ಹೊನ್ನಾವರ ಇಕೋ ಬೀಚ್​ಗೆ ಹ್ಯಾಟ್ರಿಕ್ ಬ್ಲ್ಯೂ ಪ್ಲ್ಯಾಗ್ ಮಾನ್ಯತೆ

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಇಕೋ ಬೀಚ್​ಗೆ​ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದ್ದು, 3ನೇ ಬಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೊನ್ನಾವರ ಇಕೋ ಬೀಚ್​ಗೆ ಹ್ಯಾಟ್ರಿಕ್ ಬ್ಲ್ಯೂ ಪ್ಲ್ಯಾಗ್ ಮಾನ್ಯತೆ
ಹೊನ್ನಾವರದ ಇಕೋ ಬೀಚ್​
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 20, 2022 | 7:44 PM

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಇಕೋ ಬೀಚ್ (Honnavar Eco Beach)​ಗೆ​ ಬ್ಲೂ ಫ್ಲ್ಯಾಗ್ (blue flag) ಮಾನ್ಯತೆ ಲಭಿಸಿದ್ದು, 3ನೇ ಬಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಕನ್ನಡ ಜಿಲ್ಲಾಡಳಿತದಿಂದ ಉತ್ತಮ ನಿರ್ವಹಣೆ ಮಾಡಲಾಗಿದೆ. ತೌಕ್ತೆ ಚಂಡಮಾರುತ, ಪ್ರವಾಹದಿಂದ ಬೀಚ್​ ಸೇರಿದಂತೆ ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆ ವಸ್ತುಗಳು ಹಾಳಾಗಿತ್ತು. ದುರಸ್ತಿ ನಡೆಸಿ ಕಡಲ ತೀರವನ್ನು ಜಿಲ್ಲಾಡಳಿತ ಸುಂದರವಾಗಿಸಿದ್ದು, ಈಗ ಮತ್ತೆ ಕೇಂದ್ರ ತಂಡದಿಂದ ಇಕೋ ಬೀಚ್ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದ್ದು, ಈ ಬಾರಿಯೂ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರಾವಳಿ ಜಿಲ್ಲೆ ಉತ್ತರಕನ್ನಡದ ಹೊನ್ನಾವರ ತಾಲ್ಲೂಕಿನ ಕಾಸರಕೋಡ್‌ನಲ್ಲಿ ಜಿಲ್ಲಾಡಳಿತವು ಇಕೋ ಬೀಚ್​​ನ್ನು ನಿರ್ಮಾಣ ಮಾಡಿತ್ತು. ಪರಿಸರ ಸ್ನೇಹಿ ಜೊತೆಗೆ ಪ್ರವಾಸಿಗರುನ್ನು ಸೆಳೆಯಲು ಇಕೋ ಬೀಚ್ ನಿರ್ಮಾಣ ಮಾಡಲಾಗಿದೆ.

ಡೆನ್ಮಾರ್ಕ್‌ನ ಕೋಪನ್‌ ಹೆಗನ್‌ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಈ ಮನ್ನಣೆಯನ್ನು ನೀಡುತ್ತದೆ. ಈ ಹೆಗ್ಗಳಿಕೆಯನ್ನು ಪಡೆದುಕೊಳ್ಳಲು ಸ್ಥಳೀಯ ಆಡಳಿತವು ಕಡಲತೀರದ ಸ್ವಚ್ಛತೆ, ಅಲ್ಲಿನ ನೀರಿನ ಗುಣಮಟ್ಟ, ಪರಿಸರ ಸ್ನೇಹಿ ನಿರ್ಮಾಣಗಳು 33 ವಿಭಾಗಗಳಲ್ಲಿ ನಿಗದಿ ಮಾಡಲಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಕಾಸರಕೋಡಿನ ಕಡಲತೀರದ ‘ಬ್ಲೂ ಫ್ಕ್ಯಾಗ್’ ನ್ನು 2020ರ ಡಿ. 28ರಂದು ಉದ್ಘಾಟಿಸಲಾಗಿತ್ತು. ಇದೇ ರೀತಿ, ಉಡುಪಿ ಜಿಲ್ಲೆಯ ಪಡುಬಿದ್ರಿ ಕಡಲತೀರಕ್ಕೂ ಮನ್ನಣೆ ನೀಡಲಾಗಿತ್ತು. ಅಲ್ಲಿನ ಕಡಲತೀರ ಕೂಡ ಈ ವರ್ಷವೂ ‘ಬ್ಲೂ ಫ್ಲ್ಯಾಗ್’ ಪಡೆದುಕೊಂಡಿದೆ.

ವಿಶೇಷ ಅಂದರೆ ಹೊನ್ನಾವರದ ಇಕೋ ಬೀಚ್ ಪ್ರವಾಸಿಗರು ಭೇಟಿ ನೀಡಲು ಬಹಳ ಅನುಕೂಲರವಾದ ವಾತಾವರಣ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗೆ ಆಟದ ವಸ್ತುಗಳು, ಸುಂದರ ವಿಹಂಗಮ ನೋಟ ಎಲ್ಲವೂ ಅದ್ಬುತವಾಗಿದೆ ಹೀಗಾಗಿ ಈ ಎಲ್ಲ ಮಾನದಂಡಗಳ ಆದಾರದ ಮೇಲೆ ಮತ್ತೆ ಬೀಚ್‌ಗೆ ಬ್ಲೂ ಪ್ಲ್ಯಾಗ್ ಮಾನ್ಯತೆ ಸಿಕ್ಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:28 pm, Thu, 20 October 22