ಟ್ರ್ಯಾಕ್ಟರ್-ಸರ್ಕಾರಿ ಬಸ್ ಡಿಕ್ಕಿ: 20ಕ್ಕೂ ಹೆಚ್ಚು ಜನರಿಗೆ ಗಾಯ, ಅಪಘಾತವಾಗಿ 2 ಗಂಟೆ ಬಳಿಕ ಬಂದ ಆಂಬ್ಯುಲೆನ್ಸ್
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಬಳಿ ಟ್ರ್ಯಾಕ್ಟರ್ ಹಾಗೂ ಸರ್ಕಾರಿ ಬಸ್ ನಡುವೆ ಡಿಕ್ಕಿಯಾದ ಘಟನೆ ನಡೆದಿದೆ. ಈ ವೇಳೆ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಕೂಡಲೇ ಆ್ಯಂಬುಲೆನ್ಸ್ನಲ್ಲಿ ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಜಯಪುರ, ಡಿ.02: ಟ್ರ್ಯಾಕ್ಟರ್ ಹಾಗೂ ಸರ್ಕಾರಿ ಬಸ್ ನಡುವೆ ಡಿಕ್ಕಿಯಾದ ಘಟನೆ ವಿಜಯಪುರ (Vijayapura)ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಬಳಿ ನಡೆದಿದೆ. ಈ ವೇಳೆ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಅಪಘಾತ(Accident) ನಡೆದು 2 ತಾಸುಗಳ ಬಳಿಕ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿದೆ. ಈ ಹಿನ್ನಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆ್ಯಂಬುಲೆನ್ಸ್ನಲ್ಲಿ ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಇಂಡಿ ತಾಲೂಕಿನ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ; ಅಪಘಾತವೆಂದು ಬಿಂಬಿಸಲು ಮಾಡಿದ್ದರೂ ಖತರ್ನಾಕ್ ಪ್ಲ್ಯಾನ್
ಹೆಚ್ಚಿದ ಬೀದಿನಾಯಿಗಳ ಹಾವಳಿ; ವಿಷ ಇಟ್ಟು ಹತ್ಯೆ
ವಿಜಯಪುರ: ವಿಜಯಪುರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ನಾಯಿಗಳ ಹಾವಳಿಗೆ ಬೇಸತ್ತು ವಿಷ ಉಣಿಸಿ 20ಕ್ಕೂ ಅಧಿಕ ಬೀದಿ ನಾಯಿಗಳನ್ನು ಹತ್ಯೆ ಮಾಡಲಾಗಿದೆ. ಇತ್ತೀಚೆಗಷ್ಟೇ ನಗರದ ಬಡೀ ಕಮಾನ್ ಬಳಿ ಬಾಲಕರ ಮೇಲೆ ಜೊತೆಗೆ ಕಳೆದ 4 ದಿನಗಳ ಹಿಂದೆಯಷ್ಟೇ ಮಕ್ಕಳಿಗೆ ಕಚ್ಚಿತ್ತು. ಈ ಹಿನ್ನಲೆ ಪಾಲಿಕೆ ನಾಯಿ ಹಿಡಿಯಲು ಕಾರ್ಯಾಚರಣೆ ಶುರು ಮಾಡಿತ್ತು. ಇದರ ಮಧ್ಯೆ 20ಕ್ಕೂ ಹೆಚ್ಚು ನಾಯಿಗಳಿಗೆ ಮಾಂಸಾಹಾರದಲ್ಲಿ ವಿಷವಿಟ್ಟು ಬೀದಿನಾಯಿಗಳ ಹತ್ಯೆ ಮಾಡಲಾಗಿತ್ತು. ಒದ್ದಾಡುತ್ತಿದ್ದ ಕೆಲ ಬೀದಿ ನಾಯಿಗಳಿಗೆ ಸ್ಥಳೀಯರು ಚಿಕಿತ್ಸೆ ನೀಡಿದ್ದರು. ವಿಷ ಹಾಕಿದ್ದು ಪಾಲಿಕೆಯ? ಸ್ಥಳೀಯರಾ? ಎನ್ನುವ ಪ್ರಶ್ನೆ ಮೂಡಿದೆ. ಈ ಮಧ್ಯೆ ಪ್ರಾಣಿ ಪ್ರಿಯರು ವಿಷ ಹಾಕಿದವರ ಪತ್ತೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Sat, 2 December 23