ಶಾಸಕ ಎಂದರೆ ನಿಮ್ಮ ಮನೆಯ ಆಳು ಇದ್ದಂತೆ – ಮತದಾರರ ಮುಂದೆ ರಾಜುಗೌಡ ಮಾರ್ಮಿಕ ಮಾತು!
MLA ಅಂದ್ರೆ ದೊಡ್ದ ರಾಕ್ಷಸ ಅಲ್ಲ; ದೇವರಲ್ಲ. ಅವನೊಬ್ಬ ನಿಮ್ಮ ಮನೆಯ ಆಳು ಇದ್ದಂಗ್ ಅಂತ ನಾನು ಹೇಳ್ತೀನಿ. ಎಲೆಕ್ಷನ್ ಬಂದಾಗ ಕಾಲು ಮುಗಿದು, ಬಳಿಕ ನೀ ಯಾರೋ ಎನ್ನುವ ಜಾಯಮಾನ ನನ್ನದಲ್ಲ ಎಂದು ಬಿಜೆಪಿ ಅಭ್ಯರ್ಥಿ ರಾಜುಗೌಡ ಹುಣಸಗಿಯಲ್ಲಿ ಮತದಾರರ ಗಮನ ಸೆಳೆದಿದ್ದಾರೆ.
ಕ್ಷೇತ್ರದ ಶಾಸಕ ಅಂದ್ರೆ ನಿಮ್ಮ ಮನೆಯ ಆಳು ಇದ್ದಂತೆ. ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿ. ನಾನು ನಿಮ್ಮ ಮನೆಯ ಆಳಿನಂತೆ ಕೆಲಸ ಮಾಡುತ್ತೇನೆ ಎಂದು ಯಾದಗಿರಿ ಜಿಲ್ಲೆ ಹುಣಸಗಿಯಲ್ಲಿ ರಾಜುಗೌಡ ಹೇಳಿದ್ದಾರೆ. ಅಂದಹಾಗೆ ಕಳೆದ ಬಾರಿ ಪರಾಜಿತಗೊಂಡಿದ್ದ ರಾಜುಗೌಡ ಈ ಬಾರಿ ಸುರಪುರ ಕ್ಷೇತ್ರದ (Surpur Assembly Constituency) ಬಿಜೆಪಿ ಅಭ್ಯರ್ಥಿಯಾಗಿ (BJP) ಮತ್ತೆ ಕಣಕ್ಕೆ ಇಳಿದಿದ್ದಾರೆ. ಈ ಮಧ್ಯೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವವರಿಗೆ ಅವರು ಟಾಂಗ್ ನೀಡಿದರು. ಬಹಳಷ್ಟು ಜನ ದುಡ್ಡಿಗಾಗಿ ಬ್ಲ್ಯಾಕ್ಮೇಲ್ ಮಾಡ್ತಿದ್ದರು. ಇಷ್ಟು ದುಡ್ಡು ಕೊಟ್ರೆ ನಿಮ್ಮ ಪಕ್ಷದಲ್ಲೇ ಇರ್ತೇನೆ ಅಂದಿದ್ರು. ಬೇಡಾ ನೀವು ಹೋಗಿ ಎಂದು ನಾನೇ ಅವರಿಗೆಲ್ಲಾ ಹೇಳಿದೆ. ಹಾರ ಶಾಲು ಹಾಕಿ ಕೈಮುಗಿದು ಹೇಳಿದ್ದೇನೆ ಬಿಜೆಪಿ ಬಿಟ್ಟು ಹೋಗಿ ಎಂದು. ಇಷ್ಟು ದಿನ ಬಹಳ ಜೀವ ಹಿಂಡಿದ್ದೀರಾ ಈಗ ಸಾಕು ಎಂದೂ ಹೇಳಿದ್ದೇನೆ ಎಂದು ರಾಜುಗೌಡ ಮಾರ್ಮಿಕವಾಗಿ ಹೇಳಿದ್ದಾರೆ. (Surpur Assembly bypoll)
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕೆಲವರು MLA ಗೆ ಕಾಲು ಮುಗಿದೇ ಜೀವನ ಮಾಡ್ಬೇಕು ಅಂತಾರೆ. MLA ಅಂದ್ರೆ ದೊಡ್ದ ರಾಕ್ಷಸ ಅಲ್ಲ; ದೇವರಲ್ಲ. ಅವನೊಬ್ಬ ನಿಮ್ಮ ಮನೆಯ ಆಳು ಇದ್ದಂಗ್ ಅಂತ ನಾನು ಹೇಳ್ತೀನಿ. ಎಲೆಕ್ಷನ್ ಬಂದಾಗ ಕಾಲು ಮುಗಿದು, ಬಳಿಕ ನೀ ಯಾರೋ ಎನ್ನುವ ಜಾಯಮಾನ ನನ್ನದಲ್ಲ ಎಂದು ಮತದಾರರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಸುರಪುರದಲ್ಲಿ ಅನುಕಂಪ ಅಲೆ: ಶಾಸಕ ಪುತ್ರ ಅಥವಾ ಸೋತ ಬಿಜೆಪಿ ಅಭ್ಯರ್ಥಿ -ಇವರಿಬ್ಬರಲ್ಲಿ ಮತದಾರನ ಒಲವು ಯಾರತ್ತ?
2004 ರ ಚುನಾವಣೆ ಪ್ರಚಾರದ ವೇಳೆ ವಾಹನಗಳಿಗೆ ಡಿಸೇಲ್ ಹಾಕಿಸಲು ನನ್ನ ಬಳಿ ದುಡ್ಡು ಇರಲಿಲ್ಲ. ತಂದೆಯವರು ನೀಡಿದ ತಮ್ಮ ನಿವೃತ್ತಿ ಹಣವನ್ನ ಖರ್ಚು ಮಾಡಿ ಚುನಾವಣೆ ಮಾಡಿದ್ದೇನೆ. ಹಣ ಖರ್ಚು ಮಾಡದೆ ಆಗಲೇ ಗೆದ್ದಿದ್ದೇನೆ. ಆದ್ರೆ 2023 ರಲ್ಲಿ ಅತೀ ಹೆಚ್ಚು ಹಣ ಖರ್ಚು ಮಾಡಿಯೂ ಸೋತಿದ್ದೇನೆ. ಆದರೆ ಜನ ದುಡ್ಡಿಗಾಗಿ ಓಟ್ ಹಾಕಲ್ಲ ಅಂತ ಈಗ ಗೊತ್ತಾಗಿದೆ ಎಂದು ರಾಜುಗೌಡ ತಮ್ಮ ಅನುಭವವನ್ನು ಹಂಚಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Sat, 30 March 24