AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಟ್ಟೆಹಕ್ಕಲು ನದಿಯಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಜನ ಸಾವು, ಇಬ್ಬರು ನಾಪತ್ತೆ

Kattehakkalu River Tragedy: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಒಟ್ಟು 14 ಜನರು ಒಂದಾಗಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದರವರು ನೀರಿಗೆ ಸಿಲುಕಿದ್ದು, ಎಂಟು ಜನರು ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರನ್ನ ರಕ್ಷಣೆ ಮಾಡಿದ್ದರೆ, ನಾಪತ್ತೆಯಾಗಿರುವ ಇನ್ನಿಬ್ಬರ ಪತ್ತೆಯಾಗಿ ಶೋಧ ಕಾರ್ಯ ಮುಂದುವರೆದಿದೆ. ಅಷ್ಟಕ್ಕೂ ಆಗಿದ್ದೇನು? ಎನ್ನುವ ಡಿಟೇಲ್ಸ್ ಇಲ್ಲಿದೆ.

ತಟ್ಟೆಹಕ್ಕಲು ನದಿಯಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಜನ ಸಾವು,  ಇಬ್ಬರು ನಾಪತ್ತೆ
Kattehakkalu River Tragedy
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:May 24, 2026 | 4:02 PM

Share

ಕಾರವಾರ, (ಮೇ 24): ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋದವರು ನೀರು ಪಾಲಾಗಿದ್ದಾರೆ.  ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 14 ಜನರು ನೀರಿನ ಸುಳಿಗೆ ಸಿಲುಕಿದ್ದು,  ಈ ಪೈಕಿ ಎಂಟು ಜನ ಸಾವನ್ನಪ್ಪಿದ್ದಾರೆ.   ಇನ್ನುಳಿದ ನಾಲ್ವರನ್ನ ರಕ್ಷಣೆ ಮಾಡಲಾಗಿದ್ದು,  ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.  ಕಪ್ಪೆ ಚಿಪ್ಪು ತೆಗೆಯಲೆಂದು ಒಟ್ಟು 14 ಜನ ಇಂದು (ಮೇ 24) ಬೆಳಗ್ಗೆ ತಟ್ಟಿಹಕ್ಕಲು ಬಳಿ ನದಿಗೆ ಹೋಗಿದ್ದರು. ಎಲ್ಲರೂ ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರು ಹೆಚ್ಚಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ.

ಮುಖ್ಯಾಂಶಗಳು

  • ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 8 ಮಂದಿ ಜಲಸಮಾಧಿ
  • ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಳಿಯ ತಟ್ಟೆಹಕ್ಕಲು ನದಿಯಲ್ಲಿ ಘಟನೆ
  • ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 14 ಜನ
  • 8 ಮಂದಿ ಸಾವು, ನಾಲ್ವರ ರಕ್ಷಣೆ, ನೀರುಪಾಲಾದ ಇಬ್ಬರಿಗಾಗಿ ಶೋಧ

8 ಜನ ಸಾವು, ನಾಲ್ವರ ರಕ್ಷಣೆ

ಇನ್ನು 14 ಜನರ ಪೈಕಿ ಎಂಟು ಜನರು ಸಾವನ್ನಪ್ಪಿದ್ದು, ನಾಲ್ವರನ್ನ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಸಾವನ್ನಪ್ಪಿದ ಎಂಟು ಜನರಲ್ಲಿ ಒರ್ವ ಪುರುಷ 7 ಜನ ಮಹಿಳೆಯರು ಎಂದು ತಿಳಿದುಬಂದಿದ್ದು, ನಾಪತ್ತೆಯಾಗಿರುವ ಇಬ್ಬರ  ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಕಪ್ಪೆಚಿಪ್ಪು ತೆಗೆಯಲು ಹೋದ 14 ಜನರ ಪೈಕಿ 8 ಮೃತದೇಹಗಳು ಪತ್ತೆಯಾಗಿದ್ದು,  ಮೃತದೇಹಗಳನ್ನ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ, ಇನ್ನುಳಿದ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಕಪ್ಪೆಚಿಪ್ಪು ತೆಗೆಯಲು ಹೋದ ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ. ಎಲ್ಲರೂ ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Sun, 24 May 26

Follow Us
Suraj Mahaveer Utture
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More