ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ ಹತ್ತು ಸಾವಿರ ಕೋಟಿ ನೀಡುತ್ತೇನೆ : ಸಿಎಂ ಬೊಮ್ಮಾಯಿ

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು ಉತ್ತಮ ಕೆಲಸ ಎಂದು ವಿಜಯಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ ಹತ್ತು ಸಾವಿರ ಕೋಟಿ ನೀಡುತ್ತೇನೆ : ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9kannada Web Team

| Edited By: Vivek Biradar

Sep 30, 2022 | 3:54 PM

ವಿಜಯಪುರ: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ (Siddeshwar Swamiji) ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು ಉತ್ತಮ ಕೆಲಸ. ಈ ಆಸ್ಪತ್ರೆ 1008 ಬೆಡ್ ಸಾಮರ್ಥ್ಯ ಹೊಂದುವೆ ಆಸ್ಪತ್ರೆಯಾಗಲಿ. ಸ್ವಾಮೀಜಿ ಹೆಸರು ಕೇಳಿದರೆ ಸಾಕು ಅರ್ಧ ಅನಾರೋಗ್ಯ ಓಡಿ ಹೋಗುತ್ತದೆ ಎಂದು ವಿಜಯಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bsavaraj Bommai) ಅವರು ಹೇಳಿದ್ದಾರೆ. ಸಿಎಂ ಬೊಮ್ಮಾಯಿ ವಿಜಯಪುರದಲ್ಲಿ (Vijaypura) ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಇಂದು 400ಕ್ಕೂ ಹೆಚ್ಚು ಕೋಟಿ ರೂಪಾಯಿಯ ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ಮಾಡಿದ್ದೇವೆ. ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಹತ್ತು ಸಾವಿತ ಕೋಟಿ ರೂಪಾಯಿ ನೀಡುತ್ತೇನೆ ಎಂದು ಘೋಷಿಸಿದರು.

ದ್ರಾಕ್ಷಿ ಬೆಳೆಗಾರರಿಗೆ ಅನಕೂಲವಾಗಲು 35 ಕೋಟಿ ನೀಡಿದ್ದೇವೆ. ಇನ್ನೂ 100 ಕೋಟಿಗೂ ಅಧಿಕ ಹಣ ನೀಡುವೆ. ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತೇವೆ. ಮೂರು ತಿಂಗಳ ಒಳಗೆ ವಿಜಯಪುರ ಹಾಗೂ‌ ಕಲಬುರಗಿ ಜಿಲ್ಲೆಯಲ್ಲಿ ಟೆಕ್ಸಟೈಲ್ ಪಾರ್ಕ್ ಸ್ಥಾಪನೆ ಮಾಡುತ್ತೇವೆ. ಇದರಿಂದ ಇಪ್ಪತೈದು‌ ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ವೆಲೋ ಡ್ರಮ್ ಮೈದಾನಕ್ಕೆ ಅನಕೂಲ ಮಾಡುತ್ತೇವೆ. ಜನವರಿಯಲ್ಲಿ ವಿಜಯಪುರ ವಿಮಾನ ನಿಲ್ದಾಣ ‌ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ‌ಮೋದಿ ಅವರನ್ನು ಕರೆಯಿಸಿ ಉದ್ಘಾಟನೆ ಮಾಡಿಸುತ್ತೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಟೂರಿಸಂ ಯೋಜನೆ ಜಾರಿ ಮಾಡಿ ಸ್ಥಳಿಯ ಯುವಕರಿಗೆ ಉದ್ಯೋಗ ನೀಡುತ್ತೇವೆ. ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಜಿಲ್ಲೆಯ ನಮ್ಮ ಶಾಸಕರ ವಿಶ್ವಾಸದ ಬಂಧನದಲ್ಲಿದ್ದೇನೆ. ಯಾವುದೇ ಸರ್ಕಾರ ಮಾಡದ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಯೋಜನೆ ಜಾರಿ ಮಾಡಿ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ಹಿಂದಿನ‌ ದಿನಗಳಲ್ಲಿ ಅಧಿಕಾರ ನಡೆಸಿದವರು ಏನೂ ಮಾಡಿಲ್ಲಾ. ದೇತು ದೇತು ಎಂದು ಹೇಳುತ್ತಿದ್ದರು. ಬಳಿಕ ದಿಲಾತು ದಿಲಾತು ಎಂದರು. ಅದಾದ ನಂತರ ದೇನೆವಾಲೋಂಕಾ ದಿಖಾತಾಹುಂ ಎಂದು ಹೇಳಿ ಏನೂ ಮಾಡಿಲ್ಲಾ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದರು.

ರೈತರ ಮಕ್ಕಳಿಗೆ ಮಾತ್ರವಲ್ಲ, ದುಡಿಯೋ ವರ್ಗದ ಎಲ್ಲ ಜನರಿಗೆ ವಿದ್ಯಾನಿಧಿ ಯೋಜನೆ ನೀಡಲಾಗುತ್ತದೆ. ದುಡ್ಡೇ ಡೊಡ್ಡಪ್ಪ ಅಲ್ಲಾ ದುಡಿಮೆಯೇ ದೊಡ್ಡಪ್ಪ. ಒಳ್ಳೆಯ ಕೆಲಸಕ್ಕೆ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಇರಲಿ. ಮೈಸೂರಿನಲ್ಲಿ ಪ್ರಧಾನಿ ಮೋದಿ ಬಗ್ಗೆ ಸಿದ್ದೇಶ್ವರ ಸ್ವಾಮೀಜಿ‌ ಮಾತನಾಡಿದ್ದರು. ಅದರಿಂದ ನನಗೆ ಸ್ಪೂರ್ತಿ ಬಂದಿದೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ‌ನೆಲ ಸ್ಪರ್ಶ ಮಾಡಿದಾಗ‌ ವಿಶೇಷ ಅನುಭವ, ಸ್ಪೂರ್ತಿ ಸಿಕ್ಕಿದೆ. ಸಿದ್ದೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ರಾಜ್ಯಕ್ಕೆ ಹಾಗೂ‌ ಜನರಿಗೆ ಒಳಿತಾಗೋ ಕೆಲಸ ಮಾಡುತ್ತೇವೆ ಎಂದು ಆಶಿರ್ವಾದ ಪಡೆದರು.

ನವ ಭಾರತಕ್ಕಾಗಿ, ನವ ರ್ನಾಟಕಕ್ಕಾಗಿ ವಿಜಯಪುರ ಜಿಲ್ಲೆಯ ಪಾತ್ರ ದೊಡ್ಡದಿರುತ್ತದೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಉತ್ತರ ಕರ್ನಾಟಕದ ಹುಲಿ ಹಾಗೂ ವಿಯಪುರದಹುಲಿ ಎಂದು ಶಾಸಕ ಯತ್ನಾಳರನ್ನು ಸಿಎಂ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.

ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸ ಶಾಶ್ವತವಾಗಿ ಇರಬೇಕು: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸ ಶಾಶ್ವತವಾಗಿ ಇರಬೇಕು. ರಾಜಕೀಯ ಜೀವನದಲ್ಲಿ ಸ್ಥಾನಮಾನ ಇರುತ್ತೆ ಹೋಗುತ್ತೆ. ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಇರಬೇಕು ಎಂದು ವಿಜಯಪುರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ. ದೇಶದ ಜಿಡಿಪಿ ಮಾತ್ರ ಅಲ್ಲ ಜನರ ಆರೋಗ್ಯವೂ ಮುಖ್ಯ. ಈ ನಿಟ್ಟಿನಲ್ಲಿ ಶಾಸಕ ಯತ್ನಾಳ್​ ಒಳ್ಳೆಯ ಕೆಲಸ ಮಾಡಿದ್ದಾರೆ. ಇತರೆ ದೇಶಗಳ ಆಡಳಿತದಲ್ಲಿ ಭಾರತದ ಆಡಳಿತ ಉಲ್ಲೇಖ ಆಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕೊವಿಡ್ ಲಸಿಕೆ ನೀಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದೇವೆ. ಭಾರತ 200 ಕೋಟಿ ಕೊವಿಡ್ ಲಸಿಕೆ ನೀಡಿ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಭಾರತ ಪ್ರಪಂಚದಲ್ಲೇ ನಂಬರ್ ಒನ್ ಆಗುತ್ತೆ. 3 ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತೆ. ರೈಲ್ವೆ, ಆರೋಗ್ಯ, ಸಾರಿಗೆ ಸೇವೆಯನ್ನೂ ಉತ್ತಮಗೊಳಿಸಲಾಗುತ್ತದೆ. ಭಾರತ ಸರ್ಕಾರ ದೆಹಲಿ, ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ಜಿಲ್ಲೆಯನ್ನೂ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಎಲ್ಲಿಂದಲೋ ಬಂದವರು ಬಾಂಬ್ ಹಾಕುತ್ತಿದ್ದರು, ಈಗ ಹಾಗಿಲ್ಲ. ಪಾಕಿಸ್ತಾನ ನೆಲಕ್ಕೆ ಹೋಗಿ ಸ್ಟ್ರೈಕ್ ಮಾಡುವಷ್ಟು ನಾವು ಬಲಿಷ್ಠರಾಗಿದ್ದೇವೆ. ಸೇವಾರ್ಥವಾಗಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹೆಸರಲ್ಲಿ ನಿರ್ಮಾಣ ಮಾಡಿದ್ದು ಶ್ಳಾಘನೀಯ ಕೆಲಸವಾಗಿದೆ.

ಮುಂದಿನ ದಿನಗಳಲ್ಲಿ ಭಾರತ ಪ್ರಪಂಚದಲ್ಲಿ ನಂಬರ್ ಒನ್ ಆಗಲಿದೆ. ಮೂರು‌ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜು ನೀಡಲಾಗುತ್ತದೆ. ರಸ್ತೆ ನಿರ್ಮಾಣದಲ್ಲೂ ಸಾಧನೆ ಮಾಡಲಾಗುತ್ತಿದೆ. ರೇಲ್ವೆ ಆರೋಗ್ಯ ಹಾಗೂ ಸಾರಿಗೆ ಸೇವೆ ಉತ್ತಮ ಮಾಡಲಾಗುತ್ತದೆ. 2047ರಲ್ಲಿ ದೇಶ ಅಭಿವೃದ್ಧಿ ಹೊಂದಿದ ದೇಶ ಆಗಲಿದ್ದು, ಇದು ಪ್ರಧಾನಿ ಮೋದಿ ಅವರ ಆಶಯವಾಗಿದೆ. ಅದಕ್ಕೂ ಮುನ್ನವೇ ನಾವು ಅಭಿವೃದ್ಧಿ ಹೊಂದುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada