AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡ: ನೀರಾವರಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ನೂರಾರು ಎಕರೆ ಕೃಷಿ ಜಮೀನಿಗೆ ನುಗ್ಗಿದ ಉಪ್ಪು ನೀರು

ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದಾಗಿ ನೂರಾರು ಎಕರೆ ಕೃಷಿ ಜಮೀನುಗಳಿಗೆ ಉಪ್ಪು ನೀರು ನುಗ್ಗಿ, ಕುಡಿಯುವ ನೀರಿನ ಮೂಲಗಳೂ ಉಪ್ಪು ಮಿಶ್ರಿತವಾದ ಘಟನೆ ಕುಮಟಾ ತಾಲೂಕಿನ ಊರುಕೇರಿ ಭಾಗದಲ್ಲಿ ನಡೆದಿದೆ.

ಉತ್ತರ ಕನ್ನಡ: ನೀರಾವರಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ನೂರಾರು ಎಕರೆ ಕೃಷಿ ಜಮೀನಿಗೆ ನುಗ್ಗಿದ ಉಪ್ಪು  ನೀರು
ಬಾವಿಯಲ್ಲಿ ,ಮಿಶ್ರಣವಾದ ಉಪ್ಪು ನೀರು
ಕಿರಣ್ ಹನುಮಂತ್​ ಮಾದಾರ್
|

Updated on: Jun 20, 2023 | 1:15 PM

Share

ಉತ್ತರ ಕನ್ನಡ: ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದಾಗಿ ನೂರಾರು ಎಕರೆ ಕೃಷಿ ಜಮೀನುಗಳಿಗೆ ಉಪ್ಪು ನೀರು ನುಗ್ಗಿ, ಕುಡಿಯುವ ನೀರಿನ ಮೂಲಗಳೂ ಉಪ್ಪು ಮಿಶ್ರಿತವಾದ ಘಟನೆ ಕುಮಟಾ(Kumta) ತಾಲೂಕಿನ ಊರುಕೇರಿ ಭಾಗದಲ್ಲಿ ನಡೆದಿದೆ. ನವಿಲಗೋಣ ವ್ಯಾಪ್ತಿಯ ಪೇಟೆಕಟ್ಟು, ಕಟ್ಟಿನ ಬಾಂದಾರ್ ತೆರವುಗೊಳಿಸಿದ್ದರಿಂದ ಅಪಾರ ಪ್ರಮಾಣದಲ್ಲಿ ಸಂಗ್ರಹಗೊಂಡ ಉಪ್ಪುನೀರು ಹತ್ತಾರು ಗ್ರಾಮಗಳ ಹೊರವಲಯಕ್ಕೆ ನುಗ್ಗಿದೆ. ಪರಿಣಾಮ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಕೃಷಿ ಕಾರ್ಯಕ್ಕೂ ತೊಂದರೆಯಾಗಿದ್ದು, ಆ ಭಾಗದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಕುಮಟಾ ತಾಲೂಕಿನ ಊರುಕೇರಿ, ಕೋನಳ್ಳಿ, ಗುಮ್ಮನಗುಡಿ ಸೇರಿದಂತೆ ಹಲವು ಭಾಗದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಉಪ್ಪು ನೀರು ಆವರಿಸಿ ಜನರಿಗೆ ಸಂಕಷ್ಟ ತಂದೊಡ್ಡಿದೆ. ನೀರಿನ ಸಮಸ್ಯೆ ಎದುರಾಗಿರುವ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Rock Salt Water: ಕಲ್ಲುಪ್ಪು ಮಿಶ್ರಿತ ನೀರನ್ನು ನಿತ್ಯ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಲಾಭ?

ಅಂತರ್ಜಲದಲ್ಲಿ ಉಪ್ಪುನೀರು; ಕುಡಿಯುವ ನೀರಿಗೆ 3 ಕಿಮೀ ಅಲೆಯುವ ಗ್ರಾಮಸ್ಥರು

ಉತ್ತರ ಕನ್ನಡ: ಒಂದು ಕಡೆ ಹರಿಯುತ್ತಿರುವ ಕಾಳಿ ನದಿಯ ಉಪ್ಪು ಮಿಶ್ರಿತ ನೀರು, ಇನ್ನೊಂದೆಡೆ ತಲೆಯ ಮೇಲೆ ಕೊಡಹೊತ್ತು ಅದೇ ನದಿಯಲ್ಲಿ ಸಾಗುತ್ತಿರುವ ಮಹಿಳೆಯರು. ಈ ದೃಶ್ಯಗಳು ಕಂಡು ಬುರುವುದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ. ಇಲ್ಲಿಯ ಭಾಗವಾಡಾ, ಚಾಮಕುಳಿವಾಡಾ, ಅಂಬೆಜೂಗ, ಝಾಡಕಿ ಗ್ರಾಮದ ಮಹಿಳೆಯರು ಒಂದು ಕೊಡ ಕುಡಿಯುವ ನೀರನ್ನು ತರಲು 3 ಕಿಲೋಮೀಟರ್​ಗೂ ಹೆಚ್ಚು ದೂರ ಕಲ್ಲು ಮುಳ್ಳಿನ ಹಾದಿಯಲ್ಲಿ ಸಂಚರಿಸಿ ಕಾಳಿ ನದಿಯ ಹಿನ್ನೀರು ಹರಿಯುವ ಅಂಬೆಜೂಗ ಹಳ್ಳ ದಾಟಿ ದಿಗಾಳಿ ಗ್ರಾಮದ ಸಾರ್ವಜನಿಕ ಬಾವಿಯಿಂದ ನೀರು ತರಬೇಕಾದ ಪರಿಸ್ಥಿತಿ ಕಳೆದ ನಾಲ್ಕು ವರ್ಷಗಳಿಂದ ಉದ್ಭವಿಸಿದೆ.

ಇನ್ನು ಇಲ್ಲಿನ ಮಹಿಳೆಯರು, ಮಕ್ಕಳು ನಿತ್ಯವು ಜೀವ ಒತ್ತೆಯಿಟ್ಟು ಹಳ್ಳ ದಾಟಿ ನೀರು ತರುವುದು ಮನ ಕಲಕುವಂತಿದೆ. ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡುವುದಕ್ಕೆ ಸೀಮಿತವಾಗಿದ್ದು, ಅಂಬೇಜೂಗ ಹಳ್ಳಕ್ಕೆ ಸೇತುವೆ ನಿರ್ಮಿಸಿ ಕೊಡಬೇಕು. ಅಲ್ಲದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು..

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ