ಬೀದಿ ನಾಯಿಗಳನ್ನು ಅಮಾನುಷವಾಗಿ ಎಳೆದೊಯ್ದು ಕಾಡಿಗೆ ಬಿಟ್ಟ ಸಿಬ್ಬಂದಿ: ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಿವೆ ಎಂದು ಪ್ರಾಣಿ ಪ್ರಿಯರ ಆಕ್ರೋಶ
ಟಾಟಾ ಏಸ್ ಗಾಡಿಯಲ್ಲಿ ಸುಮಾರು 80-90 ಬೀದಿ ನಾಯಿಗಳನ್ನು ಕೊಂಡೊಯ್ದು ಕಾಡಿಗೆ ಬಿಟ್ಟು ಬಂದಿದ್ದಾರೆ. ಇದರಿಂದಾಗಿ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾರವಾರ: ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪುರಸಭೆಯಿಂದ ಅಮಾನವೀಯ ಕೃತ್ಯವೊಂದು ನಡೆದು ಹೋಗಿದೆ. ಪುರಸಭೆ ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ ಬೀದಿ ನಾಯಿಗಳನ್ನು ಅಮಾನುಷವಾಗಿ ಎಳೆದೊಯ್ದು ಕಾಡಿಗೆ ಬಿಟ್ಟು ಕಾಡಿನ ಪ್ರಾಣಿಗಳಿಗೆ ನಾಯಿಗಳನ್ನ ಆಹಾರವನ್ನಾಗಿಸಿದ್ದಾರೆ.
ಟಾಟಾ ಏಸ್ ಗಾಡಿಯಲ್ಲಿ ಸುಮಾರು 80-90 ಬೀದಿ ನಾಯಿಗಳನ್ನು ಕೊಂಡೊಯ್ದು ಕಾಡಿಗೆ ಬಿಟ್ಟು ಬಂದಿದ್ದಾರೆ. ಇದರಿಂದಾಗಿ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪುರಸಭೆ ಸಿಬ್ಬಂದಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಿ ನೀರು, ಆಹಾರ ಹಾಗೂ ಆಶ್ರಯ ಒದಗಿಸಬೇಕಿತ್ತು. ಆದರೆ, Prevention of Cruelty To Animal Act-1960 ಕಾನೂನು ಉಲ್ಲಂಘನೆ ಮಾಡಿ, ರಾಕ್ಷಸರಂತೆ ಬೀದಿ ನಾಯಿಗಳನ್ನು ಎಳೆದೊಯ್ದು ಹಳಿಯಾಳದ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ. ನೀರು, ಆಹಾರ ಒದಗಿಸದೇ ಕಾಡು ಪ್ರಾಣಿಗಳಿಗೆ ಆಹಾರವಾಗಲು ದಟ್ಟ ಕಾಡಿನಲ್ಲಿ ನಾಯಿಗಳನ್ನು ಬಿಟ್ಟಿದ್ದಾರೆ. ನಾಯಿಗಳಿಗೆ ಯಾವುದೇ ಸೋಂಕುಗಳಿದ್ರೂ ಅದು ಕಾಡು ಪ್ರಾಣಿಗಳಿಗೆ ಹಬ್ಬುವ ಸಾಧ್ಯತೆ ಇರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Viral Video : ಕೋತಿಯನ್ನು ಬೀಳಿಸಲೆತ್ನಿಸಿದ್ದಕ್ಕೆ ಕೋಳಿಗೆ ಕಪಾಳಮೋಕ್ಷ
ಇನ್ನು ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಕೃತ್ಯ ಹರಿದಾಡ್ತಿದೆ. ಹಳಿಯಾಳದ ಸ್ಥಳೀಯರು ನೀಡಿದ ದೂರಿನ ಹಿನ್ನೆಲೆ ಮುಖ್ಯ ಪಶುವೈದ್ಯಾಧಿಕಾರಿಯಿಂದ ಹಳಿಯಾದ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿರುವ ಹಿನ್ನೆಲೆ ಸ್ಪಷ್ಟೀಕರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಎನಿಮಲ್ ಹೆಲ್ಪ್ ಲೈನ್‌ಗೂ ಹಳಿಯಾಳದ ಸ್ಥಳೀಯರು ದೂರು ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ