AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರದ ಸಾರವಾಡದಲ್ಲಿ ವಿನಿಮಯ ಪದ್ಧತಿ ಮೂಲಕ ಮಾರುಕಟ್ಟೆಯಲ್ಲಿ ತರಕಾರಿ, ಇತರೆ ವಸ್ತುಗಳ ಖರೀದಿ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಇಂದಿಗೂ ವಿನಿಮಯ ಪದ್ಧತಿ ಮೂಲಕ ತರಕಾರಿ, ಇತರೆ ವಸ್ತುಗಳ ಮಾರಾಟ ಮಾಡಲಾಗುತ್ತದೆ. ಅರೇ ಇಂಥಾ ಕಾಲದಲ್ಲಿಯೂ ಇದು ಸಾಧ್ಯಾನಾ? ಅಂತೀರಾ ಹಾಗಾದರೆ ಈ ಸ್ಟೋರಿ ನೋಡಿ.

ವಿಜಯಪುರದ ಸಾರವಾಡದಲ್ಲಿ ವಿನಿಮಯ ಪದ್ಧತಿ ಮೂಲಕ ಮಾರುಕಟ್ಟೆಯಲ್ಲಿ ತರಕಾರಿ, ಇತರೆ ವಸ್ತುಗಳ ಖರೀದಿ
ವಿನಿಮಯ ಪದ್ಧತಿ ಮಾರುಕಟ್ಟೆ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Nov 12, 2023 | 1:26 PM

Share

ವಿಜಯಪುರ ನ.12: ಅಲೆಮಾರಿಯಾಗಿ ಅಲೆದಾಡುತ್ತಾ ಮನುಷ್ಯ ನಾಗರಿಕ ಸಮಾಜದತ್ತ ಮುಖ ಮಾಡಿದಾಗ ಸಹಬಾಳ್ವೆ ಹಾಗೂ ವಿನಿಮಯ ಪದ್ಧತಿ (Exchange system) ಮೂಲಕ ಜೀವನ ಮಾಡುತ್ತಿದ್ದ. ನಗನಾಣ್ಯ ನೋಟುಗಳು ಇಲ್ಲದ ಕಾಲದಲ್ಲಿ ಪರಸ್ಪರ ವಿನಿಮಯ ಪದ್ಧತಿ ಮೂಲಕ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದ. ಅವಶ್ಯಕ ವಸ್ತುಗಳನ್ನು ಪಡೆಯಲು ತನ್ನ ಬಳಿಯಿದ್ದ ವಸ್ತುಗಳನ್ನು ನೀಡಿ, ಪಡೆಯುತ್ತಿದ್ದ. ಇಂಥ ಪದ್ಧತಿ ಆಧುನಿಕತೆ ಬೆಳೆದಂತೆಲ್ಲಾ ಮಾಯವಾಗಿದೆ. ಹಣವಿದ್ದರೆ ಸಾಕು ಎಲ್ಲವೂ ಸಿಗುತ್ತದೆ ಎಂಬಂತಾಗಿದೆ. ಇಷ್ಟೆಲ್ಲಾ ಆಧುನಿಕತೆ ವೈಜ್ಞಾನಿಕತೆಯ ಮಧ್ಯೆ ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ (Babaleshwara) ತಾಲೂಕಿನ ಸಾರವಾಡ ಗ್ರಾಮದಲ್ಲಿ ಇಂದಿಗೂ ವಿನಿಮಯ ಪದ್ಧತಿ ಮೂಲಕ ತರಕಾರಿ, ಇತರೆ ವಸ್ತುಗಳ ಮಾರಾಟ ಮಾಡಲಾಗುತ್ತದೆ. ಅರೇ ಇಂಥಾ ಕಾಲದಲ್ಲಿಯೂ ಇದು ಸಾಧ್ಯಾನಾ? ಅಂತೀರಾ ಹಾಗಾದರೆ ಈ ಸ್ಟೋರಿ ನೋಡಿ.

ಸಾರವಾಡ ಗ್ರಾಮದಲ್ಲಿ ತಲೆತಲೆಮಾರುಗಳಿಂದೂ ನಡೆಯುತ್ತಿರುವ ವಾರದ ಸಂತೆಯಲ್ಲಿ ನೀವು ಜೋಳ ನೀಡುವ ಮೂಲಕ ಅಗ್ಯತ್ಯವಾದ ಇತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ. ಇಲ್ಲಿ ಹಣದ ಬದಲಾಗಿ ಜೋಳವೇ ಪ್ರಮುಖವಾದುದಾಗಿದೆ. ಆಧುನಿಕತೆಗೂ ಮುಂಚೆ ವಸ್ತುಗಳನ್ನು ಪರಸ್ಪರ ಹೇಗೆ ವಿನಿಮಯ ಮಾಡಿಕೊಂಡು ಜೀವನ ಮಾಡಲಾಗುತ್ತಿತ್ತೋ ಅದೇ ಮಾದರಿಯಲ್ಲಿ ಸಾರವಾಡ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯುವ ಮಾರುಕಟ್ಟೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ.

ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆವರೆಗೆ ನಡೆಯುವ ಈ ಸಂತೆಯಲ್ಲಿ ಏನೇ ವಸ್ತುಗಳು ಬೇಕೆಂದರೆ ಅದಕ್ಕೆ ಪ್ರತಿಯಾಗಿ ಜೋಳವನ್ನು ನೀಡಬೇಕು. ಇಲ್ಲಿ ಹಣ ಪ್ರಮುಖ ಪಾತ್ರ ವಹಿಸಿಲ್ಲ. ಇಂಥಹ ವಿಶಿಷ್ಟ ಸಂತೆ ನಡೆಯೋದು ಸಾರವಾಡ ಗ್ರಾಮದಲ್ಲಿ ಮಾತ್ರ ಎಂಬುದೂ ಸಹ ವಿಶೇಷತೆ.

ಇದನ್ನೂ ಓದಿ: ವಿಜಯಪುರ: ಸಿದ್ದೇಶ್ವರ ಶ್ರೀ ಅಗಲಿ ಜನವರಿ 2ಕ್ಕೆ 1 ವರ್ಷ: ಗುರುವಂದನಾ ಕಾರ್ಯಕ್ರಮ ಆಯೋಜಿಸಲು ತೀರ್ಮಾನ; ಎಂಬಿ ಪಾಟೀಲ್​

ಇಂದಿನ ಕಾಲದಲ್ಲಿ ಹಣವಿಲ್ಲದೆ ಯಾವ ಕೆಲಸ ಕಾರ್ಯಗಳೂ ಸಹ ಆಗಲ್ಲ. ಹಂತದರಲ್ಲಿ ಸಾರವಾಡದ ಸಂತೆಯಲ್ಲಿ ಹಣಕ್ಕಿಂತ ಜೋಳಕ್ಕೆ ಹೆಚ್ಚು ಬೇಡಿಕೆಯಿದೆ. ಸಾರವಾಡ ಗ್ರಾಮದ ಭಾಗದಲ್ಲಿ ಬೆಳೆದ ಜೋಳ ರುಚಿಕರ ಹಾಗೂ ಆರೋಗ್ಯಕರ ಎಂಬ ಮಾತಿದೆ. ಜೊತೆಗೆ ಬರದ ಕಾರಣ ಜೋಳದ ದರವೂ ಏರಿಕೆಯಾಗಿದೆ. ಜೋಳದ ದರ ಏರಿಕೆಯಾಗದ ಕಾಲದಲ್ಲೂ ಇಲ್ಲಿನ ಸಂತೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ.

ಒಂದೊಂದು ತರಕಾರಿಗೂ ಇಂತಿಷ್ಟು ಜೋಳ ಎಂದು ನಿಗದಿಯಾಗಿದೆ. ಹಣ್ಣಿರಲಿ ತರಕಾರಿ ಇರಲಿ ಅಥವಾ ಇತರೆ ಯಾವುದೇ ವಸ್ತುವಿರಲಿ ಅದಕ್ಕೆ ಇಂತಿಷ್ಟು ಜೋಳವೆಂದು ತೀರ್ಮಾನ ಮಾಡಿ ಜೋಳ ನೀಡುವ ಮೂಲಕ ಕೊಂಡುಕೊಳ್ಳುತ್ತಾರೆ. ಸಮಪಾಲು, ಎರಡು ಪಟ್ಟು ಪಾಲು, ಎರಡು ಪಟ್ಟು ಪಾಲು ಜೋಳ ನೀಡಲಾಗುತ್ತದೆ. ತೂಕದ ಜೊತೆಗೆ ಅಳತೆಯ ಮೇಲೂ ಇಲ್ಲಿ ಜೋಳ ವಿನಿಮಯವಾಗುತ್ತದೆ.

ಸಾರವಾಡದ ಸಂತೆಗೆ ಜೋಳವನ್ನು ಸಂಗ್ರಹಿಸಲು ವಿವಿಧ ಗ್ರಾಮಗಳ ಜನರು ಸಹ ತರಕಾರಿ ಹಣ್ಣುಗಳು ಸೇರಿದಂತೆ ಇತರೆ ವಸ್ತುಗಳನ್ನು ತಂದು ವಿನಿಮಯ ಪದ್ಧತಿಯ ಮೂಲಕ ಮಾರಾಟ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಹೇಗೆ ವಿನಿಮಯ ಪದ್ಧತಿ ಮೂಲಕ ವ್ಯಾಪಾರ ವಹಿವಾಟು ನಡೆಯುತ್ತಿತ್ತೋ ಹಾಗೇ ನಮ್ಮೂರಿನ ಸಂತೆಯೂ ನಡೆಯುತ್ತದೆ ಎಂದು ಗ್ರಾಮದ ಜನರು ಹೆಮ್ಮೆ ಪಡುತ್ತಾರೆ.

ವಿಜಯಪುರ ಜಿಲ್ಲೆಯಲ್ಲಿ ಸಾರಾವಾಡದ ಸಂತೆಯನ್ನು ಜೋಳದ ಸಂತೆಯೆಂದು, ವಿನಿಮಯ ಪದ್ಧತಿಯ ಸಂತೆಯೆಂದು ಕರೆಯುತ್ತಾರೆ. ಎಷ್ಟೇ ಆಧುನಿಕತೆ ಬೆಳೆದರೂ ಸಹ ಹಿಂದಿನ ಪದ್ಧತಿಯನ್ನು ಇಲ್ಲಿ ಉಳಿಸಿಕೊಂಡು ಬರಲಾಗಿದೆ. ಗ್ರಾಮದ ಜನರಷ್ಟೇಯಲ್ಲಾ ಸುತ್ತಮುತ್ತಲ ಗ್ರಾಮಗಳ ಜನರೂ ಸಹ ಇದೇ ಪದ್ಧತಿಯಲ್ಲಿ ಈ ಮಾರುಕಟ್ಟೆಯಲ್ಲಿ ಭಾಗಿಯಾಗುತ್ತಾರೆ. ತೀರಾ ಅನಿವಾರ್ಯವೆಂಬಂತೆ ರೈತರಲ್ಲದವರು, ನೌಕರರು ಜೋಳದ ಬದಲಾಗಿ ಹಣಕಾಸಿನ ಮೂಲಕ ವ್ಯವಹಾರ ಮಾಡುತ್ತಾರೆ. ಆದರೆ ಅದು ತೀರಾ ಕಡಿಮೆ ಪ್ರಮಾಣದಲ್ಲಿ ನಡೆಯುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ