಾಟರಿಯ ಟಿಕೆಟ್ ಲಕ್ಕಿ ಡ್ರಾನಲ್ಲಿ ಕರ್ನಾಟಕದ ಯುವಕನಿಗೆ ಜಾಕ್​​ಪಾಟ್ ಹೊಡೆದಿದೆ. ಓಮನ್ ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ಯುವಕ ಬರೋಬ್ಬರಿ 49 ಕೋಟಿ ರೂಪಾಯಿ ಗೆದ್ದಿದ್ದಾನೆ.

ವಿದೇಶದಲ್ಲಿ ಕನ್ನಡಿಗನ ಕಮಾಲ್: ಭರ್ಜರಿ 49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ!
Shantanu Shettygar
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Feb 05, 2026 | 4:08 PM

Share

ಉಡುಪಿ, (ಫೆಬ್ರವರಿ 05):ಓಮನ್​​​ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್​​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ (Karnataka) ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ (UAE’s Big Ticket lucky draw) 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ. ಉಡುಪಿಯ (Udupi) ಉದ್ಯಾವರ ಮೂಲದ 33 ವರ್ಷದ ಶಂತನು ಓಮನ್​​​ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್‌ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರಿಗೆ ಅದೃಷ್ಟ ಖುಲಾಯಿಸಿದೆ.

ಸ್ನೇಹಿತನೊಂದಿಗೆ ಸೇರಿ ಟಿಕೆಟ್ ಖರೀದಿಸಿದ್ದ ಶಂತನು

ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಸೇರಿಕೊಂಡು ಜಂಟಿಯಾಗಿ ಟಿಕೆಟ್ ಖರೀದಿಸಿದ್ದರು. ಹೀಗಾಗಿ ಒಟ್ಟು 49 ಕೋಟಿ ರೂಪಾಯಿನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಸ್ವತಃ ಶಂತನು ಹೇಳಿಕೊಂಡಿದ್ದಾನೆ. ಇನ್ನು ಶಂತನು ಲಾಟರಿಯಲ್ಲಿ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಉದ್ಯಾವರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂತಸ, ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ. ಗ್ರಾಮಸ್ಥರು ಮತ್ತು ಸ್ನೇಹಿತರು ಶಂತನು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಇದನ್ನೂ ನೋಡಿ: ಕತ್ತರಿಸಿದರೂ ಸಾಯದೆ ಚಡಪಡಿಸುತ್ತಿರುವ ಮೀನು! ಮಲ್ಪೆ ಬಂದರಿನಲ್ಲಿ ಅಚ್ಚರಿ ಮೂಡಿಸಿದ ವಿಚಿತ್ರ ಘಟನೆ

ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಲೈವ್ ಡ್ರಾವನ್ನು ಸಾವಿರಾರು ಜನರು ವೀಕ್ಷಿಸುತ್ತಿದ್ದರು. ಬಹುಮಾನ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆಯೇ  ಶಂತನು, ಕಾರ್ಯಕ್ರಮ ಆಯೋಜಕರೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ‘2021ರಿಂದಲೂ ಬಿಗ್‌ ಟಿಕೆಟ್‌ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಶಂತನು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.

1992ರಲ್ಲಿ ಯುಎಇನಲ್ಲಿ ಬಿಗ್‌ ಟಿಕೆಟ್‌ ಪ್ರಾರಂಭವಾಯಿತು. ಆರಂಭದಲ್ಲಿ ಸುಮಾರು 2 ಕೋಟಿ ರೂ.ನಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರರೂ.ಗೆ ಏರಿಕೆಯಾಗಿದ್ದು, ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ಈ ಲಾಟರಿಯಲ್ಲಿ ಕರ್ನಾಟಕದ ಯುವಕನಿಗೆ ಅದೃಷ್ಟ ಖುಲಾಯಿಸಿದೆ. ಇನ್ನು ಈ ಡ್ರಾದಲ್ಲಿ ಜಾಕ್​ಪಾಟ್ ಜೊತೆಗೆ ಹಲವು ಬಹುಮಾನಗಳು ಸೇರಿದ್ದವು. ಐದು ಜನಕ್ಕೆ ತಲಾ ದಿರ್​​ಹುಂ ಬಹುಮಾನದ ಜೊತೆಗೆ ಐಷರಾಮಿ ವಾಹನಗಳನ್ನು ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್